ಸೋಮವಾರದ ಮೂರು ಪರೀಕ್ಷೆಗೆ 4646 ಹಾಜರಿ, 186 ಗೈರು ಹಾಜರಿ

ಯಾದಗಿರಿ: ಮಾ.1ರಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಯ ಎರಡನೇ ದಿನವಾದ ಸೋಮವಾರವು ಸಹ ಸೂಸುತ್ರವಾಗಿ ಪರೀಕ್ಷೆ ನಡೆದಿದ್ದು, ಇಲ್ಲಿನ ಜವಾಹರ ಪಿಯುಸಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ. ಬೆಳಿಗ್ಗೆ ಭೇಟಿ ನೀಡಿದರು.

ಸೋಮವಾರ ಮೂರು ಭಾಷೆಗಳಿಗೆ ಪರೀಕ್ಷೆ ನಡೆದಿದೆ. ಪತ್ರಿಕೆಗೆ ಉತ್ತರ ಬರೆಯುತ್ತಿದ್ದ ಪರೀಕ್ಷಾರ್ಥಿಗಳ ಕೊಠಡಿಗೆ ಭೇಟಿ ನೀಡಿ ಡಿಸಿ ಅವರು ಎಲ್ಲಡೆ ಸೂಕ್ಷ್ಮವಾಗಿ ಪರಿಶೀಸಿದರು.

ವಿದ್ಯಾರ್ಥಿಗಳು ಉತ್ತರ ಬರೆಯುವುದನ್ನು ಗಮನಿಸಿದರು. ವಿದ್ಯಾರ್ಥಿಗಳಿಗೆ ಕುಡಿಯುವ‌ ನೀರು, ಬೆಳಕಿನ ವ್ಯವಸ್ಥೆ, ಫ್ಯಾನ್, ಶೌಚಾಲಯ ಹೀಗೆ ಸೂಕ್ತ ವ್ಯವಸ್ಥೆ ಮಾಡಿದ್ದರ ಬಗ್ಗೆ ಡಿಡಿಪಿಯು ಚನ್ನಬಸಪ್ಪ ಕುಳಗೇರಿ ಅವರಿಂದ ಮಾಹಿತಿ ಪಡೆದರು.

ಇಂದಿನ ವಿಷಯ ಬರೆಯಲು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ,ಗೈರು ಹಾಜರಿ ಬಗ್ಗೆಯೂ ಮಾಹಿತಿ ಪಡೆದರು. ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಾದ್ಯಂತ ಇರುವ 19 ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆ ಮತ್ತು ಪರೀಕ್ಷೆ ನಡೆಯುತ್ತಿರುವ ಬಗ್ಗೆಯೂ ಡಿಸಿ ಡಾ.ಸುಶೀಲಾ ವಿವಿಧ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸೋಮವಾರದ ಮೂರು ವಿಷಯಗಳಿಗೆ ಒಟ್ಟು 4802 ನೊಂದಣಿಯಾಗಿತ್ತು, 4646 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 156 ಜನರು ಗೈರು.

ಗಣಿತ ವಿಷಯದ ಪರೀಕ್ಷೆಗೆ 3623 ಮಕ್ಕಳು ಹಾಜರಾಗಿದ್ದು, 86 ಜನ ಗೈರಾಗಿದ್ದಾರೆ. ಬಿಜೆನೆಸ್ ಸ್ಟಡಿ ವಿಷಯಕ್ಕೆ 926 ಹಾಜರಾಗಿದ್ದರೇ 56 ಜನ ಗೈರಾಗಿದ್ದಾರೆ.

ಶಿಕ್ಷಣ ಶಾಸ್ತ್ರ ವಿಷಯಕ್ಕೆ 97 ಹಾಜರಾಗಿದ್ದು, 14 ವಿದ್ಯಾರ್ಥಿಗಳು ಗೈರು ಆಗಿದ್ದಾರೆಂದು ಡಿಡಿಪಿಯು ಚನ್ನಬಸಪ್ಪ ಕುಳಗೇರಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!