ಹೊಸಪೇಟೆಯಲ್ಲಿ ನಡೆಯುತ್ತಿರುವ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ನಿಮಿತ್ಯ ವಿಶೇಷ ಲೇಖನ
ಯಾದಗಿರಿ: ರಾಜ್ಯ ಸರ್ಕಾರದ ಈ ಎರಡು ವರ್ಷಗಳ ಸಾಧನೆಗೆ ಪಂಚ ಗ್ಯಾರಂಟಿಗಳು ಆನೆಬಲ ನೀಡಿವೆ.
ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿಯೇ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮೀ ಯೋಜನೆ, ಅನ್ನಭಾಗ್ಯ, ಯುವನಿಧಿ ಮತ್ತು ಗೃಹ ಜ್ಯೊತಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ.

ನಿರಂತರ ಎರಡು ವರ್ಷಗಳ ಕಾಲ ಈ ಎಲ್ಲ ಯೋಜನೆಗಳನ್ನು ನೇರವಾಗಿ ಜನರಿಗೆ ಮುಟ್ಟಿಸುವ ಮೂಲಕ ಜನಗೆದ್ದ ಹಾಗೂ ಜನರ ಮನ ಗೆದ್ದ ಸರ್ಕಾರ ಇದಾಗಿದೆ. ಗಿರಿಜಿಲ್ಲೆ ಯಾದಗಿರಿಯಲ್ಲಿ ಈ ಐದು ಯೋಜನೆಗಳು ಸಂಪೂರ್ಣವಾಗಿ ಫಲಪ್ರದವಾಗಿವೆ. ಬಡ ಹಾಗೂ ಜನ ಸಾಮಾನ್ಯರು ಈ ಯೋಜನೆಗಳ ಲಾಭ ಪಡೆಯುತ್ತಿದ್ದು, ಇದರಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಹಲವು ರೀತಿಯಲ್ಲಿ ನೆರವಾಗಿದೆ.
ಶಕ್ತಿ ಯೋಜನೆ: ವಿದ್ಯಾರ್ಥಿಗಳು ಶಾಲಾ-ಕಾಲೇಜುಗೆ ಹೊಗಿ ಬರಲು, ಮಹಿಳೆಯರಿಗೆ ಆಸ್ಪತ್ರೆಗಳು, ಧಾರ್ಮಿಕ, ಪ್ರವಾಸಿ ತಾಣಗಳಿಗೆ ಪ್ರವಾಸ, ಸಂಬಂಧಿಕರೊಂದಿಗೆ ಬಾಂಧವ್ಯ ವೃದ್ದಿಗೆ ಹಾಗೂ ಹೆಣ್ಣು ಮಕ್ಕಳ ಸ್ವಾವಲಂಬಿ ಜೀವನಕ್ಕೆ ನೆರವಾಗಿದೆ. ಅದರಂತೆ ಹಿರಿಯ ಮಹಿಳೆಯರಿಗೆ ಹಾಗೂ ಬಡವರಿಗೆ ಹಲವು ರೀತಿಯಲ್ಲಿ ಈ ಯೋಜನೆ ನರವಾಗುತ್ತಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟ ಈ ಯೋಜನೆ ಜಿಲ್ಲೆಯ ಮನೆ, ಮನೆಗೂ ಮುಟ್ಟಿದೆ. ಕಳೆದ 2023 ಜೂನ್ 11 ಕ್ಕೆ ಈ ಯೋಜನೆ ಜಾರಿಯಾಗಿದ್ದು, 2025 ಏ. 20 ರವರೆಗೆ 4,76,82,067 ಮಹಿಳೆಯರು ಮತ್ತು ಮಕ್ಕಳು ಉಚಿತ ಪ್ರಯಾಣ ಮಾಡಿದ್ದಾರೆ. ಇವರಲ್ಲಿ 4,59,36,792 ಮಹಿಳೆಯರು ಮತ್ತು 1,74,52,75 ಮಕ್ಕಳು ಪ್ರಯಾಣ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಶೇ. 52.97 ರಷ್ಟು ಶೇ. ವಾರು ಪ್ರಯಾಣ ಮಾಡಲಾಗಿದೆ. ಇದರಿಂದ ಕೆಕೆಆರ್ಟಿಸಿಗೆ 163,55,25,202 ರೂ.ಗಳಷ್ಟು ಪ್ರಯಾಣ ಮೊತ್ತವಾಗಿದೆ.
