ಬೀದರ: ಪಿಎಂ ಸೂರ್ಯ ಘರ್ ಮುಕ್ತ ಬಿಜಲಿ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಸೂರ್ಯ ಘರ್ ಮುಕ್ತ ಬಿಜಲಿ ಯೋಜನೆಯು ಮನೆಗಳ ಮೇಲ್ಚಾವಣಿ ಮೇಲೆ ಸೋಲಾರ್ ರೂಫ್ ಟಾಪ್ ಸಿಸ್ಟಮ್‌ಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಡಿ ಸೌರ ಫಲಕಗಳನ್ನು ಸ್ಥಾಪಿಸಲು, ಮಾನದಂಡ ವೆಚ್ಚದ ಶೇ.60 ರಷ್ಟು ಸಹಾಯಧನ ಒದಗಿಸಲಾಗುತ್ತದೆ.
ಪ್ರಧಾನಮಂತ್ರಿ ಸೂರ್ಯ ಘರ್ ಮುಕ್ತ ಬಿಜಲಿ ಯೋಜನೆಯ ಪ್ರಯೋಜನೆಗಳ ವಿವರ : ವಿದ್ಯುತ್ ಬಿಲ್ ಕಡಿಮೆ ಮಾಡುವ ಮೂಲಕ ಉಳಿತಾಯ, ಕಡಿಮೆ ನಿರ್ವಹಣೆ ವೆಚ್ಚ, ಸಬ್ಸಿಡಿಯೊಂದಿಗೆ ಒಂದು ಬಾರಿ ಹೂಡಿಕೆ, ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ, ಜೆಸ್ಕಾಂಗೆ ವಿದ್ಯುತ್‌ನ್ನು ಮಾರಾಟ ಮಾಡುವ ಲಾಭ, ತ್ವರಿತ ಮರುಪಾವತಿ ಅವಧಿ 4-6 ವರ್ಷಗಳು, 25 ವರ್ಷಗಳ ದೀರ್ಘ ಬಾಳಿಕೆ.
ಸಹಾಯಧನದ ವಿವರ: 1 ಕಿ.ವ್ಯಾ. 30000 ರೂ., 2 ಕಿ.ವ್ಯಾ 60000 ರೂ., 3 ಕಿ.ವ್ಯಾ. 78000 ರೂ. ವರೆಗೆ ಸಹಾಯಧನ ಇರುತ್ತದೆ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ಲಿಂಕ್ WWW.pmsuryaghar.gov.in https://gescomsrtpv.in/SRTPV/ನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 1912 ಗೆ ಕರೆ ಮಾಡಿ ಅಥವಾ ಹತ್ತಿರದ ಜೆಸ್ಕಾಂ ಕಛೇರಿಗೆ ನೀಡಿ ನೀಡಿ ಮಾಹಿತಿ ಪಡೆಯಬಹುದಾಗಿದೆ.