ಯಾದಗಿರಿ: ಯಾದಗಿರಿ ಧ್ವನಿ ಡಿಜಿಟಲ್ ಪೋರ್ಟಲ್ ಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಶುಭ ಹಾರೈಸಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭೇಟಿಯಾದ ಸಂಪಾದಕ ಅನೀಲ ಬಸೂದೆ ಅವರೊಂದಿಗೆ ಮಾತನಾಡಿ, ಮಾಧ್ಯಮ ಲೋಕದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಸಂತೋಷದ ವಿಷಯ ಎಂದರು.
ಡಿಜಿಟಲ್ ಮಾಧ್ಯಮ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದರು. ಇದೇ ವೇಳೆ ಅಭಿನಂದನೆ ತಿಳಿಸಿದರು.
ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ವರ್ಷ ಕಾರ್ಯನಿರ್ವಹಿಸಿದ ಅನುಭವಿ ಪತ್ರಕರ್ತ ಇದನ್ನು ಆರಂಭಿಸಿರುವುದು ಪಾರದರ್ಶಕ ವರದಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ಹಿರಿಯ ಮುಖಂಡ ಶುಭಾಶ್ಚಂದ್ರ ಕಟಕಟೆ, ಜಿ.ತಮ್ಮಣ್ಣ, ಶರಣು ಆವಂಟಿ, ಮಲ್ಲಿಕಾರ್ಜುನ ಅರುಣಿ, ಸುರೇಶ್ ಚಂಡರಕಿ, ಜ್ಞಾನೇಶ್ವರ ರೆಡ್ಡಿ, ಸಿರಾಜುದ್ದೀನ್ ಚಿಂತಕುಂಟಿ ಇತರರಿದ್ದರು.