ಶಕ್ತಿ ಯೋಜನೆಯಡಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಓಡಾಡಲು ಸರ್ಕಾರ ಸೌಲಭ್ಯ ಮಾಡಿಕೊಟ್ಟಿದ್ದರಿಂದ ಬಸ್ಸಿನಲ್ಲಿ ಓಡಾಡಲು ತುಂಬಾ ಅನೂಕಲವಾಗಿದೆ. ದೇವಸ್ಥಾನ, ಪ್ರೇಕ್ಷಣಿಯ ಸ್ಥಳಗಳು, ಮದುವೆ, ಹಬ್ಬ ಹರಿದಿನಗಳಿಗೆ ಸಂಬಂಧಿಕರ ಮನೆಗೆ ಹೋಗಲು ಶಕ್ತಿ ಯೋಜನೆ ತುಂಬಾ ಅನುಕೂಲವಾಗಿದೆ. – ಅಶ್ವಿನಿ, ನಾಯ್ಕಲ್. ಫಲಾನುಭವಿ.
ಗೃಹ ಲಕ್ಷ್ಮೀ : ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಆರ್ಥಿಕ ಬಲವರ್ಧನೆಗೆ ಹೊಸ ಶಕ್ತಿ ತುಂಬಿದೆ. ಕುಟುಂಬದ ದಿನನಿತ್ಯದ ನಿರ್ವಹಣೆ, ಮಕ್ಕಳ ಶಿಕ್ಷಣ ಮನೆ ಬಾಡಿಗೆ ಸೇರಿದಂತೆ ಹಲವು ಆರ್ಥಿಕ ಚಟುವಟಿಕೆಗಳಿಗೆ ನೆರವಾಗಿದೆ. ಆರೋಗ್ಯ ಸಂಬಂಧಿತ ಖರ್ಚು ನಿಭಾಯಿಸಲು ಸಹಕಾರಿಯಾಗಿದೆ. ಇದರಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ನೆರವಾಗುತ್ತಿದೆ.
ಗೃಹಲಕ್ಷ್ಮೀ ಯೋಜನೆಯಡಿ 2025 ರ ಜನವೆರಿ ವರೆಗೆ 2,59,079 ಫಲಾನುಭವಿಗಳು ನೊಂದಣಿಯಾಗಿದ್ದಾರೆ. ಈ ಪೈಕಿ 2,51,479 ಫಲಾನುಭವಿಗಳಿಗೆ ತಲಾ 2 ಸಾವಿರದಂತೆ ಸಹಾಯಧನ ಜಮೆ ಮಾಡಲಾಗಿದೆ.
ಗೃಹ ಲಕ್ಷ್ಮೀಯೋಜನೆಯಡಿ ಸರ್ಕಾರ ನೀಡುತ್ತಿರುವ ಎರಡು ಸಾವಿರ ರೂಗಳ ಹಣದಲ್ಲಿ ಆಸ್ಪತ್ರೆ ಚಿಕಿತ್ಸೆಗೆ, ಮನೆಯ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿದೆ. ಇದರಿಂದ ಉತ್ತಮ ಜೀವನ ಸಾಗಿಸಲು ನೆರವಾಗಿದೆ.- ಯಮನವ್ವ, ಹುಣಸಗಿ.
