ಗಡಿ ಜಿಲ್ಲೆ ರೈತರಿಗೆ ಬೆಳೆ ಒಳಗುವ ಭೀತಿ | ಏಪ್ರಿಲ್ 20 ರವರಗೆ ನಾರಾಯಣಪುರ ಡ್ಯಾಂ ನೀರು ಹರಿಸುವಂತೆ ಮಹೇಶಗೌಡ ಸುಬೇದಾರ್ ಆಗ್ರಹ

ಯಾದಗಿರಿ: ರಾಜ್ಯ ಸರಕಾರ ಕಳೆದ ತಿಂಗಳು ನಾರಾಯಣಪುರ ಡ್ಯಾಂ ನೀರು ತೆಲಂಗಾಣಕ್ಕೆ ಹರಿಸಿ ಈಗ ಯಾದಗಿರಿ ಜಿಲ್ಲೆಯ ಕೊನೆಭಾಗದ ಕಾಲುವೆಗಳಿಗೆ ನೀರು ಹರಿಸದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ತೀವ್ರ  ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಸರಕಾರ ಏಪ್ರಿಲ್ 20 ರ ವರಗೆ ನಾರಾಯಣಪುರ ಡ್ಯಾಂ ನೀರು ಹರಿಸುವಂತೆ ಒತ್ತಾಯ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳಿಸಗರ ಗ್ರಾಮದ ಕೊನೆಭಾಗದ ವಿತರಣೆ ಕಾಲುವೆ ಹಾಗೂ ರೈತರ ಜಮೀನು ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ತೆಲಂಗಾಣಕ್ಕೆ ಕೃಷ್ಣಾ ನದಿ ಮೂಲಕ ಸರಕಾರ ನೀರು ಹರಿಸಿದೆ.

ರಾಜ್ಯದ ಜನ ಹಾಗೂ ಅನ್ನದಾತರ ಕಾಳಜಿ ಮರೆತು ಸರಕಾರ ತೆಲಂಗಾಣಕ್ಕೆ ನೀರು ಹರಿಸಿತ್ತು. ಈಗ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನಾರಾಯಣಪುರ ಡ್ಯಾಂ ನಿಂದ ಕೊನೆ ಭಾಗದ ಕಾಲುವೆಗಳಿಗೆ ನೀರು ಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಭಾಗದ ಕಾಲುವೆಗಳಿಗೆ ನೀರು ಬಾರದಕ್ಕೆ ರೈತರು ಬೆಳೆದ ಶೇಂಗಾ, ಸಜ್ಜೆ ಹಾಗೂ ಇನ್ನಿತರ ಒಣಗುತ್ತಿದೆ.

ನಾರಾಯಣಪುರ ಎಡದಂಡೆ ಕಾಲುವೆ ಮೂಲಕವೂ ಕೊನೆ ಭಾಗದ ಕಾಲುವೆಗೆ ನೀರು ತಲುಪುವಂತೆ ಕ್ರಮವಹಿಸಿ ರೈತರ ಜಮೀನಿಗೆ ನೀರು ಹರಿಸುವ ಕಾಳಜಿ ತೊರಬೇಕೆಂದರು. ತೆಲಂಗಾಣಕ್ಕೆ ನೀರು ಹರಿಸಿ ಈಗ ರೈತರ ರಕ್ತ ಕಣ್ಣೀರು ತರಿಸುವಂತಾಗಿದೆ. ತೆಲಂಗಾಣಕ್ಕೆ ಬಿಟ್ಟ ಹಿನ್ನಲೆ ನಮ್ಮ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದರು.

ನೀರಿಗಾಗಿ ಮತ್ತೆಷ್ಟು ರೈತರು ಬಲಿಬೇಕು..?: ಜಮೀನಿಗೆ ನೀರು ಬಾರದಕ್ಕೆ ಚಿಂತಿತನಾದ ರೈತ ಸಜ್ಜೆ ಹಾನಿಗೊಳಗಾಗಿ ಹಾಗೂ ಮೆಣಸಿನಕಾಯಿ ಬೆಳೆಗೆ ಒಳ್ಳೆಯ ಬೆಲೆ ಸಿಗದಕ್ಕೆ ಶಹಾಪುರನ ಹಳಿಸಗರದ ರೈತ ಮಲ್ಲಣ್ಣ ಹಳಿಸಗರ ( 52) ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೀರು ಬಾರದಕ್ಕೆ ಹಾಗೂ ಸಾಲಬಾಧೆಯಿಂದ ರೈತ ಈಗ ಮೃತಪಟ್ಟಿದ್ದಾನೆ. ಇದೆ ರೀತಿ ನೀರು ಹರಿಸದಿದ್ದರೆ. ಇನ್ನೆಷ್ಟು ರೈತರು ಬಲಿಯಾಗಬೇಕೆಂದು ಸುಬೇದಾರ್ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಮೃತ ರೈತ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕೆಂದು ಸುಬೇದಾರ ಅವರು ಒತ್ತಾಯ ಮಾಡಿದ್ದಾರೆ. ಕೂಡಲೇ ಸರಕಾರ ಏಪ್ರಿಲ್ 20 ರ ವರಗೆ ನೀರು ಹರಿಸಿ ರೈತರ ಜಮೀನಿಗೆ ನೀರು ತಲುಪಿಸುವ ಕಾರ್ಯ ಮಾಡಬೇಕೆಂದರು.

ಈ ವೇಳೆ ರೈತ ಸಂಘದ ಶಹಾಪುರ ತಾಲೂಕಾಧ್ಯಕ್ಷ ಧರ್ಮಣ್ಣ, ಅಶೋಕ್ ಕಣಿಕೆದಾರ, ಬಸವರಾಜ ರತ್ತಾಳ, ಚಂದ್ರಶೇಖರ ಸೇರಿದಂತೆ ಅನೇಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!