ಜನೆವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನದ ಅಂಗವಾಗಿ ಕಲಬುರಗಿಯ ರಾಷ್ಟ್ರೀಯ ಸ್ವದೇಶಿ ವಿಚಾರಗಳ ಚಿಂತಕರಾದ ಮಹಾದೇವಯ್ಯ ಕರದಳ್ಳಿ ಅವರ ಸಂಗ್ರಹ ಲೇಖನವನ್ನು  ಯಾದಗಿರಿಧ್ವನಿ.ಕಾಮ್ ಪ್ರಕಟಿಸಿದೆ.

ದೇಶವೊಂದು ಅಭಿವೃದ್ಧಿ ಸಾಧಿಸಲು ತನ್ನ ಒಳಗೂ ಮತ್ತು ಹೊರಗೂ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಂಡು ಭೌತಿಕ ಅಭಿವೃದ್ಧಿ ಸ್ವಾವಲಂಬಿತನ ಸಾಧಿಸಬೇಕು. ಶ್ರೀಮಂತ ದೇಶವಾಗಬೇಕು ಎಂಬುದು ಸರ್ವತ್ರ ಚಿಂತನೆಯಾಗಿದೆ.

ಭಾರತದ ಅಭಿವೃದ್ಧಿ ಚಿಂತನೆ ಸ್ವಲ್ಪ ವಿಭಿನ್ನವಾಗಿದೆ. ಭಾರತವು ಆರ್ಥಿಕವಾಗಿ ಶ್ರೀಮಂತಿಕೆ ಸಾಧಿಸುವುದರ ಜೊತೆಗೆ ವಿಶ್ವಕ್ಕೆ ಮತ್ತೊಮ್ಮೆ ಒಂದು ಯುಗಾನುಕೂಲ ಸಮಗ್ರ ವಿಕಾಸದ ಅಭಿವೃದ್ಧಿ ಮಾದರಿ ಪ್ರಸ್ತುತ ಪಡಿಸಬೇಕಾಗಿದೆ. ದೇಹ ಚೆನ್ನಾಗಿರ ಬೇಕಾದರೆ ಎಲ್ಲ ಅಂಗಾಂಗಗಳು ಸ್ವಸ್ಥವಾಗಿದ್ದು ಕ್ರೀಯಾಶೀಲ ವಾಗಿರಬೇಕು. ಅದೇ ರೀತಿ ದೇಶ ಚೆನ್ನಾಗಿದೆಂದರೆ ಅದು ಸರ್ವ ವಿಧದಲ್ಲೂ ಸ್ವಾವಲಂಬಿ ಮತ್ತು ಸ್ವಾಭಿಮಾನ ಸಂಪನ್ನ ವಾಗಬೇಕು.

ಭೌತಿಕವಾಗಿ, ಆಧ್ಯಾತ್ಮಿಕವಾಗಿ ವಿಕಸಿತ ಭಾರತ ಅರ್ಥಾತ್ ಅಂತರಂಗ ಬಹಿರಂಗದಲ್ಲಿ ಬಲಿಷ್ಠ ಭಾರತವಾಗಬೇಕು. ದೇಶದ ಜನತೆಯಲ್ಲಿ ಮಾನವೀಯ ಗುಣಗಳಿರಬೇಕು. ದೇಶದ ಕಟ್ಟಕಡೆಯ ವ್ಯಕ್ತಿಗೆ ಅನ್ನ, ನೀರು, ಬಟ್ಟೆ, ವಸತಿ, ಆರೋಗ್ಯ ಸವಲತ್ತುಗಳು ಸುಲಭವಾಗಿ ಲಭ್ಯವಾಗಬೇಕು.

ಪ್ರತಿವ್ಯಕ್ತಿ ಪರಸ್ಪರಾವಲಂಬನ, ಪರೋಪಕಾರ, ಮಮತೆ ಯುಕ್ತ ಮಾನವೀಯತೆಯ ಸದ್ಗುಣವುಳ್ಳ ಅಭಿವೃದ್ಧಿ ಸಾಧಿಸುವ ಇಚ್ಛೆಯಿರಬೇಕು. ವ್ಯಕ್ತಿ ಮತ್ತು ದೇಶ ಸ್ವಾವಲಂಬಿಯಾಗಿ. ಸ್ವಾಭಿಮಾನದಿಂದ ಗುರುತಿಸಲ್ಪಟ್ಟಾಗ ಭಾರತದ ತನ್ನ ಸನಾತನ, ಪುರಾತನ ವಿಚಾರ ಆಚಾರಗಳನ್ನು ಜಗದ ಜನರಿಗೆ ಪರಿಚಯಿ ಸಲು, ವಿಶ್ವ ಶಾಂತಿಯ ಸಾಧಿಸಲು ಸಾಧ್ಯ. ಸಮಗ್ರ ವಿಕಾಸದೆಡೆ ದಿಟ್ಟ ಹೆಜ್ಜೆ ಇಟ್ಟ ಭಾರತ ಶಕಿವಂತ ರಾಷ್ಟ್ರವಾಗುತ್ತಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಅರಿವಿಗೆ ಬರುತ್ತಿದೆ.

