ಪಟ್ಟಣದಲ್ಲಿ ಛಾಯಾಗ್ರಹಕರ ಸಂಘದಿಂದ ಆಚರಣೆ | ಸಂಭ್ರಮದ ಕ್ಷಣಗಳನ್ನು ಸಂಗ್ರಹಿಸಿ ಕೊಡುವ ಕಲೆ ಅಧ್ಭುತ


ಗುರುಮಠಕಲ್: ಫೋಟೊಗ್ರಾಫಿ ಕಲೆಯು ಪ್ರತಿಯೊಂದು ಸಂಭ್ರಮ ಕ್ಷಣವನ್ನು ಕ್ಲಿಕ್ಕಿಸಿ, ಸೆರೆಹಿಡಿಯುವ ಮೂಲಕ ನೆನಪು ಶಾಶ್ವತವಾಗಿ ಉಳಿಸುವ ಅಧ್ಭುತ ಕಲೆಯಾಗಿದೆ ಎಂದು ಸಂಘದ ಶ್ರೀನಿವಾಸ ದುರ್ಗಮ್ ಹೇಳಿದರು. ಪಟ್ಟಣದಲ್ಲಿ Joseph Nicephore Niep ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಇಂದು ಆಧುನಿಕವಾಗಿ ಬೆಳೆಯುತ್ತಿರುವ ವೈಜ್ಞಾನಿಕತೆಗೆ ತಕ್ಕಂತೆ ಫೋಟೋಗ್ರಾಫರ್ ಗಳು ಸ್ಪರ್ದೆ ಮಾಡುವ ಅನಿವಾರ್ಯತೆ ಎದುರಾಗಿದೆ.

ದುಬಾರಿ ಬೆಲೆ ಬಾಳುವ ಸಾಕಷ್ಟು ಹೊಸ ಕ್ಯಾಮೆರಾಗಳನ್ನು ಖರೀದಿಸಿ, ಮದುವೆ ಇನ್ನಿತರ ಶುಭ ಕಾರ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಎಲ್ಲರ ಸುಖ, ಸಂತೋಷದಲ್ಲಿ ಭಾಗವಹಿಸುವ ಫೋಟೋಗ್ರಾಫರ ಗಳ ಜೀವನ ಕಷ್ಟದಲ್ಲಿ ಸಾಗಿದೆ. ಸರ್ಕಾರದ ಲಾಭ ಪಡೆಯಲು ಕರೆ ನೀಡಿದರು.

ಈ ವೇಳೆ ಹಿರಿಯರಾದ ಭೀಮಶಪ್ಪ, ಜಗದೀಶ್ ಶ್ರೀ ಗಿರಿ, ಹಣಮಂತರಾವ ರಂಗಾಪುರ, ಶ್ರೀಶೈಲ ಹೊಟ್ಟಿ, ಮೋಹನ್ ಮೇಂಗಜಿ, ಸತೀಶ ಜನಾರ್ಧನ, ನರೇಶ್ ಬಸೂದೆ, ಹಣಮಂತು ಬೈಂಡ್ಲಾ, ಬಾಳಪ್ಪ ರಂಗಾಪುರ, ಮಂಜುನಾಥ ಹಬೀಬ್, ವಿಜಯ ಬಸೂದೆ, ಯಶವಂತ ರಂಗಾಪುರ, ಹನಮಂತರಾವ್ ಬಸೂದೆ, ರಘು ಜನಾರ್ಧನ, ಜಯೇಶ ಗೋಂಧಳೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!