ಯಾದಗಿರಿ : ನಾರಾಯಣಪುರ ಆಣೆಕಟ್ಟಿನ ಅಡಿಯಲ್ಲಿ ಬರುವ ಜೆ.ಬಿ.ಸಿ. ವೃತ್ತದಡಿ ಬರುವ ಕಾಲುವೆ ಜಾಲದ ಅಚ್ಚುಕಟ್ಟು ಪ್ರದೇಶಕ್ಕೆ 2024-25ನೇ ಸಾಲಿನ ಮುಂಗಾರು ಹಂಗಾಮಿನ ಕಾಲುವೆಗೆ ನೀರು ಹರಿಸಲಾಗುವುದು ಎಂದು ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜೆ.ಬಿ.ಸಿ ವೃತ್ತ ಅಧೀಕ್ಷಕ ಅಭಿಯಂತರರು ಲಕ್ಷ್ಮಣ ಎಂ.ನಾಯಕ ತಿಳಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಾಜರಿದ್ದ ಆಹ್ವಾನಿತರು, ಎಲ್ಲಾ ಅಧಿಕಾರಿ ಸದಸ್ಯರು ಹಾಗೂ ವಿಶೇಷ ಆಹ್ವಾನಿತರೊಂದಿಗೆ ಸುದಿರ್ಘವಾಗಿ ಚರ್ಚಿಸಿದ ನಂತರ ಎರಡು ಜಲಾಶಯಗಳಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ನೀರು ಸಂಗ್ರಹವಾಗಿರುವದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಎಲ್ಲಾ ಕಾಲುವೆಗಳಲ್ಲಿ 2024ರ ಜುಲೈ 17ರ ಬೆಳಿಗ್ಗೆಯಿಂದಲೇ ನೀರು ಹರಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು.

ಎರಡು ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆ ಹಾಗೂ ನೀರಿನ ಒಳ ಹರಿವನ್ನು ಗಮನಿಸಿ ವಾರಾ-ಬಂದಿ ಪದ್ದತಿ ಮಾಡುವ ಪ್ರಸಂಗ ಬಂದಲ್ಲಿ ಮಾನ್ಯ ಅಧ್ಯಕ್ಷರೊಂದಿಗೆ ಚರ್ಚಿಸಿ ವಾರಾ-ಬಂದಿ ಅನುಸರಿಸುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾದ ಹಿನ್ನೆಲೆಯಲ್ಲಿ 2024ರ ನವೆಂಬರ್ 13ರ ವರೆಗೆ ನೀರು ಹರಿಸಬೇಕಿದೆ.

ಪ್ರಸ್ತುತ ಆಲಮಟ್ಟಿ ಜಲಾಶಯಕ್ಕೆ ಸುಮಾರು 21000 ಕ್ಯೂಸೆಕ್ಸ ಒಳಹರಿವು ಇದ್ದು, ಒಳಹರಿವು ಕಡಿಮೆಯಾದಲ್ಲಿ ಹಿಂಗಾರು ಹಂಗಾಮಿನ ಅವಧಿಗೂ ಸಹ ನೀರಿನ ಸಂಗ್ರಹವನ್ನು ಕಾಯ್ದಿರಿಸಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಮುಂಗಾರು ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ಚಾಲೂ-ಬಂದ ಪದ್ದತಿ ಅನುಸರಿಸಿ ನಾರಾಯಣಪೂರ ಜಲಾಶಯದಡಿಯಲ್ಲಿನ ಎಡದಂಡೆ ಕಾಲುವೆಯ ಜೆ.ಬಿ.ಸಿ ವೃತ್ತ, ಭೀಮರಾಯನಗುಡಿ ಕಛೇರಿ ಅಡಿಯಲ್ಲಿ ಬರುವ ಶಹಾಪೂರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಮತ್ತು ಮುಡಬಾಳ ಶಾಖಾ ಕಾಲುವೆಯ ಕಾಲುವೆ ಜಾಲಗಳಿಗೆ ನೀರು ಹರಿಸಲಾಗುವುದು.

ರೈತಬಾಂದವರು ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಹಾಗೂ ಈ ದಿಶೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕಾರ ನೀಡಲು ಕೋರಿದ್ದಾರೆ.

“ಜೀವ ಜಲ ಅತೀ ಅಮೂಲ್ಯ ಅದನ್ನು ಪೋಲು ಮಾಡಬೇಡಿ”

 

Spread the love

Leave a Reply

Your email address will not be published. Required fields are marked *

error: Content is protected !!