ವಿಠ್ಠಲ್ ಯಾದವ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ
ಗುರುಮಠಕಲ್: ರಾಜ್ಯ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಯಾದವ ಸಮಾಜದ ರಾಜ್ಯ ಉಪಾದ್ಯಕ್ಷರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ವಿಠಲ ಯಾವದ್ ಅವರು ಆಯ್ಕೆಯಾಗಿದ್ದಕ್ಕೆ ಜಿಲ್ಲಾ ವಿಠ್ಠಲ್ ಯಾದವ ಅಭಿಮಾನಿಗಳ ಸಂಘದ ಅಧ್ಯಕ್ಷ ಯಲ್ಲಪ್ಪ ಯಾದವ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಹಲವಾರು ವರ್ಷಗಳಿಂದ ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ರಂಗಗಳಲ್ಲಿ ಸೇವೆಗೈಯುತ್ತಿರುವ ನಮ್ಮ ಸಮಾಜದ ನೆಚ್ಚಿನ ನಾಯಕರಾದ ವಿಠಲ ಯಾದವ್ ಅವರಿಗೆ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ನಮಗೆ ಅತ್ಯಂತ ಸಂತಸ ತಂದಿದೆ ಎಂದರು.
ಮುಂದಿನ ದಿನಗಳಲ್ಲಿ ಶ್ರೀಯುತ ವಿಠಲ್ ಯಾದವ್ ಅವರಿಗೆ ಇನ್ನೂ ಉನ್ನತ ಮಟ್ಟದ ಸ್ಥಾನಮಾನಗಳು ಲಭಿಸಲಿ, ಇನ್ನು ಹೆಚ್ಚಿನ ಜನ ಸೇವೆ ಅವರಿಂದ ಆಗಲಿ ಎಂದು ವೈಯಕ್ತಿಕ ಮತ್ತು ಯಾದವ ಸಮಾಜದ ಸಮಸ್ತ ಬಾಂದವರ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.