ಮೇದಕ್ ಸ್ಟಾರ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ
ಸೇಡಂ : ಮಕ್ಕಳು ಉತ್ತಮ ಜ್ಞಾನವನ್ನು ಪಡೆಯುವ ಮೂಲಕ ಗಡಿ ಭಾಗದಲ್ಲಿ ಕೀರ್ತಿ ತರಲು ಕಾರಣವಾಗಬೇಕು ಎಂದು ಮುಖ್ಯ ಶಿಕ್ಷಕಿ ಜ್ಯೋಸ್ನ ಕರೆ ನೀಡಿದರು.
ತಾಲೂಕಿನ ಮೇದಕ್ ಗ್ರಾಮದಲ್ಲಿ ಬಾಲಯ್ಯ ಗೌಡ ರೂರಲ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಸ್ಟಾರ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ನೂತನ ವಿಷಯಗಳನ್ನು ಕಲಿಯುತ್ತಾ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ಹೆಚ್ಚಿನ ಜ್ಞಾನ ವೃದ್ಧಿಸಿಕೊಳ್ಳಲು ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಲಕರು ಸಹ ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಕ್ಕಳಿಗೆ ಮೊಬೈಲ್ಗಳನ್ನು ನೀಡದೇ ಓದಿನಲ್ಲಿ ಆಸಕ್ತಿ ಬರುವ ರೀತಿ ಪ್ರೋತ್ಸಾಹಿಸಬೇಕು ಎಂದು ಕಿವಿ ಮಾತು ಹೇಳಿ, ಗಡಿ ಭಾಗದಲ್ಲಿ ಶಾಲೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಮಕ್ಕಳ ದಿನ ಹಿನ್ನೆಲೆ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೆರವೇರಿತು. ಗ್ರಾಮೀಣ ಸೊಗಡು ಮನಮುಟ್ಟುವ ರೀತಿ ಪ್ರದರ್ಶಿಸಿದ ಮಕ್ಕಳು ವಿವಿಧ ನೃತ್ಯಗಳ ಮೂಲಕ ಪಾಲಕರ ಗಮನಸೆಳೆದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶಾಂತಮ್ಮ ಖಜಾಂಚಿ ನಾಗಜ್ಯೋತಿ ಸಿಬ್ಬಂದಿ ಅಶ್ವಿನಿ, ಶಾರದ, ಅರುಣಾ ರಾಣಿ, ಜಾನಕಿ ಹಾಗೂ ವಿದ್ಯಾರ್ಥಿಗಳು ಇದ್ದರು.