ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ನಸಲವಾಯಿ ಗ್ರಾಮದ ತ್ರೀಶಾ(19) ಕಾಣೆಯಾಗಿದ್ದಾಳೆ.
ಇದೇ 2024ರ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಬಿ.ಎ ಮೊದಲ ಸೆಮಿಸ್ಟರಿನ ಪರೀಕ್ಷೆ ಮುಗಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಹೋದವಳು ಸಂಜೆ 5 ಗಂಟೆಯದರು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ಪಾಲಕರು ಸೈದಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅ.22ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಸೈದಾಪೂರ ಪೊಲೀಸ್ ಠಾಣೆ ಮೋಹನರೆಡ್ಡಿ ಹೆಚ್.ಸಿ ತಿಳಿಸಿದ್ದಾರೆ.
ಚಹರೆ ಪಟ್ಟಿ: ಬಿ.ಎ ಮೊದಲ ಸೆಮಿಸ್ಟರ್ ಓದಿದ್ದು, 19 ವರ್ಷ ಇದ್ದು, ಎತ್ತರ 4 ಫೀಟ್ 8 ಇಂಚು ಇದ್ದು, ಬಣ್ಣ ಸಾದಾರಣ ಮೈಕಟ್ಟು ಸಾದಾರಣ ಗೋದಿ ಮೈಬಣ್ಣ, ದುಂಡನೆಯ ಮುಖ, ದುಂಡನೆ (ಮೊಂಡ) ಮೂಗು, ಬಟ್ಟೆಗಳು ಹೂಗಳ ಡಿಜೈನುಳ್ಳ ಹಸಿರು ಬಣ್ಣದ ಟಾಪ್, ಕಡುಗೆಂಪು ಬಣ್ಣದ ಲೆಗ್ಗಿನ್ಸ್ ಧರಿಸಿರುತ್ತಾಳೆ. ಕನ್ನಡ ಮತ್ತು ತೆಲುಗು ಮಾತಾನಾಡುತ್ತಾಳೆ. ಯುವತಿ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸೈದಾಪೂರ ಪೊಲೀಸ್ ಠಾಣೆ ದೂ.ಸಂ.08473224233, ಸೈದಾಪೂರ ಪೊಲೀಸ್ ಠಾಣೆ ಪಿ.ಐ ಮೊ.ನಂ.9480803582ಗೆ ಕರೆ ಮಾಡಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.