ವಿಶೇಷ ಪ್ರಕರಣ ಪರಿಗಣಿಸಿ 25 ಲಕ್ಷ ಪರಿಹಾರ ನೀಡಲು ಒತ್ತಾಯ
ಗುರುಮಠಕಲ್: ಹತ್ತಿ ಕೀಳಲು ಹೋಗಿ ಜೀಪ್ ಪಲ್ಟಿಯಾಗಿ ಮೃತಪಟ್ಟ ಯುವತಿ ಪದವಿಧರೆಯಾಗಿದ್ದು, ಬಡತನ, ನಿರುದ್ಯೋಗ ಸಮಸ್ಯೆಯಿಂದಾಗಿ ಹತ್ತಿ ಕೀಳಲು ಹೋಗಿ ಅಪಘಾತದಲ್ಲಿ ಮೃತಪಟ್ಟ ಯುವತಿ ಮೊಗಲಮ್ಮ(ಬುಜ್ಜಮ್ಮ)ಳ ಪ್ರಕರಣ ವಿಶೇಷವಾಗಿ ಪರಿಗಣಿಸಿ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಕೆಬಿ ವಾಸು ಒತ್ತಾಯಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಪದವಿ ಓದಿದರೂ ಯುವಕರಿಗೆ ಕೆಲಸವಿಲ್ಲ, ಗ್ರಾಮೀಣ ಭಾಗದ ಬಡವರು ಕೂಲಿ – ನಾಲಿ ಮಾಡಿ ಜೀವನ ಸಾಗಿಸುವ ಪರಿಸ್ಥಿತಿಯಿದೆ.
ಅತೀ ಹಿಂದುಳಿದ ಗುರುಮಠಕಲ್, ಸೇಡಂ ತಾಲೂಕಿನ ಜನರು ಉದ್ಯೋಗ ಅರಿಸಿ ಗುಳೆ ಹೋಗುವ ಜನರಿದ್ದಾರೆ. ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗುರುಮಠಕಲ್ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.
ಸೇಡಂ ಶಾಸಕರು ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಕ್ಷೇತ್ರದ ಯುವತಿ ಸಾವನ್ನಪ್ಪಿದ್ದು ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.