ನವೆಂಬರ್ 8 ರಂದು ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಹಿನ್ನೆಲೆ ವಿಶೇಷ ಲೇಖನದ ಮೂಲಕ ಮಹಾರಾಜರ ಚರಿತ್ರೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ…

ಘೋರ ತಪಸ್ಸಿನಿಂದ ಗುರು ದತ್ತಾತ್ರೇಯರಿಂದ ಸಹಸ್ತ್ರ ಬಾಹು ವರ..!

ಗುರುಮಠಕಲ್: ಮಹಾಪರಾಕ್ರಮಿ ಶ್ರೀ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರು ಸೋಮವಂಶಿಯ ಕ್ಷತ್ರಿಯ ಸಮಾಜದ ಮೂಲ ಪುರುಷರು.

ಶ್ರೀ ಸೋಮವಂಶಿಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜವು, ಕ್ಷತ್ರೀಯ ಜನಾಂಗದ ಒಂದು ಶಾಖೆ. ಬ್ರಹ್ಮನಿಂದ ಉತ್ಪತ್ತಿಯಾಗಿ ಅತ್ರಿಋಷಿ, ನಂತರ ಸಾಗರ, ನಂತರ ಸೋಮವಂಶವಾಯಿತು ಎಂದು ಐತಿಹ್ಯಗಳಲ್ಲಿ ಉಲ್ಲೇಖವಾಗಿದೆ.

ಮಹಾರಾಜರ ಕಾಲವು ಕ್ರಿ. ಪೂ. 2600 ಅಂದರೆ ಇಂದಿನಿಂದ ಸುಮಾರು 4600 ವರ್ಷಗಳ ಹಿಂದಿ ನದ್ದು ಎಂದು ನಿಶ್ಚಯಿಸಲಾಗುತ್ತದೆ. ಕ್ಷತೀಯ ಶಬ್ದದ ಉತ್ಪತ್ತಿಯು ವೇದಗಳಲ್ಲಿ ದೊರೆಯುತ್ತದೆ.

ಆದರೆ, ಅದು ಒಂದು ಜಾತಿ ಸೂಚಕವಾಗಿರಲಿಲ್ಲ. ರಾಜ್ಯಾಡಳಿತ ಮಾಡುವವರನ್ನು ಮತ್ತು ದೇಶವನ್ನು ಸಂರಕ್ಷಿಸಲು ಕರ್ತವ್ಯ ಮಾಡುವವರು ಎಂದು ಸೂಚಿಸುತ್ತಿತ್ತು.

ಇವರು ದೇಶ ರಕ್ಷಣೆಯನ್ನು ಮಾಡುವವರಲ್ಲದೇ, ವೇದೋಕ್ತವಾದ ಧಾರ್ಮಿಕ ವಿಧಿ ವಿಧಾನಗಳನ್ನು ಸಹ ಮಾಡುವವರಾಗಿದ್ದರು. ವೇದಪೂರ್ವ ಕಾಲದಲ್ಲಿ ಕ್ಷತ್ರಿಯರಿಗೆ ಪರ್ಯಾಯ ಪದವಾಗಿ ‘ರಾಜನ್’ ಎಂಬ ಶಬ್ದದಿಂದ ಕರೆಯಲಾಗುತ್ತಿತ್ತು.

ಭಾರತದಲ್ಲಿ ಸಪ್ತ ಚಕ್ರವರ್ತಿ ರಾಜರಾಗಿದ್ದಾರೆ ಎಂದು ಹೇಳಲಾಗಿದೆ. ಈ ಏಳು ಜನ ಚಕ್ರವರ್ತಿ ಗಳಲ್ಲಿ ಸಹಸ್ತ್ರಾರ್ಜುನರು ಒಬ್ಬರಾಗಿದ್ದರು. ಅವರು ಒಬ್ಬ ಮಹಾನ್ ರಾಜರಾಗಿದ್ದು 1000 ‘ಆಶ್ವಮೇದ’ ಯಜ್ಞಗಳನ್ನು ಮಾಡಿದ್ದರು.

ಅವರ ಯಜ್ಞವೇದಿಕೆಗಳು ಶುದ್ಧ ಬಂಗಾರದಾಗಿತ್ತು ಎಂದು ಮಹಾಭಾರತ, ವಾಯುಪುರಾಣ, ಮತ್ಸಪುರಾಣ ಮೊದಲಾದ ವಿವಿಧ ಪುರಾಣ ಗ್ರಂಥಗಳಲ್ಲಿ ಅವುಗಳ ಬಗ್ಗೆ ಉತ್ಕೃಷ್ಟವಾದ ಉಲ್ಲೇಖಗಳು ದೊರೆಯುತ್ತವೆ.

ಸಹಸ್ತ್ರಾರ್ಜುನ ಮಹಾರಾಜರು ಹಲವು ವರ್ಷಗಳ ಕಾಲ ದತ್ತಾತ್ರೇಯ ಮಹಾರಾಜರ ಘೋರ ತಪಸ್ಸು ಮಾಡಿ,ಸಹಸ್ರ ಬಾಹುವಿನ ವರದಾನವನ್ನು ಪಡೆದಿದ್ದರು.

