ನಮ್ಮ ಕರುನಾಡು ರಕ್ಷಣಾ ವೇದಿಕೆಯಿಂದ 69 ನೇ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ರಸ ಮಂಜರಿ, ಸಾಧಕರಿಗೆ ಸನ್ಮಾನ..

ಯಾದಗಿರಿ: ನ. 25ರಂದು ನಗರದ ವಿದ್ಯಾಮಂಗಲದ ಕಾರ್ಯಾಲಯದಲ್ಲಿ ಖುಷಿ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಮ್ಮ ಕರುನಾಡು ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಮತ್ತು ಕರುನಾಡು ಸೇವಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ದಿ. ಡಾ. ವೀರಬಸವಂತರೆಡ್ಡಿ ಮುದ್ನಾಳ ಮತ್ತು ದಿ.ವೆಂಕಟರೆಡ್ಡಿ ಮುದ್ನಾಳ್ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಮುರುಘ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ, ಹಾಗೂ ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶಾಸಕರಾದ ಚೆನ್ನಾರೆಡ್ಡಿಗೌಡ ಪಾಟೀಲ್ ತುನ್ನೂರು, ಗುರುಮಠಕಲ್ ಮತಕ್ಷೇತ್ರದ ಶಾಸಕರದ ಶರಣುಗೌಡ ಕಂದಕೂರ ಹಾಗೂ ನಮ್ಮ ಕರುನಾಡು ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಟಿ. ಎನ್ ಶಂಕರಗೌಡ, ಹಾಗೂ ಬಿಜೆಪಿ ಯುವ ಮುಖಂಡರಾದ ಮಹೇಶ್ ರೆಡ್ಡಿ ಮುದ್ನಾಳ್, ನಗರಸಭೆ ಅಧ್ಯಕ್ಷರಾದ ಲಲಿತಾ ಅನಪುರ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷರಾದ ವಿನಾಯಕ ಮಾಲಿಪಾಟೀಲ್ ರವರು ಮತ್ತು ಬಿಜೆಪಿ ಹಿರಿಯ ಮುಖಂಡರಾದ ರಾಚನ ಗೌಡ ಮುದ್ನಾಳರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದರು.

ಕಲಬುರಗಿಯ ಮಾಜಿ ಸಂಸದರಾದ ಉಮೇಶ್ ಜಿ. ಜಾದವ್, ಕಾಂಗ್ರೆಸ್ ಹಿರಿಯ ಮುಖಂಡರಾದ ಸಿದ್ದಪ್ಪಗೌಡ  ಕಾಳೆಬೆಳಗುಂದಿ ಮತ್ತು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ್ ಹತ್ತಿಕುಣಿರವರು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಲಿದ್ದಾರೆ.

ಯಾದಗಿರಿ ಡಿಎಚ್ಒ ಎಂ.ಎಸ್ ಪಾಟೀಲ್ ಮತ್ತು ಬಿಜೆಪಿ ಮುಖಂಡರಾದ ಮಣಿಕಂಠ ರಾಠೋಡ್ ಮತ್ತು ಯಾದಗಿರಿ ಸಿಪಿಐ ಸುನಿಲ್ ಕುಮಾರ್ ಮೂಲಿಮನಿ ನೇತೃತ್ವದಲ್ಲಿ ಕಲಾತಂಡಗಳ ಚಾಲನೆ ನೀಡಲಾಗುವುದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕರುನಾಡು ರಕ್ಷಣಾ ವೇದಿಕೆ ಜಿಲ್ಲೆಯ ಅಧ್ಯಕ್ಷರಾದ ರವಿ ಕೆ ಮುದ್ನಾಳ ಅವರು ವಹಿಸಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕರುನಾಡು ಸೇವಾ ಸಾಧಕ ಪ್ರಶಸ್ತಿ ಪುರಸ್ಕೃತರಾದ ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಹನುಮಂತರೆಡ್ಡಿ ಹಾಗೂ ಇತ್ತೀಚಿಗೆ ನೂತನವಾಗಿ ಪಿಎಸ್ಐ ಆಗಿ ಆಯ್ಕೆಯಾದ ಸಕ್ರ ನಾಯಕ ತಾಂಡದ ಕು. ರೇಣುಕಾ ರಾಥೋಡ್,  ಛಾಯಾಗ್ರಾಹಕರಾದ ಅರುಣ್ ಕುಮಾರ್ ಮಾಸನ್, ಗೃಹರಕ್ಷಕ ಸಿಬ್ಬಂದಿಯಾದ ಮೋಹನ್ ಲಾಲ್ ಜಾದವ್, ರುಚಿ ಟ್ರಸ್ಟ್ ನ ಸಾಹಿತಿ ಮತ್ತು ನಿರ್ದೇಶಕ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಚಿ ಪರಸನಹಳ್ಳಿ, ಅರ್ಚನಾ ಪ್ರದೀಪ್ ಕುಮಾರ್, ನೂತನ ವಸತಿ ಮೇಲ್ವಿಚಾರಕರಾದ ಮುದ್ನಾಳ ದೊಡ್ಡ ತಾಂಡದ ಸುನಿಲ್ ಭೀಮಾ ಪವರ್ ಮುದ್ನಾಳ್ ಹಾಗೂ ಸಕ್ಸಸ್ ಗ್ರಂಥಾಲಯದ ಮುಖ್ಯಸ್ಥರಾದ ಮಾಳಪ್ಪ ಯಾದವ್ ಕಾಡಂಗೇರಾ ಅವರಿಗೆ ಕರುನಾಡ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಗುರುಮಠಕಲ್ ಅಧ್ಯಕ್ಷ ಆಶೋಕ ರೆಡ್ಡಿ, ಯಲ್ಲಾಲಿಂಗ ರೆಡ್ಡಿ, ನಾಗರಾಜ್ ನಾಯಕ್, ಶರಣು ಗೋಪಾಲ್ ರೆಡ್ಡಿ, ತಿಪ್ಪಯ್ಯ ವಂಕಸಂಬರ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!