‘ ಹೆಲ್ಮೆಟ್ ಪ್ರಾಣ ರಕ್ಷಕ, ಅದನ್ನು ನಿರ್ಲಕ್ಷಿಸದಿರಿ’..
ಪ್ರಿಯ ಯಾದಗಿರಿಧ್ವನಿ.ಕಾಮ್ ಓದುಗರೇ, ಸಾಕಷ್ಟು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರುವುದಲ್ಲದೇ ಅವರನ್ನು ನಂಬಿಕೊಂಡ ಕುಟುಂಬವೂ ತೊಂದರೆ ಗೀಡಾಗುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣೆದುರಿವೆ. ಹಾಗಾಗಿ ತಮ್ಮ ಪ್ರಾಣದ ಸುರಕ್ಷತೆಗೆ ಪ್ರತಿಯೊಬ್ಬ ರೂ ಇಂದಿನಿಂದಲೇ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಪ್ರಯಾಣಿಸಿ.
ಯಾದಗಿರಿ: ಜಿಲ್ಲೆಯ ಎಲ್ಲಾ ದ್ವಿಚಕ್ರ ವಾಹನ ಸವಾರರು, ಸರ್ಕಾರದ ಆದೇಶದಂತೆ ಹೆಲೈಟ್ ಧರಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಪೊಲೀಸ ಅಧೀಕ್ಷಕರು ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳ ಸವಾರರು ಹೆಲೈಟ್ ಧರಿಸದೇ ವಾಹನಗಳಲ್ಲಿ ಸಂಚರಿಸುವಾಗ ರಸ್ತೆ ಅಪಘಾತಗಳು ಉಂಟಾಗಿ, ಸಾರ್ವಜನಿಕರು ಗಂಭೀರವಾಗಿ ಗಾಯಗೊಂಡಿದ್ದು, ಅಲ್ಲದೇ ಕೆಲವರು ಮೃತಪಟ್ಟಿರುವ ಘಟನೆಗಳು ಸಂಭವಿಸಿರುತ್ತವೆ.
ರಸ್ತೆ ಸಂಚಾರ ಸುರಕ್ಷತೆ ದೃಷ್ಟಿಯಿಂದ ರಸ್ತೆ ಅಪಘಾತಗಳಲ್ಲಿ ಆಗುವ ಸಾವು ನೋವುಗಳನ್ನು ತಪ್ಪಿಸಲು ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ತಪ್ಪದೇ ಹೆಲೈಟ್ ಧರಿಸಬೇಕು ಎಂದು ತಿಳಿಸಿದ್ದಾರೆ.
ಇದೇ ಡಿ. 01 ರಿಂದ ಯಾದಗಿರಿ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನಗಳ ಸವಾರರು ಸಂಚರಿಸುವಾಗ ಹೆಲೈಟ್ ಧರಿಸುವುದು ಕಡ್ಡಾಯವಾಗಿರುತ್ತದೆ.
ಒಂದು ವೇಳೆ ಹೆಲೈಟ್ ಧರಿಸದೇ ದ್ವಿಚಕ್ರ ವಾಹಗಳನ್ನು ಚಲಾಯಿಸುವ ಸವಾರರ ಮೇಲೆ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.