ಇವರು ದತ್ತಾತ್ರೇಯ ಮಹಾರಾಜರ ಅನುಗ್ರಹದಿಂದ ಸಾವಿರ ಕೈಗಳನ್ನು ಪಡೆದು ಮಹಾತೇಜಸ್ವಿಯಾದ ಚಕ್ರವರ್ತಿ ರಾಜನಾಗಿ ಶೋಭಿಸಿದರು. ಇವರು ತನ್ನ ಬಾಹು ಬಲದಿಂದ ಸಪ್ತ ಸಾಗರಗಳವರೆಗೆ ಹಬ್ಬಿದ ಪೃಥ್ವಿಯನ್ನು ಜಯಿಸಿದ್ದರು.

ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ್ ಮಹಾರಾಜರು ದೊಡ್ಡ ಪರಾಕ್ರಮಿಯಾಗಿದ್ದರು, ಶಾಂತಿ ಪ್ರಿಯ ರಾಜನಾಗಿದ್ದರು. ಬ್ರಾಹ್ಮಣರ ಸೇವೆಯಲ್ಲಿ ಸಂತೋಷ ಪಡುತ್ತಿದ್ದರು.

ಶರಣಾಗತರಿಗೆ ಬೇಡಿದ್ದನ್ನು ನೀಡುವ ಮಹಾದಾನಿಯಾಗಿದ್ದರು. ಇವರಿಗೆ ‘ಆಪವ’ ಮುನಿಗಳು “ನೀನು ಈ ಆಶ್ರಮವನ್ನು ಸುಟ್ಟ ಕಾರಣಕ್ಕಾಗಿ ನಿನ್ನ ತೋಳುಗಳನ್ನು ಪರಶುರಾಮನು ಯುದ್ಧದಲ್ಲಿ ಕಡೆದು ಹಾಕದೇ ಬಿಡುವುದಿಲ್ಲ” ಎಂದು ಶಾಪವನ್ನು ಕೊಟ್ಟಿದ್ದರು‌.

ಇವರು ಜಮದಾಗ್ನಿ ಋಷಿಯ ಆಶ್ರಮದಿಂದ ಕಾಮಧೇನು ಗೋಮಾತೆಯನ್ನು ಬಲವಂತವಾಗಿ ಪಡೆದಿರುವದರಿಂದ ಭಗವಾನ್ ಪರಶುರಾಮ್‌ರಿಂದ ಇಪ್ಪತ್ತೊಂದು ಸಲ ಯುದ್ಧ ಮಾಡಬೇಕಾಯಿತು.

ಅತ್ಯಂತ ಮನೋಹರವಾದ ಕಂಬಗಳಿಂದ ಕೂಡಿದ 11ನೇ ಶತಮಾನದ ಕಲಾ ಪೂರ್ಣವಾದ ಸಹಸ್ತ್ರ ಬಾಹುವಿನ ಮಂದಿರವು ಮಧ್ಯಪ್ರದೇಶದ ಗ್ವಾಲಿಯರ್ ಕೋಟೆಯಲ್ಲಿ ಒಂದು, ಅದರಂತೆ ರಾಜಸ್ಥಾನದ ನಾಗಡಾದಲ್ಲಿ ಮತ್ತೊಂದು ಇಂದಿಗೂ ನೋಡಲು ಸಿಗುತ್ತವೆ.

ಸಹಸ್ತ್ರಾರ್ಜುನ ಮಹಾರಾಜರು ಮತ್ತು ಪರಾಕ್ರಮಿ ರಾವಣನ ಮಧ್ಯೆ ಘೋರವಾದ ಯುದ್ಧ ನಡೆದು, ಆ ‘ಯುದ್ಧದಲ್ಲಿ ರಾವಣವನ್ನು ಸೋಲಿಸಿ ಬಂಧಿಸಿದರು ಎನ್ನುವದು ಇತಿಹಾಸ ಪುಟದಲ್ಲಿ ಉಲ್ಲೇಖವಾಗಿದೆ. ಇಂತಹ ಪರಾಕ್ರಮಿ, ತೇಜಸ್ವಿ, ದಾನ,ವೀರ, ಶೂರ, ಬಲಶಾಲಿ ಚಕ್ರವರ್ತಿ ರಾಜರ ವಂಶಸ್ಥರಾದ ನಾವೇ ಧನ್ಯರು.

ಲೇಖಕರು, ಶ್ರೀ ಬುಡ್ಡಪ್ಪ ಜನಾರ್ಧನ, ಉಪಾಧ್ಯಕ್ಷರು ಎಸ್.ಎಸ್.ಕೆ ಸಮಾಜ ಗುರುಮಠಕಲ್ ಜಿ.ಯಾದಗಿರಿ.

Spread the love

Leave a Reply

Your email address will not be published. Required fields are marked *

error: Content is protected !!