ಮಲಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆಯಿಂದ ಕಂಪ್ಯೂಟರ್ ತರಬೇತಿ | 3 ತಿಂಗಳು ತರಬೇತಿ ಮುಗಿಸಿದ 100 ಜನರಿಗೆ ಪ್ರಮಾಣ ಪತ್ರ ವಿತರಣೆ | ರಾಜಶ್ರೀ ಸೆಕ್ಯೂರಿಟಿ ಹೆಚ್ಓಡಿ ಪ್ರದೀಪ ಸಿಂಗ್ ಭಾಗಿ

ಸೇಡಂ(ಮಲಖೇಡ) : ಆಧುನಿಕ ವೈಜ್ಞಾನಿಕ ಯುಗದಲ್ಲಿ ಕಂಪ್ಯೂಟರ್ ಕಲಿಕೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಿಎಸ್ಆರ್ ವಿಭಾಗದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಈ ಭಾಗದಲ್ಲಿ ಕೌಶಲ್ಯ ಅಭಿವೃದ್ಧಿ, ಶಿಕ್ಷಣ, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ರಾಜಶ್ರೀ ಕಂಪನಿ ಸೆಕ್ಯೂರಿಟಿ ಹೆಚ್ಓಡಿ ಪ್ರದೀಪ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಲಖೇಡ ನಲ್ಲಿ ಅಲ್ಟ್ರಾಟೆಕ್ ಕಮ್ಯೂನಿಟಿ ವೆಲ್ಫೇರ್ ಫೌಂಡೇಶನ್ ರಾಜಶ್ರೀ ಸಿಮೆಂಟ್ ವರ್ಕ್ಸ್ ಘಟಕದಿಂದ ಮೆಟ್ರೋ ಕಂಪ್ಯೂಟರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ 3 ತಿಂಗಳ ಕಂಪ್ಯೂಟರ್ ತರಬೇತಿ ಪಡೆದ ಯುವಕ/ಯುವತಿಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಶಿಕ್ಷಣದ ಜೊತೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೌಶಲ್ಯ ಪಡೆಯಬೇಕಿದೆ. ಯುವ ಪೀಳಿಗೆ ಕೌಶಲ್ಯದಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಈ ದಿಸೆಯಲ್ಲಿ ಕಂಪ್ಯೂಟರ್ ತರಬೇತಿಯ ಲಾಭ ಪಡೆಯಲು ಕರೆ ನೀಡಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜಶೇಖರ ಪುರಾಣಿಕ್ ಮಾತನಾಡಿ, ಮಲಖೇಡ ಹಾಗೂ ಸುತ್ತಮುತ್ತಲಿನ ಗ್ರಾಮ, ತಾಂಡಗಳಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿದರು.ಈ ಭಾಗದಲ್ಲಿ ಇಂಗ್ಲಿಷ್ ಕಲಿಕೆ ಮಕ್ಕಳಿಗೆ ಕಗ್ಗಂಟಾಗಿದ್ದು, ಸರಳವಾಗಿ ಕಲಿಯಲು ವಿಶೇಷ ಕಾಳಜಿವಹಿಸಬೇಕು ಎಂದು ಸಿಮೆಂಟ್ ಕಾರ್ಖಾನೆಯವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಂಗ್ ಅವರು, ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಸ್ಥಳದಲ್ಲಿಯೇ ಭರವಸೆ ನೀಡಿದರು.

ಸಿಎಸ್ಆರ್ ವ್ಯವಸ್ಥಾಪಕ ಚೇತನ್ ವಾಘ್ಮೋರೆ ಮಾತನಾಡಿ, ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆಯಿಂದ ಕೈಗೊಂಡಿರುವ ಸಾಮಾಜಿಕ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ ಪ್ರತಿಯೊಬ್ಬರು ನೌಕರಿ ಪಡೆಯುವುದು ಪ್ರಸ್ತುತ ಕಷ್ಟದ ಕೆಲಸ. ಹಾಗಾಗಿ ಕೌಶಲ್ಯ ಕಲಿತು ಜೀವನ ಕಟ್ಟಿಕೊಳ್ಳಲು ಕಾರ್ಖಾನೆ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಸಾಕಷ್ಟು ತರಬೇತಿ ಕಾರ್ಯಕ್ರಮ ನಡೆಸುತ್ತಿದೆ ಎಂದರು.

ಪ್ರಮುಖರಾದ ಸುಂದರ ಮಂಗಾ, ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥ ಮೊಹ್ಮದ್ ಸಿರಾಜ್, ಸಿ ಎಸ್ ಆರ್ ವಿಭಾಗದ ಕಾಶಿಬಾಯಿ ಎಂ. ದಿಗ್ಗಾಂವ್ ಮಾತನಾಡಿದರು. ಶರಣಪ್ಪ ಎಂ ಗುಡಿ, ಮನಸೂರ ಖಾನ್, ಸಿಎಸ್ ಆರ್ ವಿಭಾಗದ ಸೋಮಶೇಖರ್, ಕಂಪ್ಯೂಟರ್ ನ  ತರಬೇತಿದಾರರಾದ ಮುನಿಯಮ್ಮ ಇದ್ದರು. ತರಬೇತಿ ಪಡೆದ ರಾಜೇಶ್ವರಿ, ಪ್ರಿಯಾಂಕಾ, ರಾಧಿಕಾ ಪೂಜಾರಿ ಅನಿಸಿಕೆ ವ್ಯಕ್ತ ಪಡಿಸಿದರು. ರಂಜಿತಾ ನಿಂಗಮಾರಿ, ನಿರೂಪಿಸಿದರು, ಭವಾನಿ ಸ್ವಾಗತಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!