ಅನ್ನಭಾಗ್ಯ: ಕಷ್ಟ ಕಾಲದಲ್ಲಿ ಪಡಿತರ ಚೀಟಿದಾರರಿಗೆ ನೆರವಾಗಿದೆ. 5 ಕೆಜಿ ಅಕ್ಕಿ ವಿತರಣೆಯಿಂದ ಜೀವನಕ್ಕೆ ಸಹಕಾರಿಯಾಗಿದ್ದು, ನೇರ ನಗದು ವರ್ಗವಣೆಯಿಂದ ಕುಟುಂಬ ನಿರ್ವಹಣೆ ಮತ್ತು ಉಪಜೀವನಕ್ಕೆ ಅನುಕೂಲವಾಗಿ ಕಷ್ಟ ಕಾಲಕ್ಕೆ ಉಪಯೋಗವಾಗುತ್ತಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಆರು ತಾಲೂಕಗಳಾದ ಶಹಾಪುರ, ವಡಗೇರಾ, ಸುರಪುರ, ಹುಣಸಗಿ, ಯಾದಗಿರಿ ಹಾಗೂ ಗುರುಮಠಕಲ್ಗಳ ಅರ್ಹ ಎಎವೈ ಮತ್ತು ಆದ್ಯತಾ ಪಡಿತರ ಚೀಟಿ ಪ್ರತಿ ಫಲಾನುಭವಿಗಳಿಗೆ ಒಟ್ಟು 9,46,544 ಪಡಿತರ ಕಾರ್ಡ್ಗಳ ಫಲಾನುಫವಿಗಳಿಗೆ ಅಕ್ಕಿ ವಿತರಣೆಯಾಗಿದೆ. ಅದರಂತೆ ಬಿಪಿಎಲ್/ಎಎಐ ಪಡಿತರ ಕಾರ್ಡ್ ಮುಖಸ್ಥರಿಗೆ ಡಿಬಿಟಿ ಮೂಲಕ 5 ಕೆ.ಜಿ ಅಕ್ಕಿ ಬದಲಾಗಿ ನಗದು ರೂಪದಲ್ಲಿ ಹಣವರ್ಗಾವಣೆ ಮಾಡಲಾಗಿದ್ದು, 252,33,67,490 ರೂಗಳ ಮೊತ್ತವನ್ನು ಪಾವತಿಸಲಾಗಿದೆ.
ಅನ್ನಭಾಗ್ಯ ಯೋಜನೆಯಿಂದ ಕುಟುಂಬದ ಅನುಕೂಲಕ್ಕಾಗಿ ೫ ಕೆಜಿ ಅಕ್ಕಿ ನೆರವಾಗುತ್ತಿದೆ. ಅದರಂತೆ ೫ ಕೆಜಿ ಅಕ್ಕಿಯ ಬದಲಾಗಿ ನೀಡುತ್ತಿರುವ ನೆರ ನಗದು ಹಣ ವರ್ಗಾವಣೆಯಿಂದ ಕುಟುಂಬ ನಿರ್ವಹಣೆ ಮತ್ತು ಉಪಜೀವನಕ್ಕೆ ನೆರವಾಗಿ ಬಡವರ ಜೀವಾಳವಾಗಿದೆ.- ಕು. ರೇಖಾ ಕಾಶಿನಾಥ, ಮದನಪೂರ, ಯಾದಗಿರಿ.
ಯುವ ನಿಧಿ : ನಿರುದ್ಯೋಗಿ ಮತ್ತು ಬಡ ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಆಶಾಕಿರಣ ಮೂಡಿಸಿದೆ. ಸ್ಪರ್ದಾತ್ಮಕ ಪರೀಕ್ಷೆಗೆ ತರಬೇತಿ, ಗ್ರಂಥಾಲಯ ಶುಲ್ಕ ಭರಿಸಲು, ಪುಸ್ತಕ ಖರೀದಿ ಸೇರಿದಂತೆ ಹಲವು ಸಾಧನ ಸಲಕರಣೆಗಳ ಖರೀದಿಗೆ ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ.
