ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಕಾರ್ಯಕ್ರಮ
ಯಾದಗಿರಿ:ಜಿಲ್ಲಾಡಳಿತ, 69ನೇ ಕನ್ನಡ ರಾಜ್ಯೋತ್ಸವ ದಿನ ಅಂಗವಾಗಿ ಧ್ವಜಾ ರೋಹಣ ಹಾಗೂ ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನವೆಂಬರ್ 1ರ ಶುಕ್ರವಾರ ರಂದು ನಡೆಯಲಿವೆ. ಬೆಳಿಗ್ಗೆ 8.30 ಗಂಟೆಗೆ “ಕರ್ನಾಟಕ ಸಂಭ್ರಮ 50” ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆಯು ಯಾದಗಿರಿ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಮಾನ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರಿಂದ ನಡೆಯಲಿದೆ.
ಬೆಳಿಗ್ಗೆ 8.50 ಗಂಟೆಗೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣ್ಯರು, ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಮಾವೇಶ ಗೊಳ್ಳುವುದು. ಅಂದು ಬೆಳಿಗ್ಗೆ 8.55 ಗಂಟೆಗೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು.
ಬೆಳಿಗ್ಗೆ 9 ಗಂಟೆಗೆ ಮಾನ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ರಾಷ್ಟ್ರ ಗೀತೆ ಮತ್ತು ನಾಡಗೀತೆ ಕಾರ್ಯಕ್ರಮ ನೆರವೇರಿಸುವರು. ವಿವಿಧ ದಳಗಳ ಪರಿವೀಕ್ಷಣೆ ಬಳಿಕ ರಾಜ್ಯೋತ್ಸವದ ಸಂದೇಶ ನೀಡುವರು. ವಿವಿಧ ದಳಗಳಿಂದ ಪಥ ಸಂಚಲನ ಹಾಗೂ ಗೌರವ ಸ್ವೀಕರಿಸುವರು ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.