ಶಹಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಶಹಾಪುರ ತಾಲೂಕ ಘಟಕದ ವತಿಯಿಂದ ನಗರದ ಹಳೆ ಪ್ರವಾಸಿ ಮಂದಿರ ಶಹಾಪೂರದಲ್ಲಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಹಾಗೂ ಯಾದಗಿರಿ ಜಿಲ್ಲಾ ಸಂಚಾಲಕ ಮೋಹನ್ ರಾಜ್ ಗೌಡ ರವರ ಆದೇಶದ ಮೇರೆಗೆ ಶಹಾಪೂರ ತಾಲೂಕ ಸಂಚಾಲಕ ಹನುಮಂತ ಗೊಬ್ಬುರ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ರಸ್ತಾಪುರ ಗ್ರಾಮ ಘಟಕ ಸಂಚಲಕರಾಗಿ ಶ್ರೀ ಭೀಮಪ್ಪ ಜಲ್ಪಿ ಅವರನ್ನು ನೇಮಕ ಮಾಡಲಾಯಿತು.
ಜಿಲ್ಲಾ ಸಂಚಾಲಕರು ಮಾತನಾಡಿ, ಸಂಘಟನೆಯ ಪದಾಧಿಕಾರಿಗಳು ಬಾಬಾಸಾಹೇಬರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು. ಸಮಾಜದ ವಿರುದ್ಧ ನಡೆಯುವ ದೌರ್ಜನ್ಯ ದಬ್ಬಾಳಿಕೆ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡಬೇಕು ಎಂದರು.
ಸಂಘಟನೆಯ ಪಧಾಧಿಕಾರಿಗಳು ಸಂಘಟನೆ ದುರ್ಬಳಕೆ ಮಾಡಿಕೊಂಡು ಮಾಹಿತಿ ಹಕ್ಕು ಮತ್ತು ಪತ್ರಕರ್ತರೆಂದು ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸುವುದು ಕಂಡುಬಂದರೆ ಪದಾಧಿಕಾರಿಗಳನ್ನು ತಕ್ಷಣವೇ ಸಂಘಟನೆಯಿಂದ ತೆಗೆದುಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀ ಸುಂದರ್ ರಾಜ್ ಮ್ಯಾಗೇರಿ, ಭಾಗಪ್ಪ ನಡಿಗೇರಿ, ಭಾಗಪ್ಪ ಒಳಗಿನಮನಿ. ಕಾಮಣ್ಣ ದೇವಿನಗರ. ನಾಗು ಗುತ್ತಿಪೇಟ, ಹೊನ್ನಪ್ಪ ನಾಟೇಕಾರ. ಶರಣು ಕಂಚನಕವಿ, ಧರ್ಮರಾಜ್ ನಾಟೇಕಾರ, ಸೋಪಣ್ಣ ಸಗರ, ಹನುಮಂತ ಮ್ಯಾಗೇರಿ ಹಾಗೂ ಎಲ್ಲ ಸದಸ್ಯರ ಒಮ್ಮತದಂತೆ ಈ ಸಭೆಯಲ್ಲಿ ಗ್ರಾಮ ಘಟಕ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ರಸ್ತಾಪುರ ಗ್ರಾಮ ಘಟಕದ ಪದಾಧಿಕಾರಿಗಳು : ಸಂಚಾಲಕರು ಭೀಮಪ್ಪ ಜುಲ್ಪಿ, ಸಂಘಟನಾ ಸಂಚಾಲಕರಾಗಿ ಶರಬಣ್ಣ ಯಾದಗಿರಿ, ದೇವಪ್ಪ ಅಲಗಿ, ಹನುಮಂತ ಒಳಗಿನಮನಿ, ಬಸವರಾಜ ಮ್ಯಾಗೇರಿ, ಸಣ್ಣ ಹನುಮಂತ ವಿಭೂತಿಹಳ್ಳಿ, ಬಾಗಪ್ಪ ನಡಿಗೇರಿ, ನಂದಪ್ಪ ವಿಭೂತಿಹಳ್ಳಿ, ದೇವಪ್ಪ ಹೊಸಮನಿ, ತಿಪ್ಪಣ್ಣ ಮ್ಯಾಗೇರಿ, ಶರಬಣ್ಣ ಹಲಿಗಿ, ಖಜಾಂಚಿಯಾಗಿ ಭೀಮಪ್ಪ ಮ್ಯಾಗೇರಿ ಹಾಗೂ ಸಮಾಜ ಹಿರಿಯ ಸಲಹೆಗಾರ ಪೋಲಪ್ಪ ಮ್ಯಾಗೇರಿ, ಶರಬಣ್ಣ ಮ್ಯಾಗೇರಿ, ಮಾನಪ್ಪ ಹಲಗಿ ಸೇರಿದಂತೆ ಇತರರು ಇದ್ದರು.
