ಯಾದಗಿರಿ : ಜನರಿಗೆ ಶುದ್ಧ ಕುಡಿಯುವ ನೀರು ಅತ್ಯಗತ್ಯ ವಾಗಿದ್ದು, ಈ ನಿಟ್ಟಿನಲ್ಲಿ ಕಿಯಾ ಅಕ್ವಾ ಮಿನರಲ್ ವಾಟರ್ ಫ್ಯಾಕ್ಟರಿ ಪ್ರಾರಂಭಿಸಿದ ಸಂಸ್ಥೆಯವರಿಗೆ ಶುಭವಾಗಲಿ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ವಡಗೇರಾ ತಾಲೂಕಿನ ತಡಬಿಡಿ ಗ್ರಾಮದ ಹೊರವಲಯದಲ್ಲಿ ಕಿಯಾ ಅಕ್ವಾ ಮಿನರಲ್ ವಾಟರ್ ಫ್ಯಾಕ್ಟರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಹಲವು ಯೋಜನೆ ಗಳಲ್ಲಿ ಸ್ಪಂದಿಸುತ್ತಿದೆ, ಅದರ ಜೊತೆಗೆ ಖಾಸಗಿಯವರು ಕೂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ ಜನರಿಗೆ ಕೈಗೆಟುಕುವ ದರದಲ್ಲಿ ನೀರು ಒದಗಿಸುತ್ತಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ರಾಚಣ್ಣ ಗೌಡ ಮುದ್ನಾಳ ಮತ್ತು ಬಿಜೆಪಿ ಯುವ ಮುಖಂಡರಾದ ಮಹೇಶರಡ್ಡಿ ಗೌಡ ಮುದ್ನಾಳ ಅವರು ಭಾಗವಹಿಸಿ, ಫ್ಯಾಕ್ಟರಿ ರೂಪರೇಷಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಬೋರ್ಡ್ ಆಫ್ ಡೈರೆಕ್ಟರ್ಸ್ ರಾದ ಡಾ. ರಾಜೇಂದ್ರ ಪಾಟೀಲ್, ಡಾ ಮಲ್ಲಿಕಾರ್ಜನ, ಡಾ. ಶರಣರೆಡ್ಡಿ ಕೊಡ್ಲಾ, ವಿನೋದ ಗೌಡೂರ, ಶಿವಾರೆಡ್ಡಿ ಕೊಡ್ಲಾ , ಲಿಂಗಣ್ಣಗೌಡ ಯಕಚಿಂತಿ, ಎಂ ಬಿ ಪಾಟೀಲ್ , ಬಿ ಆರ್ ಗೌಡೂರ , ಡಾ ಶರಣಬೋಪಾಲ ರೆಡ್ಡಿ ನಾಯ್ಕಲ್, ಡಾ ಸಿದ್ದಣ್ಣಗೌಡ ಕಡಮ ನೋರ , ಅಂಬ್ರೆಶಗೌಡ ದರ್ಶನಾಪುರ, ವಿಶ್ವನಾಥರೆಡ್ಡಿ ದರ್ಶನಾಪುರ, ಶರಣಗೌಡ ಗುಂಡಗುರ್ತಿ, ಬಸರೆಡ್ಡಿ ಅನಪುರ ,ಖಂಡಪ್ಪ ದಾಸನ, ಡಾ ಕಾಮರೆಡ್ಡಿ , ಭೀಮನಗೌಡ ಕ್ಯಾತನಾಳ್ , ಬಸವರಾಜ ಚಂಡರಕಿ ಮತ್ತು ಸುತ್ತಮುತ್ತಲಿನ ಮುಖಂಡರು ಗ್ರಾಮಸ್ಥರು ಯುವಕರು ಇದ್ದರು.