ಗುರುಮಠಕಲ್ ಅತಿಥಿ ಗೃಹದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸುದ್ದಿಗೋಷ್ಠಿ…

ಗುರುಮಠಕಲ್: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ ಸುಮಾರು 30-35 ವರ್ಷಗಳಿಂದ ರಾಜ್ಯ ಸೇರಿ ವಿವಿಧ ರಾಜ್ಯದ ಅವಕಾಶ ವಂಚಿತ ಜಾತಿಗಳು ಹೋರಾಡುತ್ತಲೇ ಇದ್ದು, ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಮೀಸಲಾತಿ ಕಲ್ಪಿಸುವುದಾಗಿ ಹೇಳಿ ಮತ ಪಡೆಯುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿಲ್ಲ ಎಂದರು.

ಚುನಾವಣೆ ವೇಳೆ ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರು ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಒಳಮೀಸಲಾತಿ ಕಲ್ಪಿಸುವ ಮಾತು ಹೇಳಿದ್ದರು, ಈವರೆಗೆ ಮಾತು ಉಳಿಸಿಕೊಳ್ಳುವ ಕಾರ್ಯವಾಗಿಲ್ಲ ಎಂದರು.

2024 ಆಗಷ್ಟ್ 1 ರಂದು, 7 ನ್ಯಾಯಾಧೀಶರ ಪೂರ್ಣಪೀಠವು ಒಳಮೀಸಲಾತಿ ನೀತಿಯು ಸಂವಿಧಾನ ಬದ್ಧವಾಗಿದೆ ಎಂದು ಹೇಳಿದ್ದಲ್ಲದೇ ಎಸ್,ಸಿ. ಮೀಸಲಾತಿಯಲ್ಲಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿತ್ತು. ಆದರೇ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು 2024ರ ಅಕ್ಟೋಬರ್ 4ರಂದು ಮಾನ್ಯ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದರಿಂದಾಗಿ ಅಡೆತಡೆಗಳು ನಿವಾರಣೆಯಾಗಿದ್ದು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶೀಘ್ರವೇ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ರಕ್ಷಣೆಗೆ ಬಿಎಸ್ಪಿ 2020ರಿಂದಲೇ ಕಾರ್ಯ ಮಾಡುತ್ತಿದೆ. ಸಂವಿಧಾನ ರಕ್ಷಣೆ ಮಾತನಾಡುವ ಕಾಂಗ್ರೆಸ್ ಅವಧಿಯಲ್ಲಿಯೇ 105 ಬಾರಿ ಸಂವಿಧಾನ ತಿದ್ದುಪಡಿಯಾಗಿದೆ. ಸರ್ಕಾರ ವಿಳಂಬ ಮಾಡದೇ  ಒಳಮೀಸಲಾತಿಗೆ ಕ್ರಮವಹಿಬೇಕು ಎಂದರು.

ಮೀಸಲಾತಿಗೆ ಒತ್ತಾಯಿಸಿ, ನ.12 ರಂದು ಸಚಿವರ ಮನೆಯ ಎದುರು ಚಳುವಳಿ ನಡೆಸಲು ನಿರ್ಣಯಿಸಲಾಗಿದೆ. ಇನ್ನು ಎರಡನೇ ಹಂತದಲ್ಲಿ ಶಾಸಕರ ಮನೆ ಎದುರು ಹೋರಾಟ ರೂಪಿಸಲಾಗುವುದು ಎಂದರು.

ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ ಮುಡಬಿ, ಆರ್.ಮುನಿಯಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು, ಜಿಲ್ಲಾಧ್ಯಕ್ಷ ಅಬ್ದುಲ್ ಕರೀಮ್ ದಾದು, ಮಹಾದೇವಪ್ಪ, ಪ್ರಕಾಶ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!