ನೀವು ಯಾದಗಿರಿ ಜಿಲ್ಲೆಯವರಾಗಿ ನಿಮ್ಮೂರಿಗೆ  ಬಸ್ ಸಮಸ್ಯೆ ಯಾಗುತ್ತಿದೆಯಾ? ಹಾಗಿದ್ದರೆ ಡಿ.2 ರಂದು ನೇರವಾಗಿ ಫೋನ್ ಮೂಲಕ ಅಧಿಕಾರಿಗಳಿಗೆ ನಿಮ್ಮ ಸಮಸ್ಯೆಯನ್ನು ಹೇಳಿ ಪರಿಹಾರ ಕಂಡುಕೊಳ್ಳಬಹುದು…

ಯಾದಗಿರಿ : ಗಡಿ ಜಿಲ್ಲೆಯ ಸಾರಿಗೆ ಸಮಸ್ಯೆ ಆಲಿಸಲು ಡಿಸೆಂಬರ್ 2 ರಂದು “ನೇರ ಫೋನ್ ಇನ್“ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಂಟಾಗುವ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿ ತಿಂಗಳು ಮೊದಲನೇ ಸೋಮವಾರ “ನೇರ ಫೋನ್ ಇನ್“ ಕಾರ್ಯಕ್ರಮವನ್ನ ಆಯೋಜಿಸಲು  ಕಕರಸಾ ನಿಗಮ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ.

ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇರುವ ಸಾರಿಗೆ ಸಮಸ್ಯೆಗಳ ಕುರಿತು ಕ.ಕ.ರ.ಸಾ ನಿಗಮ ಯಾದಗಿರಿ ವಿಭಾಗದಿಂದ 2024ರ ಡಿಸೆಂಬರ್ 2ರ ಸೋಮವಾರ ರಂದು ಮಧ್ಯಾಹ್ನ ಸಮಯ 3.30 ರಿಂದ 4.30ರ ವರೆಗೆ “ನೇರ ಫೋನ್ ಇನ್“ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಜನರು ಸಾರಿಗೆ ವ್ಯವಸ್ಥೆ ಕುರಿತು ಇರುವ ಸಮಸ್ಯೆಗಳನ್ನು ದೂ.ಸಂ.6366423882 ಕರೆ ಮಾಡಿ ತಿಳಿಸಿ ಪರಿಹಾರ ಕಂಡುಕೊಳ್ಳಬಹುದು.  “ನೇರ ಫೋನ್ ಇನ್“ ಕಾರ್ಯಕ್ರಮದಲ್ಲಿ ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ್ ಕುಮಾರ ಚಂದ್ರಗಿ ಅವರೇ ಜಿಲ್ಲೆಯ ಸಾರಿಗೆ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ನೇರವಾಗಿ ಮಾತನಾಡಲಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!