ದೇಹವನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನ | ಮನಸ್ಸು ಮತ್ತು ಪ್ರಪಂಚ ಸರಿಯಾಗಿ ಅರ್ಥ ಮಾಡಿಕೊಳ್ಳಲು ಮನೋ ವಿಜ್ಞಾನದ ಸಹಾಯ ಅಗತ್ಯ 


ರಾಯಚೂರು: ಬಾಲ್ಯದಿಂದ ಯೌವನಕ್ಕೆ ಕಾಲಿಡುವ ತರುಣಾವಸ್ಥೆಯಲ್ಲಿ ದೇಹ ಮತ್ತು ಮನಸ್ಸು ಎರಡೂ ಸ್ಥಿತ್ಯಂತರಾವಸ್ಥೆಯಲ್ಲಿರುತ್ತವೆ. ಈ ನೈಸರ್ಗಿಕ ಬದಲಾವಣೆಯ ಅವಸ್ಥೆಯಲ್ಲಿರುವ ತರುಣರಿಗೆ ಸಕಾಲದಲ್ಲಿ  ಸರಿಯಾದ ಜ್ಞಾನ ಮತ್ತು ಮಾರ್ಗದರ್ಶನ ಸಿಕ್ಕರೆ ಅವರು ಪ್ರಜ್ಞಾವಂತ ಯುವಕರಾಗಿ ರೂಪುಗೊಳ್ಳುತ್ತಾರೆ. ಸ್ವಸ್ತ್ಯ ಸಮಾಜದ ನಿರ್ಮಾಣಕ್ಕೆ ಈ ಹಂತದಲ್ಲಿರುವ ಮಕ್ಕಳಿಗೆ ಮಾರ್ಗದರ್ಶನ ಜೊತಗೆ ಅಗತ್ಯ ಶಿಕ್ಷಣ ನೀಡಬೇಕಿರುವುದು ಅತ್ಯಂತ ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದಲ್ಲಿ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳ ಸಹಾಯಕ್ಕಾಗಿ ಮಾನೋ ಸಾಮಾಜಿಕ ಸಲಹೆಗಾರರು/ಆಪ್ತ ಸಮಾಲೋಚಕರನ್ನು ನೇಮಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವಕರ‍್ಸ್ ವೆಲ್‌ಫೇರ್ ಅಸೋಶಿಯೇಷನ್‌ನ ಜಿಲ್ಲಾಧ್ಯಕ್ಷ ಬಜಾರಪ್ಪ ಗೋನ್ವಾರ್  ಒತ್ತಾಯಿಸಿದ್ದಾರೆ.

ಆಗಷ್ಟ್ 11ರಿಂದ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ ಈ ಕುರಿತು ಮುಖ್ಯಮಂತ್ರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚುತ್ತಿದ್ದು, ಅಪ್ರಾಪ್ತ ಗರ್ಭಿಣಿ ಪ್ರಕರಣಗಳು ಹಾಗೂ ಫೋಕ್ಸೋ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಆನ್‌ಲೈನ್ ಗೇಮ್‌ಗಳು, ಬೆಟ್ಟಿಂಗ್, ಮೊಬೈಲ್ ಅಡಿಕ್ಷನ್ ಸೇರಿದಂತೆ ಹೊಸ-ಹೊಸ ಸಮಸ್ಯೆಗಳು ಹೆಚ್ಚಿದ್ದು, ಪೋಷಕರು-ಶಿಕ್ಷಕರ ಮೇಲೆ ಹಲ್ಲೆ ಸೇರಿದಂತೆ ಹೊಸ ಥರದ ಬಾಲಾಪರಾಧಗಳೂ ಹೆಚ್ಚುತ್ತಿವೆ.

ಇದೆಲ್ಲದರ ಹಿನ್ನೆಲೆಯಲ್ಲಿ ಮಕ್ಕಳಿಗೆ ಜೀವನ ಕೌಶಲ್ಯ ಶಿಕ್ಷಣ ನೀಡಲು ಹಾಗೂ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆ ನೀಡಲು ವೃತ್ತಿ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಸಂಬಂಧಿಸಿದ ಕ್ಷೇತ್ರದಲ್ಲಿ ಈಗಾಗಲೇ ಅನುಭವ ಇರುವ ವೃತ್ತಿ ನಿರತರು ಹಾಗೂ ಈ ವಿಷಯಗಳನ್ನು ಪಠ್ಯದ ಜೊತಗೆ ಪ್ರಾಯೋಗಿಕವಾ ಗಿಕವಾಗಿ ಕಲಿತಿರುವ ಸಮಾಜಕಾರ್ಯ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರುವವರಿಗೆ ಇಂತಹ ಅವಕಾಶಗಳನ್ನು ನೀಡಿದರೆ, ಮಕ್ಕಳಲ್ಲಿ ಮಾನಸಿಕ ತೊಂದರೆಗಳ ನಿವಾರಣೆ, ಪೋಷಕರಲ್ಲಿ ಒತ್ತಡಗಳ ನಿರ್ವಹಣೆ, ಆತ್ಮಹತ್ಯೆಗಳ ದುಷ್ಪರಿಣಾಮ, ದುರಭ್ಯಾಸಗಳಿಂದ ಮುಕ್ತಿ ಸೇರಿದಂತೆ ಅನೇಕ ಅವಶ್ಯ ವಿಷಯಗಳ ಕುರಿತು ಶಿಕ್ಷಣ ಹಾಗೂ ಜಾಗೃತಿ ಹೆಚ್ಚಿಸುವುದು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಆದಿವೇಶನದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡು ಮಾನೋ ಸಾಮಾಜಿಕ ಸಲಹೆಗಾರರು/ಆಪ್ತ ಸಮಾಲೋಚಕರನ್ನು ನೇಮಿಸುವ ಕೆಲಸ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!