ಕಳೆದ ದಶಕದಲ್ಲಿನ ಭಾರತದ ಸಾಧನೆಯಿಂದ ಭಾರತೀಯರೆ ಲ್ಲರಿಗೂ ಹೆಮ್ಮೆಯಾಗಿದೆ. ಭಾರತವು ಸ್ವಚ್ಛತೆಯಲ್ಲಿ, ಯೋಗದಲ್ಲಿ, ಭಯೋತ್ಪಾದನೆ ನಿಗ್ರಹಿಸುವಲ್ಲಿ, ಹಣದುಬ್ಬರ ನಿಯಂತ್ರಿಸಿ ಪ್ರಗತಿ ಸಾಧಿಸುವಲ್ಲಿ, ಸರ್ಜಿಕಲ್ ಸ್ಟ್ರೈಕ್ ಮೂಲಕ, ಪಾಕಿಸ್ತಾನ, ಚೈನಾ ಆಕ್ರಮಣಕ್ಕೆ ಸರಿಯುತ್ತರ ನೀಡುವಲ್ಲಿ, ಯಶಸ್ವಿ ಚಂದ್ರಯಾನ್- 3, ಆದಿತ್ಯ ಎಲ್ 1 ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ವರನ್ನು ಕೈ ಹಿಡಿದು ಮೇಲೆತ್ತುವಲ್ಲಿ, ಜಿ 20 ಸಮಾವೇಶ ಏರ್ಪಡಿಸುವಲ್ಲಿ, ನೋಟು ಅಮಾನ್ಯೀಕರಣದ ಸಂದರ್ಬದಲ್ಲಿ, ಕರೋನಾ ಸಂಕಷ್ಟ ಎದುರಿಸುವಲ್ಲಿ ಉಕ್ರೇನ್, ಇಸ್ರೇಲ್ ಯುದ್ಧಗಳಲ್ಲಿ ವಿಶೇಷವಾಗಿ ಕೋವಿಡ್ ಸಮಯದಲ್ಲಿ ದೇಶದಲ್ಲಿನ ಎಲ್ಲರಿಗೂ ಜೊತೆಗೆ ಬಡರಾಷ್ಟ್ರಗಳಿಗೆ ಉಚಿತ ವ್ಯಾಕ್ಸಿನ್‌ ವಿತರಿಸಿ ಮಾನವಿಯತೆ ಮೆರೆದು ಜಗತ್ತಿನ ಅದರಲ್ಲೂ ಶ್ರೀಮಂತ ರಾಷ್ಟ್ರಗಳಿಗೆ ಮೇಲ್ಪಂಕ್ತಿಯಾಗಿದೆ.

ಸಂಚಾರಿ ಸನ್ಯಾಸಿ ಎಂದು ಖ್ಯಾತರಾಗಿದ್ದ ಸ್ವಾಮಿ ವಿವೇಕಾ ನಂದರು ದೇಶದ ಉದ್ದಗಲಕ್ಕೂ ಅಷ್ಟೇ ಅಲ್ಲ ವಿದೇಶಗಳಲ್ಲಿ ಸಂಚರಿಸಿ ದರು. ತಮ್ಮ ಪ್ರವಾಸದ ಸಂದರ್ಭದಲ್ಲಿ ವಿವಿಧ ಮತ ಪಂಥಗಳ ಜನರನ್ನು, ಅನ್ಯಾನ್ಯ ಧಾರ್ಮಿಕ ನಂಬುಗೆಯ ಶ್ರದ್ಧಾಳುಗಳನ್ನು, ಕಲಿಕಾ ಕೇಂದ್ರಗಳನ್ನು ಭೇಟಿ ಮಾಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿನ ಆಚರಣೆಗಳನ್ನು ಸಮೀಪದಿಂದ ಕಂಡು ಅರಿತು ಕೊಂಡರು.

