ಪಟ್ಟಣದ ಗಾಂಧಿ ಮೈದಾನದಿಂದ ಆರಂಭವಾದ ಪ್ರತಿಭಟನೆ | ಬಸವೇಶ್ವರ ವೃತ್ತದಲ್ಲಿ ಸಮಾರೋಪ | ಕಾಂಗ್ರೆಸ್ ಕಾರ್ಯಕರ್ತರು ಭಾಗಿ
ಗುರುಮಠಕಲ್ : ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು. ಈ ಚಿಂತನೆಯ ಮೇಲೆ ಜೀವ ತಳೆದದ್ದೇ ಮನರೇಗಾ ಯೋಜನೆಯಾಗಿದೆ. ಆದರೇ ಕೇಂದ್ರ ಸರ್ಕಾರ ಯೋಜನೆ ಹೆಸರು ಮಾತ್ರ ಬದಲಿಸಿಲ್ಲ ಆರ್ಥಿಕತೆಯನ್ನೆ ಬುಡಮೇಲು ಮಾಡಲು ಹೋರಟಿದೆ ಎಂದು ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಆರೋಪಿಸಿದ್ದಾರೆ.
ಗುರುಮಠಕಲ್ ಪಟ್ಟಣದಲ್ಲಿ 2 ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು ಮನರೇಗಾ ಯೋಜನೆಯ ಮೂಲ ಆಶಯ.
ಬಿಜೆಪಿ ಸರ್ಕಾರ ಕೇವಲ ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆ ರದ್ದು ಮಾಡಿರುವುದಲ್ಲ, ಬದಲಿಗೆ ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಅಳಿಸಿ ಹಾಕಲು ಗಾಂಧಿ ಎಂಬುದು ಬರಿ ಹೆಸರಲ್ಲ, ಅನ್ಯಾಯ – ಅಸತ್ಯಗಳ ವಿರುದ್ಧದ ಹೋರಾಟಕ್ಕೆ ಕೋಟ್ಯಂತರ ಭಾರತೀಯರಿಗೆ ಇಂದಿಗೂ ಪ್ರೇರಕ ಶಕ್ತಿಯಾಗಿದೆ. ಮುಂದೆಯೂ ಗಾಂಧಿಯೇ ಈ ದೇಶದ ಆದರ್ಶ ಮತ್ತು ಅಸ್ಮಿತೆ ಎಂದವರು ಬೇಡವೇ ಬೇಡ ರಾಮ್ ಜಿ ನಮಗೆ ಬೇಕು ಗಾಂಧಿ ಎಂದು ಘೋಷಣೆಗಳನ್ನು ಕೂಗಿದರು.
ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪೂರ, ರಾಜಗೋಪಾಲರೆಡ್ಡಿ, ಸಾಯಬಣ್ಣ ಬೋರಬಂಡ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ನಿರಂಜನರೆಡ್ಡಿ ಸೈದಾಪುರ, ಶರಣಪ್ಪ ಮಾನೇಗಾರ ಮಾತನಾಡಿದರು. ಪ್ರಮುಖರಾದ ಚಾಂದಪಾಷಾ, ಬಸವರಾಜ ದಳಪತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಪಲ್ಲಾ, ದಶರಥರಾವ ಧಡಂಗೆ, ವಿಜಯ ನೀರಟಿ, ಆನಂದ ಯದ್ಲಾಪೂರ, ಸಂಜೀವ ಚಂದಾಪುರ, ಸಾಯಬಣ್ಣ ಹೂಗಾರ, ಮೈನೋದ್ದೀನ್, ವಸಂತ ಹಬೀಬ್, ಆಂಜನೇಯ ರಾಂಪೂರ, ಚಿದಾನಂದಪ್ಪ, ಎಸ್. ಬಾಬಾ, ಆನಂದ್ , ತಿಮ್ಮಾ ರೆಡ್ಡಿ , ಸುದರ್ಶನ ಪಾಟೀಲ್, ಬಾಬು ತಲಾರಿ , ಅಕ್ತರ್ ಪ್ಯಾರೆ, ಯಶವಂತ ಚೌದರಿ, ಕಾಶಪ್ಪ , ಅಶೋಕ್ ಶನಿವಾರಂ, ಭೀಮಶಪ್ಪ, ಯುನೂಸ್ ಶೇಕ್, ಸರೋಜಾ , ಶಾಂತಮ್ಮ ಇತರರು ಇದ್ದರು.
