ಯೋಧರಿಗೆ ಸಿಹಿ ತಿನಿಸಿದ ಪ್ರಧಾನ ಮಂತ್ರಿ…!
ನವದೆಹಲಿ: ಗುಜರಾತಿನ ಕಛ್ ಜಿಲ್ಲೆಯ ಭಾರತ-ಪಾಕ್ ಗಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಭಾರತೀಯ ಸೈನಿಕರೊಂದಿಗೆ ಸಂತಸದಿಂದ ದೀಪಾವಳಿ ಆಚರಿಸಿದರು.
ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ನೀತಿಗಳು ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದರು.
ಭಾರತದ ಒಂದು ಇಂಚು ಗಡಿಯಲ್ಲಿಯೂ ಸಹ ರಾಜಿ ಮಾತಿಲ್ಲ. ದೇಶದ ಭದ್ರತೆಗೆ ಸೈನಿಕರು ಎಂತಹದ್ದೇ ಪರಿಸ್ಥಿತಿ ಇರಲಿ ಹಗಲಿರುಳು ಟೊಂಕ ಕಟ್ಟಿ ನಿಂತಿದ್ದಾರೆ.
ನಮ್ಮ ಭದ್ರತಾ ಸಿಬ್ಬಂದಿ ನಿರಾಶ್ರಿತ ಸ್ಥಳಗಳಲ್ಲಿ ದೃಢವಾಗಿ ನಿಂತು ನಮ್ಮನ್ನು ರಕ್ಷಿಸುತ್ತಾರೆ. ಅವರ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ ಎಂದರು. ಈ ವೇಳೆ ಭಾರತ್ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು. BSF, ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಸೈನಿಕರು ಇದ್ದರು.