ಸಿಂದಗಿಯಲ್ಲಿ 21 ನೇ ಜಾನುವಾರು ಗಣತಿಗೆ ಅಧಿಕೃತ ಚಾಲನೆ
ವಿಜಯಪುರ: ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯ ವತಿಯಿಂದ 21 ನೇ ಜಾನುವಾರು ಗಣತಿ ಕಾರ್ಯಕ್ಕೆ ಸಿಂದಗಿ ನಗರದಲ್ಲಿ ಇತ್ತೀಚೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ತಾಲೂಕಿನ ಜಾನುವಾರುಗಳ ನಿಖರ ಮಾಹಿತಿಗಾಗಿ ಗಣತಿ ಕಾರ್ಯ ಮಾಡುವುದು ಅತ್ಯಂತ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಗಣತಿದಾರರು ಮನೆ ಮನೆಗೆ ಬಂದಾಗ ಸಂಬಂಧ ಪಟ್ಟ ಮಾಹಿತಿ ನೀಡಿ ಸಹಕರಿಸಬೇಂದು ಸಾರ್ವಜನಿಕರಲ್ಲಿ ಹಾಗೂ ರೈತರಲ್ಲಿ ಮನವಿ ಮಾಡಿದರು.
ಸಿಂದಗಿ ತಾಲ್ಲೂಕಿನಾದ್ಯಂತ ಒಟ್ಟು ಏಳು ಜನ ಮತ್ತು ಆಲಮೇಲ ತಾಲ್ಲೂಕಿನ ಐದು ಜನ ಗಣತಿದಾರರು ಗಣತಿ ಕಾರ್ಯ ಮಾಡಲಿದ್ದು ಅವರೊಂದಿಗೆ ಇಬ್ಬರು ಮೇಲ್ವಿಚಾರಕರು ಇರುತ್ತಾರೆ ಹಾಗೂ ಸಿಂದಗಿ ಪಟ್ಟಣದಲ್ಲಿ ಜನರಲ್ಲಿ ವ್ಯಾಪಕ ಪ್ರಚಾರ ಮೂಡಿಸಲು ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಶು ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯ ಪಶುವೈಧ್ಯಾಧಿಕಾರಿ ಡಾ.ರಾಮು ರಾಠೋಡ, ಮುಖ್ಯ ಪಶುವೈದ್ಯ ಡಾ.ಮಾರುತಿ ತಡ್ಲಗಿ, ಡಾ.ಶರಣಗೌಡ ಬಿರಾದಾರ, ಜಾನುವಾರು ಅಭಿವೃದ್ಧಿ ಅಧಿಕಾರಿ ಎಚ್.ಎಸ್.ಶೀತಿಮನಿ, ಪಶುವೈದ್ಯ ಪರೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭು, ಎಚ್, ಬಿರಾದಾರ, ಹಿರಿಯ ಪಶುಪರೀಕ್ಷಕರಾದ ಅಶೋಕ ಅಂಜುಟಗಿ, ವಾಯ್.ಜಿ.ಚೌದ್ರಿ, ಸುಭಾಷ್ ಬಗಲಿ,ಕಿರಿಯ ಪಶುವೈದ್ಯ ಶಿಲ್ಪಾ ಹುಮನಬಾದ,ನಮೃತಾ ರಾಠೋಡ ಹಾಗೂ ಇತರರಿದ್ದರು.