ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ | ಜನರಿಲ್ಲದೇ ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ | ಗುರುಮಠಕಲ್ ನಿಂದ ಯಾದಗಿರಿಗೆ 80ರೂ. ವಸೂಲಿ | ಜನರ ತಕರಾರು

ಯಾದಗಿರಿ: ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಷ್ಕರದ ಬಿಸಿ ಗಡಿ ಜಿಲ್ಲೆಯ ಜನರಿಗೆ ಮುಟ್ಟಿದೆ. ಮುಂಗಡವಾಗಿ ರೈಲು ಪ್ರಯಾಣ, ಆಸ್ಪತ್ರೆ ಸೇರಿದಂತೆ ಹಲವು ಕಾರ್ಯಗಳಿಗೆ ತೆರಳಬೇಕಿರುವ ಜನರು ಪರಿತಪಿಸುವಂತಾಗಿದೆ.

ಗಡಿ ತಾಲೂಕು ಗುರುಮಠಕಲ್ ದಿಂದ ಯಾದಗಿರಿಗೆ ಸಾಮಾನ್ಯವಾಗಿ 50ರೂ. ಒಳಗೆ ಟಿಕೇಟ್ ದರ ಇದ್ದು, ಸಾರಿಗೆ ಬಸ್ ಬಂದ್ ಆಗಿರುವುದನ್ನು ಬಂಡವಾಳ ಮಾಡಿಕೊಂಡು ಖಾಸಗಿ ವಾಹನಗಳ ಚಾಲಕರು ಬಸ್ ನಿಲ್ದಾಣದಲ್ಲಿಯೇ ಖಾಸಗಿ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಹೆಚ್ಚಿನ ಹಣ ಪೀಕುತ್ತಿರುವುದು ಕಂಡು ಬಂತು.

ಈ ಬಗ್ಗೆ ಪ್ರಯಾಣಿಕರು ಹೆಚ್ಚಿನ ಹಣ ನೀಡಲು ಸಹಜವಾಗಿಯೇ ನಿರಾಕರಿಸಿದರೇ, ಪ್ರಯಾಣಿಕರನ್ನೇ ದಬಾಯಿಸಿ, ಹೋಗೊದಿದ್ದರೆ ಹೋಗು, ಎಲ್ಲರೂ ಹೋಗುತ್ತಿಲ್ಲವೇ ಎಂದು ಹೆದರಿಸಿ ಖಾಸಗಿ ವಾಹನಗಳ ಹತ್ತಿಸುತ್ತಿರುವುದು ಕಂಡು ಬಂತು.ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ಬಂದ್ ಆಗುವ ಸುದ್ದಿ ತಿಳಿದು ಹೆಚ್ಚಿನ ಜನರು ಪ್ರಯಾಣ ಮುಂದೆ ಹಾಕಿದ್ದಾರೆ. ಹಾಗಾಗಿ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.

ಇನ್ನು ಯಾದಗಿರಿ, ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದೆ ತೆಲಂಗಾಣದ ಸಾರಿಗೆ ವಾಹನಗಳು ಸೇವೆ ನೀಡುವುದು ಕಂಡು ಬಂತು.ಅಮಾಯಕರಿಂದ ವಸೂಲಿ ತಡೆಯುವವರಾರು : ಸಾರಿಗೆ ಬಸ್ ಗಳು ಬಂದ್  ಆಗಿದ್ದರಿಂದ ಗುರುಮಠಕಲ್ ದಿಂದ ಯಾದಗಿರಿಗೆ 80ರೂ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತದೆ ಇದನ್ನು ತಕ್ಷಣ ತಡೆಯಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರೈಟ್ ರೈಟ್… : ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಕರೆ ನೀಡಿದ ಮುಷ್ಕರಕ್ಕೆ ಸಂಜೆ ತೆರೆಬಿದ್ದಿದೆ. ಸಂಜೆಯಾಗುತ್ತಲೇ ಸಾರಿಗೆ ಇಲಾಖೆ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರನ್ನು ಬಸ್ ಹತ್ತಿಸಿಕೊಂಡು ರೈಟ್ ರೈಟ್ ಎಂದು ಸೇವೆ ಆರಂಭಿಸಿದರು. ಜನರು ಸಾರಿಗೆ ವಾಹನದಲ್ಲಿ ಜನ ಪ್ರಯಾಣಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!