ಯಾದಗಿರಿ: ತಾಲ್ಲೂಕಿನ ವರ್ಕನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರ ಆಯ್ಕೆ ಚುನಾವಣೆ ಸೋಮವಾರ ಜರುಗಿತು ಅಧ್ಯಕ್ಷರಾಗಿ ಹಣಮಂತಿ ಬಾಲಪ್ಪ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿತ್ತು, ಹಣಮಂತಿ ಗಂಡ ಬಾಲಪ್ಪ ಕೂಯಿಲೂರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿದ್ದ ಯಾದಗಿರಿ ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಎಸ್ ಬಾಬಲಗಿ ನಾಮಪತ್ರ ಪರಿಶೀಲನೆ ಮಾಡಿ ಹಣಮಂತಿ ಗಂಡ ಕೂಯಿಲೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ವೀರೇಶರೆಡ್ಡಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗಾಲೀಬ್ ಸಾಬ್. ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ ಬಳಿಚಕ್ರ. ಹಣಮಂತ. ನಿರ್ಮಲಮ್ಮ ಕಂಟಗನೋರ. ಸಣ್ಣ ಮರೆಮ್ಮ. ಹಣಮಂತ ಕಲ್ಯಾಣಿ. ಲಲಿತಾ ಶರಣಗೌಡ ಕೂಯಿಲೂರ. ಮೋನಪ್ಪ ಉಪ್ಪಾರ. ಬುಸ್ಸಪ್ಪ ಕೂಯಿಲೂರ. ಮಲೇಶಿ ಪಗಲಾಪೂರ. ದೇವಪ್ಪ ಪಗಲಾಪೂರ. ಅರುಣಾ ಭೀಮರೆಡ್ಡಿ. ದೇವಿಂದ್ರಮ್ಮ ಎಮ್ ಹೊಸ್ಸಳ್ಳಿ. ಜಯರಾಮ್. ಶರಣಮ್ಮ ಸೋಮಪ್ಪ ಮೂಷ್ಟೂರ. ನಾಗಪ್ಪ ಮೂಷ್ಟೂರ ಸಭೆಯಲ್ಲಿ ಭಾಗವಹಿಸಿದ್ದರು.