ವಿಕರಾಬಾದ್: ಪವಾಡ ಪುರುಷ ಹಾಗೂ ಆರಾದ್ಯ ದೈವ ಶ್ರೀ ಬಾವಿಗಿ ಭದ್ರೇಶ್ವರ ಜಾತ್ರೆಯು ಭಾನುವಾರ ವೈಭವದಿಂದ ಜರುಗಿತು.
ತೆಲಂಗಾಣ ರಾಜ್ಯದ ವಿಕರಾಬಾದ್ ಜಿಲ್ಲೆಯ ತಾಂಡೂರು ನಗರದಲ್ಲಿ ಶ್ರೀ ಬಾವಿಗಿ ಭದ್ರೇಶ್ವರ ಜಾತ್ರೆಯು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಪ್ರತಿವರ್ಷ ಜಾತ್ರೆ ನಡೆಸುಕೊಂಡು ಬರಲಾಗುತ್ತಿದೆ. ಜಾತ್ರೆ ಹಿನ್ನಲೆ 5 ದಿನಗಳ ಕಾಲ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. 4 ದಿವಸ ಭದ್ರೇಶ್ವರ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯ ಧಾರ್ಮಿಕ ಕಾರ್ಯ ನಡೆದವು.
ನಂದಿಕೋಲು ನೃತ್ಯ ,ಪುರಂತರ ಸೇವೆ ಹಾಗೂ ವಾದ್ಯ ಮೇಳಗಳ ಮೆರವಣಿಗೆ ನಡೆಯಿತು. ನಂತರ ಭವ್ಯ ರಥೋತ್ಸವ ನಡೆಯಿತು. ಈ ವೇಳೆ ಭಕ್ತರು ಭದ್ರೇಶ್ವರ ಮಹಾರಾಜ್ ಕೀ ಜೈ ಎನ್ನುತ್ತಾ ಜಯಘೋಷ ಎಲ್ಲಡೇ ಮೊಳಗಿತು. ರಥಕ್ಕೆ ಭಕ್ತರು ಉತ್ತತ್ತಿ,ಬಾಳೆ ಹಣ್ಣು ಅರ್ಪಿಸಿ ಭಕ್ತಿ ಮೆರೆದರು.
ಸೋಮವಾರ ನಸುಕಿನ ಜಾವ ಬಸವಣ್ಣನ ಕಟ್ಟೆ ಸಮೀಪ ಲಂಕಾದಹನ ನಿಮಿತ್ತವಾಗಿ ಪಟಾಕಿ ಹಚ್ಚಿ ಲಂಕಾದಹನ ಮಾಡಿದರು.
ಬೀದರ್ ಜಿಲ್ಲೆಯ ಬಾವಗಿಯ ಭದ್ರೇಶ್ವರ ಮಠದ ಶ್ರೀ ಶಿವಕುಮಾರ್ ಸ್ವಾಮಿ ಅವರು ಜಾತ್ರೆಯಲ್ಲಿ ಭಾಗವಹಿಸಿ ಭದ್ರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜಾತ್ರೆಯಲ್ಲಿ ಚವಳ್ಲ ಎಂಪಿ ಕೊಂಡ ವಿಶ್ವೇಶ್ವರ ರೆಡ್ಡಿ,ತಾಂಡೂರು ಶಾಸಕ ಮನೋಹರ್ ರೆಡ್ಡಿ, ಮಾಜಿ ಶಾಸಕ ರೋಹಿತ್ ರೆಡ್ಡಿ ,ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೀರಣ್ ಕುಮಾರ್ ಪಟೇಲ್,ಕಿರಣ್ ಪಟೇಲ್ ,ತಾಂಡೂರು ವೀರಶೈವ ಸಮಾಜದ ತಾಲೂಕಾ ಅಧ್ಯಕ್ಷ ಆರ್.ಬಸವರಾಜ, ಉಪಾಧ್ಯಕ್ಷ ಸರಡಗಿ ಭದ್ರಪ್ಪ,ಪೋಕಲ್ ರವಿಕುಮಾರ್, ವಾಲಿ ಶ್ರಾವಣ,ಗಂಗಾ ಶ್ರಾವಣ, ಶೆಟ್ಟಿ ಭಾಸ್ಕರ್ , ಶೆಟ್ಟಿ ಸುರೇಶ್, ಸಂಪತ್ತಕುಮಾರ್, ಸಂತೋಷ ಕುಮಾರ್ ಚಿಂತಪಳ್ಳಿ, ಮುನ್ನೇಂದ್ರ ಚಿಂತಪಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಜಾತ್ರೆಗೆ ತೆಲಂಗಾಣ ರಾಜ್ಯದ ವಿವಿಧ ಭಾಗ, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗದಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಪೊಲೀಸ್ ಇಲಾಖೆಯು ಯಾವುದೇ ಅಹಿತಕರ ಘಟನೆ ಜರುಗದಂತೆ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು.
