ಜಿಲ್ಲಾದ್ಯಂತ ಸಂಭ್ರಮ 76 ನೇ ಗಣರಾಜ್ಯೋತ್ಸವ ಆಚರಣೆ| ಗಡಿ ತಾಲೂಕು ಗುರುಮಠಕಲ್ ನಲ್ಲಿ ಶಾಸಕ ಶರಣಗೌಡ ಕಂದಕೂರ ಭಾಗಿ
ಯಾದಗಿರಿ: ಸಂವಿಧಾನಕ್ಕೆ ಬದ್ಧರಾಗಿ ನಮ್ಮ ಕರ್ತವ್ಯವನ್ನು ದೇಶ, ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲು ಮುಡುಪಾಗಿಟ್ಟು, ಶ್ರಮಿಸೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಂದು 76ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನದಿಂದಾಗಿ ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಸಮಾನ ಅವಕಾಶ ದೊರೆತಿದೆ. ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಸಹ ದೊರಕಿದ್ದು, ಜನ ಸಾಮಾನ್ಯರಿಗೂ ಎಲ್ಲವನ್ನು ಸಿಗುವ ರೀತಿಯಲ್ಲಿ ನೆರವಾಗಿದೆ. ಇಂತಹ ಹೆಮ್ಮೆಯ ಸಂವಿಧಾನ ಕ್ಕೆ ಬದ್ಧರಾಗಿ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಸಹ ಪ್ರಾಮಾಣಿಕ ವಾಗಿ ನಿರ್ವಹಿಸಬೇಕಾಗಿದೆ. ಈ ದೇಶದ, ರಾಜ್ಯದ ಮತ್ತು ಜಿಲ್ಲೆಯ ಕೀರ್ತಿಗಾಗಿ ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಭಾರತದ ಸಂವಿಧಾನವು 1949 ರ ನವೆಂಬರ್ 26ರಂದು ಅಂಗೀಕಾರವಾಗಿ, ಜ. 26ರಂದು ಜಾರಿಗೆ ಬಂದಿದ್ದು, ಇದರ ಹಿನ್ನೆಲೆಯಲ್ಲಿ ಈ ದಿನವನ್ನು ಅತ್ಯಂತ ಗೌರವದಿಂದ ನಾವು ಆಚರಿಸುತ್ತಿದ್ದು ಇದಕ್ಕಾಗಿ ಶ್ರಮಿಸಿದ ಸಂವಿಧಾನದ ಪಿತಾಮಹ, ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುವುದಾಗಿ ಹೇಳಿದರು.
ನಮ್ಮ ದೇಶದ ಅತ್ಯುನ್ನತ ಕಾನೂನು ಸಂವಿಧಾನವಾಗಿದೆ. ಸರ್ಕಾರವಾಗಲಿ,ಯಾರೇ ಪ್ರಭಾವಿ ಶ್ರೀಮಂತರಾಗಿರಲಿ, ಸಾಮಾ ನ್ಯ ಪ್ರಜೆ ಆಗಿರಲಿ ಸಂವಿಧಾನವನ್ನು ಮೀರಿ ನಡೆಯುವಂತಿಲ್ಲ. ನಮ್ಮ ಸಂವಿಧಾನದ ನೀತಿ, ನಿಯಮಗಳೆಲ್ಲವೂ ಸಮಾನವಾಗಿವೆ. ಸರ್ವಶ್ರೇಷ್ಠ, ಗೌರವಪೂರ್ಣವಾದ ನಮ್ಮ ಸಂವಿಧಾನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಬರೆಯಲಾ ಗಿದೆ. ಈವರೆಗೆ ಒಟ್ಟು 105 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಈಗ ಸಂವಿಧಾನದಲ್ಲಿ 12 ಅನುಚ್ಛೇದಗಳು, 25 ಭಾಗಗಳು ಹಾಗೂ 470 ವಿಧಿಗಳಿವೆ ಎಂದು ಹೇಳಿದ ಅವರು ನಮ್ಮ ಸಂವಿಧಾನಕ್ಕೆ ಹಾಗೂ ಈ ದೇಶಕ್ಕೆ ನಾವು ಸದಾ ಗೌರವಿ ಸೋಣ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ನ್ನು ಜಾರಿಗೊಳಿಸುವ ಮೂಲಕ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆ ಗಳಂತಹ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ವಿಶೇಷವಾಗಿ ಬಡ ಜನರಿಗೆ ಹಲವು ರೀತಿಯಲ್ಲಿ ನೆರವಾಗಿರುವ ಸರ್ಕಾರ ಈ ಯೋಜನೆಗಳಿ ಗಾಗಿ 65,000 ಕೋ.ರೂಗಳನ್ನು ಈವರೆಗೆ ವ್ಯಯ ಮಾಡಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5000 ಕೋ. ರೂಗಳನ್ನು ಮಂಜೂರು ಮಾಡುವ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಿದೆ. ಅದರಂತೆ ಕೇಂದ್ರ ಮಾಜಿ ಸಚಿವರು ಆಗಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್ ಅವರ ನಿರಂತರ ಪ್ರಯತ್ನದ ಫಲವಾಗಿ 371 (ಜೆ) ಜಾರಿಗೊಂಡು ಈ ಭಾಗದ ಉದ್ಯೋಗ ಮತ್ತು ಶಿಕ್ಷಣದ ಸಮಸ್ಯೆ ನಿವಾರಣೆಯಾಗಿ, ಪ್ರಗತಿ ಸಾಧಿಸಲು ನೆರವಾಗಿದೆ. ವಿಶೇಷವಾಗಿ ನಿರುದ್ಯೋಗಿ ಯುವ ಜನಾಂಗಕ್ಕೆ ಹಲವು ರೀತಿಯಲ್ಲಿ ಇದು ನೆರವಾಗಿದೆ ಎಂದರು.
ಜಿಲ್ಲೆಯ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ದೊರಕಿಸಲು ಜಲಧಾರೆ, ಜಲಜೀವನ್ ಮಿಷನ್ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆರು ಇಂದಿರಾ ಕ್ಯಾಂಟೀನ್ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ಮಹತ್ವಕಾಂಕ್ಷಿ ಜಿಲ್ಲೆ ಆಗಿರುವ ಯಾದಗಿರಿ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವು ಅಭಿವೃದ್ಧಿಪರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ದವರಿಗೆ ಸನ್ಮಾನಿಸಲಾಯಿತು. ಅಸಾಧಾರಣ ಸಾಹಸ ತೋರಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಕೆಳದಿ- ಹೊಯ್ಸಳ ಪ್ರಶಸ್ತಿ ನೀಡ ಲಾಯಿತು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸ ಲಾಯಿತು,ಇತರೆ ಸಾಧಕರಿಗೆ ಸನ್ಮಾನಿಸಲಾಯಿತು.
ನಗರ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ್, ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಪ್ರಭಾರಿ ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್,ಅಪರ್ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಮಕ್ಕಳ ದೇಶಭಕ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.