ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ ರಾಜ್ಯ ಘಟಕ ಅಧ್ಯಕ್ಷ ರಾಜಶೇಖರ ಮಾಚರ್ಲಾ ಹೇಳಿಕೆ

ರಾಯಚೂರು: ಕರ್ನಾಟಕ ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ನಿರಂತರವಾಗಿ ಒಳಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ಸರ್ಕಾರ ನ್ಯಾ. ಎಂ.ಜೆ. ಸದಾಶಿವ ಆಯೋಗ ವರದಿ ಅಂಗೀಕರಿಸಿ ಜಾರಿಗೊಳಿಸಲು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ ಮಾಚರ್ಲಾ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾನ್ಯ ಘನವೆತ್ತ ಸರ್ವೋಚ್ಛ ನ್ಯಾಯಾಲಯವು ಒಳಮಿಸಲಾತಿ ವರ್ಗೀಕರಣದ ತೀರ್ಪನ್ನು ಆಯಾ ರಾಜ್ಯದಲ್ಲಿ ಜನಸಂಖ್ಯಾವಾರು ಮೀಸಲಾತಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ತೀರ್ಪು ನೀಡಿದೆ.

ತೀರ್ಪು ಬಂದು ಸುಮಾರು 2 ತಿಂಗಳು ಕಳೆದರೂ, ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಿ ಜಾರಿ ಮಾಡುತ್ತೇವೆಂದು ಆಶಾಸ್ವಾನೆ ನೀಡಿ, ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಉಪ-ಜಾತಿಗಳ ಅಭಿವೃದ್ಧಿ ಹಿತದೃಷ್ಟಯಿಂದ ಶಿಕ್ಷಣ, ಉದ್ಯೋಗ ಇನ್ನಿತರರ ರಂಗಗಳಲ್ಲಿ ಸೌಲಭ್ಯಗಳು ಪಡೆಯುವಲ್ಲಿ ವಂಚಿತರಾಗಿರುತ್ತಾರೆ. ಹಾಗೂ ಇನ್ನೊಂದು ಕಡೆ ರಾಜ್ಯ ಸರಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ನೇಮಕಾತಿ ಪ್ರಕ್ರಿಯ ನಡೆಸಿದ್ದು ಅದನ್ನು ರದ್ದು ಮಾಡಿ ಒಳಮೀಸಲಾತಿ ಜಾರಿಯಾದ ನಂತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದು ನೇಮಕಾತಿ ಪ್ರಾಧಿಕಾರ ಮಂಡಳಿಗೆ ಆದೇಶಿಸಲು ಒತ್ತಾಯ ಮಾಡಿದ್ದಾರೆ.

ಕೂಡಲೇ ನಮ್ಮ ಒಳಮೀಸಲಾತಿ ವರ್ಗೀಕರಣವನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!