ಯಾದಗಿರಿಯ ಕಸಾಪ ಭವನದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡೋಜ ಗೋ.ರು.ಚನ್ನಬಸಪ್ಪ ಅವರಿಗೆ ಶರಣ ಸಾಹಿತ್ಯ ಪರಿಷತ್ತು, ಕಸಾಪ ವತಿಯಿಂದ ಅಭಿನಂದನೆ..

ಯಾದಗಿರಿ: ಪ್ರಖಾಂಡ ಪಾಂಡಿತ್ಯ ಮತ್ತು ವೈಚಾರಿಕ ಚಿಂತನೆ ಮೈಗೂಡಿಸಿಕೊಂಡ ನಾಡೋಜ ಗೋರುಚ ಅವರು ನಮ್ಮ ನಾಡಿನಲ್ಲಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿ ಎಂದು ಗುರುಮಠಕಲ್ ಖಾಸಾಮಠದ‌ ಶ್ರೀ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮಿಗಳು ನುಡಿದರು.

ಭಾನುವಾರ ಯಾದಗಿರಿಯ ಕಸಾಪ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಸಹಯೋಗ ದಲ್ಲಿ ಮಂಡ್ಯದಲ್ಲಿ ಜರುಗಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಾಡೋಜ ಡಾ.ಗೋ.ರು.ಚನ್ನಬಸಪ್ಪ ಅವರಿಗೆ ಆಯೊಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಗರ ನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಆರಂಭಿಸುತ್ತಿರುವ ಜಾನಪದ ವಿವಿಯ ಹಿಂದಿನ ಬಹುದೊಡ್ಡ ಕೊಡುಗೆ ಗೋ.ರು.ಚನ್ನಬಸಪ್ಪ ಅವರದ್ದು. ಶರಣ ಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ನಾಡಿನ ಜಾನಪದ ಕ್ಷೇತ್ರಕ್ಕೆ ಗೋರುಚ ಅವರ ಶ್ರಮ ಅಪಾರವಾಗಿದೆ ಎಂದರು.

ಅಭಿನಂದನಾ ನುಡಿಗಳಾಡಿದ ಉಪನ್ಯಾಸಕ ಡಾ.ಎಸ್.ಎಸ್. ನಾಯಕ, ಗೋರುಚ ಅವರು ನಾಡಿನ ಸಾಂಸ್ಕೃತಿಕ ವಲಯಕ್ಕೆ ಅನನ್ಯ ಕೊಡುಗೆ ನೀಡಿದವರು.‌ ಆರಂಭದಲ್ಲಿ ಆಂಗ್ಲ ಶಿಕ್ಷಕರಾಗಿ ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಜತೆಗೆ ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯ ಪರಿಷತ್ತನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ಅವರು ನಮ್ಮೆಲ್ಲರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಬಣ್ಣಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೊ ರು ಚನ್ನವಸ್ಸಪ್ಪನವರು ಯಾದಗಿರಿ ಜಿಲ್ಲೆಯ ಜನರ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಮರಣವೇ ಮಹಾನವಮಿ ಎಂಬ ಶರಣರ ವಾಣಿಯೇ ನನಗೆ ಆದರ್ಶ. ಇಂದು ರಾಜಕೀಯ ವ್ಯವಸ್ಥೆ ಇಂದು ಜನ ಸಮುದಾ ಯಕ್ಕೆ ಸವಾಲಾಗಿ ಮಾರ್ಪಟ್ಟಿವೆ.  ಈ ಬಗ್ಗೆ ಪ್ರಜ್ಞಾವಂತ ಸಮುದಾಯ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಸಲಹೆ ಮಾಡಿದರು ಮಂಡ್ಯದಲ್ಲಿ ಆಯೋಜಿಸಿದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನಾನು ಬಯಸದೆ ಬಂದ ಭಾಗ್ಯ ಎಂದು ಹೇಳಿದರು.

ಇಂದು ಭೂಮಿಯ ಮೇಲೆ ಸಂಘರ್ಷದ ವಾತಾವರಣ ಮಡುಗಟ್ಟಿದೆ. ಹೆಣ್ಣಿನ ಮೇಲೆ ಅತ್ಯಾಚಾರ, ಧರ್ಮ ಗುರುಗಳ ಅಧರ್ಮ ನಡೆ, ಆರ್ಥಿಕ ಶೋಷಣೆ ಹೆಚ್ಚಾಗುತ್ತಿದೆ. ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ ಎಲ್ಲವನ್ನೂ ಮನುಷ್ಯನೇ ಸೃಷ್ಟಿಸಿದ್ದಾನೆ. ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಿದರೆ ಮನುಷ್ಯ ಸಭ್ಯನಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ ಮಾತನಾಡಿ, ಕಸಾಪ ಕೇಂದ್ರ ಕಚೇರಿಯಲ್ಲಿ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಆಯ್ಕೆಗೆ ನಾಲ್ಕೈದು ಜನರ ಹೆಸರು ಕೇಳಿ ಬಂದವು. ವೈಚಾರಿಕ, ಸಾಹಿತ್ಯಿಕ ಮತ್ತು ಜಾನಪದ ಕ್ಷೇತ್ರದ ಏಕಕಾಲಕ್ಕೆ ಸೇವೆ ಸಲ್ಲಿಸದವರು ಸರ್ವಾಧ್ಯಕ್ಷರಾಗಬೇಕು ಎಂದಾಗ ನಾನು ಗೋರುಚ ಅವರು ಪ್ರಸ್ತಾಪಿಸಿದೆ. ತಕ್ಷಣ ಎಲ್ಲ ಸದಸ್ಯರು ಒಕ್ಕೂರಿಲಿನಿಂದ ಅನುಮೋದನೆ ನೀಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಮಹಿಳಾ ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷೆ ಭಾಗ್ಯವತಿ ಕೆಂಭಾವಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ ಭೀಮರಾಯ ಲಿಂಗೇರಿ, ಡಾ ಸಿದ್ದರಾಜ ರೆಡ್ಡಿ. ಅಯ್ಯಣ್ಣಾ ಹುಂಡೇಕಾರ, ಸಿ ಎಮ್ ಪಟ್ಟೇದಾರ, ಆರ್ ಮಾಹಾದೇವಪ್ಪ ಗೌಡ ಅಬ್ಬೆತುಮಕೂರ, ಯಾದಗಿರಿ ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ, ಹುಣಸಗಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ, ಶಹಪೂರ ತಾಲೂಕ ಕಸಾಪ ಅಧ್ಯಕ್ಷ ರವಿಂದ್ರ ಹೊಸಮನಿ, ಸುರಪುರ ತಾಲೂಕ ಕಸಾಪ ಅದ್ಯಕ್ಷ ಶರಬಸವ ಯಳವಾರ, ಗುರಮಠಕಲ್ ಕಸಾಪ ಅಧ್ಯಕ್ಷ ಬಸರೆಡ್ಡಿ, ಹುಣಸಗಿ ಶಸಾಪ ಅಧ್ಯಕ್ಷ ಶೀವು ಬಂಡೋಳಿ, ಶಹಪೂರ ಶಸಾಪ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ, ಯಾದಗಿರಿ ಶಸಾಪ ಅಧ್ಯಕ್ಷ ಗುರಪ್ಪಚಾರ್ಯ ಬಾಡಿಯಾಲ, ಸ್ವಾಮಿದೇವ ದಾಸನಕೇರಿ, ಬಸವಂತ್ರಾಯ ಮಾಲಿ ಪಾಟೀಲ, ಕಸಾಪ ಮತ್ತು ಶಸಾಪ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!