ಈ ಯಾತ್ರೆಯಲ್ಲಿ ಅವರು ಶೋಷಿತ ಪೀಡಿತರ ಹಾಗೂ ಸಂತ್ರಸ್ತ ರಿಗೆ ಅವಶ್ಯವಿರುವ ಅನುಕಂಪ ಹಾಗೂ ದಯೆಯ ಅವಶ್ಯಕತೆ ಅರಿತರು. ಜೊತೆಗೆ ಅವರ ಬಡತನ, ಅಜ್ಞಾನ ದೂರಗೊಳಿಸಿ ಶ್ರೀಮಂತ ಭಾರತ ಸಮೃದ್ಧ ಭಾರತ ಸ್ವಾವಲಂಬಿ ಭಾರತ ಸಮೃದ್ಧ ಭಾರತದ ಕನಸನ್ನು ಕಂಡರು ಮತ್ತು ನನಸಾಗಿಸಲು ಅನವರತ ಶ್ರಮಿಸಿದರು. ಅವರ ವಿಚಾರಗಳು ಮೇಲ್ನೋಟಕ್ಕೆ ಧರ್ಮ, ಹಿಂದುತ್ವ ಕುರಿತಾಗಿ ಕಂಡರೂ ಆಂತರ್ಯದಲ್ಲಿ ಜನರ ಜೀವನದ ಅವಶ್ಯಕತೆಗಳಾದ ದಾರಿದ್ರ್ಯ ನಿವಾರಣೆ ಮತ್ತು ಆರ್ಥ (ಸಂಪತ್ತು), ಕಾಮ(ಇಚ್ಛೆ)ಗಳ ಈಡೇರಿಕೆ ಧರ್ಮದ ಹಾದಿಯಲ್ಲಿ ರಬೇಕು ಎಂಬುದಾಗಿದೆ.

ಸ್ವಾಮಿ ವಿವೇಕಾನಂದರ ನಿಜವಾದ ಕನಸು ಸಮೃದ್ಧ ಭಾರತ ಸಶಕ್ತ ಭಾರತ, ವಿಶ್ವಗುರು ಭಾರತವಾಗಿತ್ತು. ಶತಶತಮಾನಗಳ ನಂತರವೂ ಇಂದಿಗೂ ಯುವಕರ ಕಣ್ಮಣಿಯಾಗಿದ್ದ ಸ್ವಾಮೀಜಿ ಯವರು ಯುವ ಮನದಿಂದ ಅಶಕ್ತ ದುರ್ಬಲ ವಿಚಾರಗಳನ್ನು ತೆಗೆದು ಹಾಕಲು, ಅವುಗಳ ಜಾಗದಲ್ಲಿ ರಚನಾತ್ಮಕ ಹಾಗೂ ಆಶಾಕಿರಣಗಳನ್ನು ಸೃಷ್ಟಿಸಲು ಯೋಗ ಮತ್ತು ಧ್ಯಾನ ಮಾಡಲು ಒತ್ತಾಯಿಸಿದ್ದರು.

ಸಾರ್ಥಕ ಬದುಕಿಗೆ ಬೇಕಾದ ಗುಣಗಳು, ವಿವೇಕ ಮತ್ತು ಆನಂದಗಳು ಅವರ ವಿವೇಕಾನಂದ ಎಂಬ ಹೆಸರಲ್ಲಿವೆ. ಸ್ವಾಮಿ ಯವರು ದೇಶ ಕಾರ್ಯಮಾಡಲು ಶಾರೀರಿಕ ಶಕ್ತಿ ಅವಶ್ಯಕತೆ ಮನಗಂಡಿದ್ದರು. ಅದಕ್ಕಾಗಿಯೇ ಅವರು ಸ್ಪಷ್ಟವಾಗಿ ನನಗೆ ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಇರುವ ಮತ್ತು ಅದೇ ವಸ್ತುಗಳ ಕಣಗಳಿಂದ ಮಾಡಿದ ಬುದ್ದಿ ಮನಸ್ಸುಗಳುಳ್ಳ ಯುವಕರು ಬೇಕು. ಆಗ ನಾನು ದೇಶದ ಭವಿಷ್ಯವನ್ನು ಬದಲಾ ಯಿಸಬಲ್ಲೆ ಎಂದು ಕರೆ ನೀಡಿದ್ದರು. 

ಭಾರತವು ಶ್ರೀಮಂತಿಕೆ, ಶಕ್ತಿವಂತಿಕೆ, ಸ್ವಾವಲಂಬಿತನ ಜೊತಗೆ ಮಾನವೀಯತೆ ಮೆರಿದಿದೆ. ಯುಗ ಸಂಧಿಕಾಲದಲ್ಲಿ ಭಾರತ ಮತ್ತಷ್ಟು ಸ್ವಾವಲಂಬಿ ಯಾಗಲು ಸಮಗ್ರ ವಿಕಾಸ ಸಾಧಿಸಲು ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಘಟನೆಗಳನ್ನು, ವಿಚಾರಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಅಳವಡಿಸಿ ಕೊಳ್ಳುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!