ಶಹಾಪುರ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ
ಶಹಾಪುರ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ವತಿಯಿಂದ ಶಹಾಪುರ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮೋಹನರಾಜ ಎಂ.ಕೆ. ಅವರು ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ನೀಡಿ ಸಂಘಟನೆಯ ಉದ್ದೇಶಗಳನ್ನು ತಿಳಿಸಿ, ಡಾ.ಬಿ.ಆರ್. ಅಂಬೇಡ್ಕರ್ ಕಂಡಿರುವ ಸಮ ಸಮಾಜ ಕನಸು ಸಾಕಾರವಾಗಲು ಒಳ ಮೀಸಲಾತಿ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಇದಕ್ಕಾಗಿ ಪ್ರತಿ ತಾಲೂಕು ಮತ್ತು ಪ್ರತಿ ಗ್ರಾಮಗಳಲ್ಲಿ ಸಂಘಟನೆ ಅತ್ಯವಶ್ಯಕವಾಗಿದೆ ಎಂದರು. ಗ್ರಾಮೀಣ ಪ್ರದೇಶದ ದಲಿತ ಸಮುದಾಯಗಳಿಗೆ ಜಾಗೃತಿ ಮೂಡಿಸಿ, ಶೋಷಣೆ ತಡೆಯಬೇಕಿದೆ ಎಂದರು.
ತಾಲೂಕು ಪದಾಧಿಕಾರಿಗಳು: ಹಣಮಂತ ಗೊಬ್ಬುರು ಬೆನಕನಹಳ್ಳಿ ತಾ. ಸಂಚಾಲಕ, ಶ್ರೀನಿವಾಸ ದೋರನಹಳ್ಳಿ ತಾ.ಉಪಾಧ್ಯಕ್ಷ, ಭೀಮರಾಯ ದೋರನಹಳ್ಳಿ, ಮಲ್ಲಪ್ಪ ಆಲ್ದಾಳ, ಭೀಮಪ್ಪ ಹತ್ತಿಗೂಡುರು, ಮರಿಲಿಂಗಪ್ಪ ಬೆನಕನಹಳ್ಳಿ, ಹೊನ್ನಪ್ಪ ಪಣಿ ಸಗರ, ಕಾಮಣ್ಣ ದೇವಿನಗರ, ಹಣಮಂತ ಕನ್ಯೇಕೊಳೂರು, ಶರಣಪ್ಪ ಅಣಬಿ, ಆಂಜನೇಯ ಟೊಣ್ಣುರು, ಭೀಮರಾಯ ಕನ್ಯೇಕೊಳುರು, ಮರೆಪ್ಪ ಬೊಮ್ಮನಹಳ್ಳಿ ಅವರು ತಾಲುಕು ಸಂಘಟನೆ ಸಂಚಾಲಕ ರಾಗಿ ನೇಮಕವಾದರೆ, ಭೀಮರಾಯ ದೊಡ್ಮನಿ ಕರಣಗಿ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾನೂನು ಸಲೆಹೆಗಾರ ಎಂ.ಹೆಚ್. ಶಿರವಾಳ್ಕರ್, ನ್ಯಾಯವಾದಿ ಈಶ್ವರ ಚೇತನ, ಮುಖ್ಯ ಅಥಿತಿಗಳಾಗಿ ರಾಯಚೂರು ಎಂಆರ್‌ಹೆಚ್ ಎಸ್ ಜಿಲ್ಲಾಧ್ಯಕ್ಷ ಹಣಮಂತ ಮನ್ನಾಪುರು, ಭೀಮರಾಯ ಬಂಡಾರಿ, ಧರ್ಮರಾಜ ನಾಟೇಕಾರ, ಮಲ್ಲಿಕಾರ್ಜುನ್ ಝಂಡೆ, ಲಕ್ಷ್ಮಣ ದೇವಿನಗರ, ಹಣಮಂತ ದೋರನಹಳ್ಳಿ ,ಹುಸೇನಪ್ಪ ಗುತ್ತೇದಾರ ಹಳಿಸಗರ, ಮಲ್ಲಿಕಾರ್ಜುನ ಗುತ್ತೇದಾರ ಹಳಿಸಗರ, ಅರುಣಕುಮಾರ ನಾಟೇಕಾರ, ಭೀಮಾಶಂಕರ ಹುಲಿಮನಿ ಸೇರಿ ಇತರರು ಇದ್ದರು.