ಮಾರ್ಚ್ 25 ರಂದು ಗಂಧ | 26 ರಂದು ಜಾತ್ರೆ, ಪೂಜ್ಯ ತಿಪ್ಪಯ್ಯ ಮುತ್ಯಾ ಅವರ ತುಲಾಭಾರ | 27ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ | ಆಮಂತ್ರಣ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಕ್ತರ ಮಾಹಿತಿ

ಗುರುಮಠಕಲ್ : ಸುಕ್ಷೇತ್ರ ರಾಘಪೂರದ ಹಜರತ್ ಮೌಲಾಲಿ ಸೇವಾ ಸಮಿತಿ ಟ್ರಸ್ (ರಿ), ರಾಘಾಪೂರ ತಾ।। ಸೇಡಂ ವತಿಯಿಂದ ಮಾರ್ಚ್ 25 ರಿಂದ 27ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ದರ್ಗಾದ ಭಕ್ತರು ಮಾಹಿತಿ ನೀಡಿದರು.

ರಾಘಾಪೂರದ ದರ್ಗಾ ಆವರಣದಲ್ಲಿ ಪೂಜ್ಯ ತಿಪ್ಪಯ್ಯ ಮುತ್ಯಾ ಅವರ ಸಮ್ಮುಖದಲ್ಲಿ ಮೌಲಾಲಿ ಮುತ್ಯಾರವರ ಸರ್ವಧರ್ಮ ಸಮನ್ವಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಮಾರ್ಚ್ 25 ರಂದು ಡಾ.ವೆಂಕಟರೆಡ್ಡಿ ಪಾಟೀಲ್ ಅವರು ಮನೆಯಿಂದ ರಾತ್ರಿ 8 ಗಂಟೆಯಿಂದ 2 ರ ವರೆಗೆ ಗಂಧದ ಮೆರವಣಿಗೆ, 26 ರಂದು ಜಾತ್ರೆ ಹಾಗೂ ರಾತ್ರಿ ಪರಮ ಪೂಜ್ಯ ತಿಪ್ಪಯ್ಯ ಮುತ್ಯಾ ಅವರ ತುಲಾಭಾರ ಕಾರ್ಯಕ್ರಮ ನಡೆಯಲಿದೆ. 27 ರಂದು ರಾತ್ರಿ 8 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜೊತೆಗೆ ಧರ್ಮ ಸಭೆ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜರು ನಿರಗುಡಿ, ಪೂಜ್ಯ ಷ.ಬ್ರ. ಶ್ರೀ ಶಿವಶಂಕರ ಶಿವಾಚಾರ್ಯರು ಶಿವಶಂಕರ ಮಠ, ಸೇಡಂ, ಪೂಜ್ಯ ಶ್ರೀ ಮ.ನಿ.ಪ್ರ. ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಜೀ ಗುರುಮಠಕಲ್, ಪೂಜ್ಯ ಶ್ರೀ ಅಡವಿಲಿಂಗ ಮಹಾರಾಜರು ವೀರಗೋಟ (ತಿಂಥಣಿ), ಪೂಜ್ಯ ಶ್ರೀ ರವಿ ಮುತ್ಯಾ ದೇವಪೂರ, ಪೂಜ್ಯ ಶ್ರೀ ಮೌಲಾಲಿ ಸ್ವಾಮಿ ಕೋಸ್ಗಿ ಮತ್ತು ಮುಖ್ಯ ಅತಿಥಿಗಳಾಗಿ ಡಾ. ಶರಣಪ್ರಕಾಶ ಪಾಟೀಲ್ (ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು), ಡಾ. ವೆಂಕಟರೆಡ್ಡಿ ಪಾಟೀಲ ರಾಘಾಪೂರ ಮಾಜಿ ಅಧ್ಯಕ್ಷರು, ಜಿ.ಪಂ.ಕಲಬುರಗಿ.ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕಲಬುರಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ,  ಅತಿಥಿಗಳಾಗಿ ರಾಜೇಶ ಗುತ್ತೇದಾರ ಮಾಜಿ ಸದಸ್ಯರು, ಜಿ.ಪಂ.ಅರಣಕಲ, ಜಿ.ಪಂ.ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ ತೆಲ್ಕೂರ, ರಾಜಶೇಖರ ನಿಲಂಗಿ (ತಾಲೂಕ ಅಧ್ಯಕ್ಷರು ಅ.ಭಾ.ವಿ.ಮ.ಸಭಾ. ಸೇಡಂ), ಡಾ. ಶ್ರೀನಿವಾಸರೆಡ್ಡಿ ಪಾಟೀಲ ರಾಘಾಪೂರ(ಪ್ರಾದೇಶಿಕ ಅಧ್ಯಕ್ಷರು ರಾಯನ್ಸ ಕ್ಲಬ್ ಸೇಡಂ), ಶರಣರೆಡ್ಡಿ ಪಾಟೀಲ ಸದಸ್ಯರು, ಗ್ರಾ.ಪಂ.ರಾಘಾಪೂರ, ಶ್ರೀಮತಿ ರಾಮಲಿಂಗಮ್ಮ ಸಿದ್ದಪ್ಪ ಉಪಾಧ್ಯಕ್ಷರು. ಗ್ರಾ.ಪಂ.ರಾಘಾಪೂರ,  ಮೋಹನರೆಡ್ಡಿ ಪಾಟೀಲ ರಾಘಾಪೂರ, ಶಿವರಾಮ ಸ್ವಾಮಿ, ಶ್ರೀ ತಿಪ್ಪಣ್ಣ ದ್ಯಾವನೂರ ಮಾಜಿ ಅಧ್ಯಕ್ಷರು, ಗ್ರಾ.ಪಂ.ರಾಘಾಪೂರ,  ಮಹಿಪಾಲರೆಡ್ಡಿ ಮುನ್ನೂರ ಸಾಹಿತಿಗಳು, ಸೇಡಂ, ಗುಂಡೇರಾವ ಮುಡಬಿ, ನಾಗರೆಡ್ಡಿ ದೇಶಮುಖ ಮದನಾ ಮಾಜಿ ಸದಸ್ಯರು,ತಾ.ಪಂ, ಡಾ. ರಾಮಚಂದ್ರ ಗುತ್ತೇದಾರ ಅಧ್ಯಕ್ಷರು ಕರವೇ, ಭೀಮರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ, ವಿಜಯಕುಮಾರ ಅಡ್ಡಿ, ವಿನೋದಕುಮಾರ ದುಗನೂರ, ರಾಜಶೇಖರರೆಡ್ಡಿ ಪಾಟೀಲ ಕೋಲಕುಂದಾ, ಸಂಜೀವಕುಮಾರ ಎನ್.ಕೆ. ಸಿ.ಪಿ.ಐ ಮುಧೋಳ ಠಾಣೆ, ಶ್ರೀಶೈಲ ಅಂಬಾಟಿ ಪಿ.ಎಸ್.ಐ.ಚಿತ್ತಾಪೂರ ಠಾಣೆ, ವಿಠಲ ನಾಯಕ ಮಾಜಿ ಮಾರ್ಕೆಟ್ ಟೆರ್‌ಮ್ಯಾನ್ ತಾಂಡೂರ, ರಮೇಶ ಕಂದೂರ ತಾಲೂಕ ಕೆಡಿಪಿ. ಸದಸ್ಯರು, ಸೇಡಂ, ರಾಮುಲು ಯಾದವ ಬಿಜೆಪಿ ಮುಖಂಡರು, ಕೋನಾಪೂರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀ ನಿವಾಸ ರೆಡ್ಡಿ ಮದನಾ, ಅಶೋಕ ಕೋಲಕುಂದ, ಅಶೋಕ ಗೌಡ ಕೊಂತನಪಲ್ಲಿ, ರಾಮುಲು ಗೌಡ ನಾಡೇಪಲ್ಲಿ, ನರೇಶ್ ಗೌಡ ಕೊಡಂಗಲ್, ಹಣಮಂತ ಗಾಜರಕೋಟ, ನಾಗಪ್ಪ ಮಾದ್ವಾರ, ಉಮೇಶ ಕುಮಾರ, ಮಕಬುಲ ಮುಲ್ಲಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!