ಪುಟಪಾಕ್‌ನಲ್ಲಿ ಜೆಡಿಎಸ್ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಶಾಸಕ ಶರಣಗೌಡ ಕಂದಕೂರ ಸಾಂತ್ವನ
ಗುರುಮಠಕಲ್: ಜೀವನದಲ್ಲಿ ಹುಟ್ಟು-ಸಾವು ಸಾಮಾನ್ಯ. ಇದರ ಮದ್ಯೆ ಮಾಡಿದ ಒಳ್ಳೆಯ ಕಾರ್ಯಗಳೇ ನಮ್ಮ ಹೆಸರು ಉಳಿಯುವಂತೆ ಮಾಡುತ್ತವೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಪುಟಪಾಕ್ ಗ್ರಾಮದ ಜೆಡಿಎಸ್ ಕಾರ್ಯಕರ್ತ ವೆಂಕಟಪ್ಪ ಮನೆಗೆ ಭೇಟಿ ನೀಡಿ ಇತ್ತೀಚೆಗೆ ಅವರ ತಂದೆ ಸಾವನ್ನಪ್ಪಿದ್ದಕ್ಕೆ ಸಾಂತ್ವನ ಹೇಳಿದರು.
ಮಾನವನಾಗಿ ಜನ್ಮ ಪಡೆದು ಸಾರ್ಥಕ ಜೀವನ ನಡೆಸಬೇಕು. ಸಾಕಷ್ಟು ಆಸೆ, ಆಕಾಂಕ್ಷೆಗಳಿರುತ್ತದೆ. ಎಲ್ಲರೂ ಎಲ್ಲವನ್ನು ಪಡೆಯಲು ಆಗಲ್ಲ ಎಂದು ನುಡಿದರು.
ಈ ವೇಳೆ ಹಿರಿಯ ಮುಖಂಡ ಶುಭಾಷಂದ ಕಟಕಟೆ ಹೊನಗೇರ, ಜಿ.ತಮ್ಮಣ್ಣ, ಶರಣು ಆವುಂಟಿ, ಪಾಪಣ್ಣ ಮನ್ನೆ, ಅಯ್ಯುಬಮೀಯಾ, ಮಲ್ಲಿಕಾರ್ಜುನ ಅರುಣಿ, ಶಿವಾರೆಡ್ಡಿ ಮಲ್ಲಾಪುರ, ಸಿರಾಜುದ್ದಿನ್ ಚಿಂತಕುಂಟಿ,ಮಲ್ಲಿಕಾರ್ಜುನ ಆಡಕಿ, ಜ್ಞಾನೇಶ್ವರರೆಡ್ಡಿ, ಸುರೇಶ ಆವುಂಟಿ, ಮೋಹನರೆಡ್ಡಿ ಸೇರಿ ಜೆಡಿಎಸ್ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.