ಕೊನೆಗೂ ಬಸ್ ಕಂಡ ಗ್ರಾಮಸ್ಥರ ಹರ್ಷ..

ಗುರುಮಠಕಲ್:  ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆದರೂ ಈವರೆಗೂ ಸಾರಿಗೆ ಬಸ್ ಕಾಣದ ಗ್ರಾಮಕ್ಕೆ ಕರವೇ ಕಾರ್ಯಕರ್ತರ ಪ್ರಯತ್ನದಿಂದ ಬಸ್ ಆರಂಭವಾಗಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಲು ಕರವೇ ಗುರುಮಠಕಲ್ ಅಧ್ಯಕ್ಷ ಶರಣಬಸವ ಎಲ್ಹೇರಿ ನೇತೃತ್ವದಲ್ಲಿ ಕಾರ್ಯಕರ್ತರು ತೆರಳಿದ್ದ ವೇಳೆ ಅಲ್ಲಿನ ಜನರು ತಮ್ಮ ಗೋಳು ತೋಡಿಕೊಂಡಿದ್ದರು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಶರಣಬಸವ, ಸಾರಿಗೆ ಇಲಾಖೆ  ವ್ಯವಸ್ಥಾಪಕ ನಿರ್ದೇಶಕರು, ವಿಭಾಗೀಯ ನಿಯಂತ್ರಣ ಅಧಿಕಾರಿಗೆ ಬಸ್ ಸೌಕರ್ಯ ಕಲ್ಪಿಸಲು ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಬಸ್ ಗ್ರಾಮಕ್ಕೆ ಬರುತ್ತಿದ್ದಂತೆ ಸ್ವಾಗತಿಸಿ, ಮಾತನಾಡಿದ ಗ್ರಾಮಸ್ಥರು, ನಮ್ಮೂರಿಗೆ ಬಸ್ ಇರಲಿಲ್ಲ. ಇದರ ಬಗ್ಗೆ ಗಮನಕ್ಕೆ ತಂದಾಗ ಸ್ಪಂದಿಸಿ ಬಸ್ ವ್ಯವಸ್ಥೆ ಆರಂಭವಾಗಲು ಕಾರಣವಾಗಿದ್ದು ಧನ್ಯವಾದಗಳು ತಿಳಿಸಿದ್ದಾರೆ. ಸರ್ಕಾರದ ಅಧಿಕಾರಿಗಳು ಗಡಿಭಾಗದಲ್ಲಿ ಇರುವ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಕರವೇ ಮನವಿಗೆ ಸ್ಪಂದಿಸಿ ಪಾಡಪಲ್ಲಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದಕ್ಕಾಗಿ ಕೆ.ಕೆ.ಆರ್‌.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಕುಂಬಾರ್ ಅವರಿಗೆ ಮತ್ತು ಯಾದಗಿರಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕರವೇ ಧನ್ಯವಾದ ಹೇಳಿದೆ.

ಪಾಡಪಲ್ಲಿ ಗಡಿ ಗ್ರಾಮವಾಗಿದ್ದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಜವಾಬ್ದಾರಿಯುತ ಆಧಿಕಾರಿಗಳು ಸಮರ್ಪಕ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

Spread the love

Leave a Reply

Your email address will not be published. Required fields are marked *

error: Content is protected !!