ಅದರಂತೆಯೇ ಯುವನಿಧಿ ಯೋಜನೆಯಡಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 7922 ಯುವ ಫಲಾನುಫವಿಗಳು ನೊಂದಣಿಯಾಗಿದ್ದು, 7837 ಪದವಿ ಹಾಗೂ 85 ಡಿಪ್ಲೋಮಾ ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. 2025 ರ ಫೆಬ್ರುವರಿ ಮಾಹೆ ವರೆಗೆ ೧೦,೨೯,೯೦,೦೦೦ ರೂಗಳನ್ನು ಪದವಿ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಅದರಂತೆ ೨,೭೧,೫೦೦ ರೂಗಳನ್ನು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಜಮೆಯಾಗಿದ್ದು, ಒಟ್ಟು ೧೦,೩೨,೬೧,೫೦೦ ರೂಗಳನ್ನು ಡಿಬಿಟಿ ಮೂಲಕ ಜಮೆ ಮಾಡಲಾಗಿದೆ.
ಯುನವಿಧಿ ಯೋಜನೆಯಡಿಯಲ್ಲಿ ಸರ್ಕಾರವು ನೆರನಗದು ವರ್ಗಾವಣೆ ಮೂಲಕ ಹಣಸಂದಾಯ ಮಾಡುತ್ತಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಲು ಹಾಗೂ ಕಟ್ಟಡ ಬಾಡಿಗೆ ನೀಡಲು ಹೆಚ್ಚಿನ ಅನುಕೂಲವಾಗಿದೆ. ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಿದೆ. – ಮಂಜುನಾಥ, ಸಾ.ದೋರನಹಳ್ಳಿ.
ಗೃಹ ಜ್ಯೋತಿ: ಯೋಜನೆಯಿಂದ ಉಳಿತಾಯವಾದ ಹಣವನ್ನು ಕುಟುಂಬದ ನಿರ್ವಹಣೆಗೆ ನೆರವಾಗುತ್ತಿದೆ. ರಾಜ್ಯದ ಜನರ ಕುಟುಂಬದಲ್ಲಿ ಈ ಯೋಜನೆ ಬೆಳಕು ನೀಡುವ ಕಾರ್ಯಮಾಡಿದೆ.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯ ೬ ತಾಲೂಕುಗಳ ೨,೧೪,೭೯೭ ಅರ್ಹ ಗ್ರಾಹಕರು ಇದ್ದು, ಈ ಪೈಕಿ ೨,೦೪,೮೨೫ ಫಲಾನುಭವಿಗಳು ಈ ಯೋಜನೆ ಲಾಭ ಪಡೆದಿದ್ದು, ಒಟ್ಟು ಪ್ರತಿಶತ ೯೫.೩೬ ರಷ್ಟು ಫಲಾನುಭವಿಗಳು ಇದರ ಲಾಭ ಪಡೆದಿದ್ದು, ೧೪೭.೪೦ ಕೋಟಿ ರೂಗಳಷ್ಟು ವೆಚ್ಚ ಮಾಡಲಾಗಿದೆ.
ಯೋಜನೆಯಿಂದ ಪ್ರತಿತಿಂಗಳು ೫೮ ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತಿರುವುದರಿಂದ ಸುಮಾರು ೮೦೦ ರೂಪಾಯಿ ಉಳಿತಾಯ ವಾಗುತ್ತಿದೆ. ಇದರಿಂದ ನನ್ನ ಮಕ್ಕಳ ಉತ್ತಮ ವಿದ್ಯಾಭ್ಯಾಸ ಹಾಗೂ ಟ್ಯುಷನ್ ಶುಲ್ಕ ಭರಿಸಲು ಸಹಾಯವಾಗಿದೆ. ಸರ್ಕಾರದ ಈ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ ಬಯಸುತ್ತೇನೆ. – ಫಯಾಜ್ ಅಹ್ಮದ್ ಗೋಗಿ, ಯಾದಗಿರಿ.
ಲೇಖಕರು, ಸುಲೈಮಾನ್ ನದಾಫ್. ಹಿರಿಯ ಸಹಾಯಕ ನಿರ್ದೇಶಕರು (ಪ್ರ.), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯಾದಗಿರಿ.
