ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಚ್ಚರವಹಿಸಿ | ಚಿನ್ನಾಭರಣ ಸುರಕ್ಷತೆಯಿಂದ ಧರಿಸಿ | ಆರ್ ಪಿ ಎಫ್ ಎಸ್ಐ ದೇವರಾಜ
ಸೇಡಂ : ರೈಲಿನಲ್ಲಿ ಪ್ರಯಾಣಿಸವ ವೇಳೆ ಬೆಲೆಬಾಳುವ ಚಿನ್ನಾಭರಣಗಳನ್ನು ತೋರಿಕೆ ರೀತಿ ಧರಿಸದಂತೆ ಆರ್ ಪಿ ಎಫ್ ಎಸ್ಐ ದೇವರಾಜ ಹೇಳಿದರು.
ಸೇಡಂ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನುದ್ದೇಶಿ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು. ಬಂಗಾರದ ಆಭರಣಗಳನ್ನು ಕಳುವು ಆಗುವುದನ್ನು ತಪ್ಪಿಸಲು ಎಚ್ಚರಿಕೆಯಿಂದಿರಬೇಕು ಎಂದರು.
ಕಿಟಕಿ ಕಡೆ ಕುಳಿತು ಪ್ರಯಾಣಿಸುವವರು ಜಾಗೃತರಾಗಿರಬೇಕು, ಸಮಯ ನೋಡಿ ಎಲ್ಲೋ ದೂರನಿಂತು ಕಾಯುವ ಕಳ್ಳರು ರೈಲು ತೆರಳುವ ವೇಳೆ ಕೊರಳಿನಿಂದ ಆಭರಣ ಎಗರಿಸುವ ಸಾಧ್ಯತೆ ಇರುತ್ತದೆ. ರೈಲು ಚಲಿಸುತ್ತಿದ್ದ ವೇಳೆ ಇಳಿದು ಕಳ್ಳನನ್ನು ಹಿಡಿಯಲು ಸಾಧ್ಯವಾಗಲ್ಲ. ಹಾಗಾಗಿ ತೋರಿಕೆ ರೀತಿ ಧರಿಸದಂತೆ ತಿಳಿಸಿದರು.
ಅಪರಿಚಿತರು ಪ್ರಸಾದ ಎಂದು ನಂಬಿಸಿ ತಿನ್ನುವ ವಸ್ತುಗಳು ನೀಡಿದರೆ ಸೇವಿಸದಂತೆ ತಿಳಿಸಿದರು. ಪ್ರಸಾದ ಎಂದು ತಕ್ಷಣ ತೆಗೆದುಕೊಂಡು ತಿಂದರೆ ಮತ್ತು ಬರುವ ಏನಾದರೂ ರಾಸಾಯನಿಕಗಳು ಕಲಿಸಿರುವ ತಿನ್ನುವ ಪದಾರ್ಥ ನೀಡುವ ಸಾಧ್ಯತೆಯಿದೆ. ಇದರಿಂದ ಎಚ್ಚರವಾಗಿರಲು ಮನವಿ ಮಾಡಿದರು. ರೈಲಿನಲ್ಲಿ ಪಟಾಕಿಯಂತ ಸಿಡಿ ಮದ್ದು ಸಾಗಿಸುವುದು ಅಪರಾಧವಾಗಿದೆ. ಯಾರು ಸಹ ತಮ್ಮೊಟ್ಟಿಗೆ ಪಟಾಕಿ ಇತರೆ ಸ್ಫೋಟಕ ವಸ್ತುಗಳು ಸಾಗಿಸಬಾದರು ಎಂದರು.
