ತಾಲ್ಲೂಕಿನ ಆಶನಾಳ ಗ್ರಾಮದಲ್ಲಿ ಪುರಾತನ ಅವಶೇಷಗಳ ಪತ್ತೆ….

ಯಾದಗಿರಿ:  ಜಿಲ್ಲೆಯಿಂದ ಕೇವಲ 12ಕಿ.ಮೀ. ದೂರವಿರುವ ಆಶನಾಳ ಗ್ರಾಮವು ಒಂದು ಪುಟ್ಟ ಹಳ್ಳಿ ಆಗಿದ್ದು, ಈ ಹಳ್ಳಿಯಲ್ಲಿ ಹಲವಾರು ಪುರಾತನ ಅವಶೇಷಗಳು ಕಂಡು ಬಂದಿವೆ.

ಅವುಗಳಲ್ಲಿ ವೀರಗಲ್ಲು ಪ್ರಮುಖವಾಗಿದ್ದು ಅವುಗಳ ಜೊತೆ ನಾಗ ಶಿಲ್ಪಗಳು ಕಂಡು ಬಂದಿವೆ. ಯಾದಗಿರಿ ಜಿಲ್ಲೆಯು ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದ್ದು ಅವರ ಕಾಲದ ವೀರಗಲ್ಲುಗಳು ಇರಬಹುದು ಎಂದು ಹೇಳಲಾಗಿದೆ.

ಗ್ರಾಮದಲ್ಲಿ ಸುಮಾರು 17 ನೇ ಶತಮಾನಕ್ಕೆ ಸಂಬಂಧಪಟ್ಟ ಕತ್ತಿ ಹಿಡಿದಿರುವ ವೀರಗಲ್ಲು, ಭರ್ಚಿ ಹಿಡಿದಿರುವ ವೀರಗಲ್ಲು, ಕೋವಿ ಹಿಡಿದಿರುವ ವೀರಗಲ್ಲುಗಳು ಕಂಡು ಬಂದಿವೆ. ಈ ಕಲ್ಲುಗಳು ಕಪ್ಪು ಮತ್ತು ನೀಲಿ ಮಿಶ್ರಿತ ಕಲ್ಲುಗಳಾಗಿದ್ದು ಇವು ಕಲ್ಯಾಣ ಚಾಲುಕ್ಯರು ಬಳಕೆ ಮಾಡಿದ ಕಲ್ಲುಗಳಾಗಿವೆ ಎನ್ನಲಾಗಿದೆ.

ವೀರ ಯೋಧರ ಪ್ರತೀಕವಾದ ವೀರಗಲ್ಲುಗಳು ಮುಳ್ಳು ಕಂಠಿಗಳಲ್ಲಿ ಅನಾಥವಾಗಿ ಬಿದ್ದಿರುವುದು ಅವುಗಳ ರಕ್ಷಣೆ ಮಾಡಬೇಕಿರುವ ನಿಮ್ಮೆಲ್ಲರ ಹೊಣೆಯಾಗಿದ್ದು ಇತ್ತು ಜಿಲ್ಲಾಡಳಿತ ಗಮನಹರಿಸುವ ಅಗತ್ಯವಿದೆ.

ಈಗಲಾದರೂ  ಸಂಬಂಧ ಪಟ್ಟ ಅಧಿಕಾರಿಗಳು ಅವುಗಳ ರಕ್ಷಣೆಗೆ ಮುಂದಾಗಲಿ ಎಂದು ಗ್ರಾಮದ ಭೀಮರಾಯ ಭಜಂತ್ರಿ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ಏನಿದು ವೀರಗಲ್ಲು : ಯೋಧನೊಬ್ಬ ಯುದ್ಧದ ಸಮಯದಲ್ಲಿ ಶತ್ರುಗಳನ್ನ ಸದೆ ಬಡೆದು, ಅದೇ ಸಮಯದಲ್ಲಿ ವೀರಮರಣ ಹೊಂದಿದ ನೆನಪಿಗಾಗಿ ಈ ಕಲ್ಲುಗಳನ್ನ ಆತ ಮರಣ ಹೊಂದಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ.

ವೀರಗಲ್ಲುಗಳು ಯೋಧನೊಬ್ಬ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಸಂಕೇತವಾಗಿ ಸ್ಥಾಪಿಸಲ್ಪಡುತ್ತವೆ. ಮಾಸ್ತಿಕಲ್ಲು ಮತ್ತು ವೀರಗಲ್ಲುಗಳು ಭಾರತದಾದ್ಯಂತ ಅನೇಕ ರೂಪಗಳಲ್ಲಿ ದೊರಕುತ್ತವೆ. ಕರ್ನಾಟಕದಲ್ಲಿ ಕದಂಬರ ಕಾಲದಿಂದಲೂ ವೀರಗಲ್ಲುಗಳನ್ನು ಸ್ಥಾಪಿಸುವ ವಾಡಿಕೆಯು ಮುಂದುವರಿದುಕೊಂಡು ಬಂದಿದೆ ಎನ್ನುವ ಅಂಶವನ್ನು ಇತಿಹಾಸದಲ್ಲಿ ಗಮನಿಸಬಹುದು.

ಕತ್ತಿ ಹಿಡಿದಿರುವ ವೀರಗಲ್ಲು,ಭರ್ಚಿ ಹಿಡಿದಿರುವ ವೀರಗಲ್ಲು,ಕೋವಿ ಹಿಡಿದಿರುವ ವೀರಗಲ್ಲುಗಳು ಕಂಡು ಬಂದಿವೆ. ಈ ಕಲ್ಲುಗಳು ಕಪ್ಪು ಮತ್ತು ನೀಲಿ ಮಿಶ್ರಿತ ಕಲ್ಲುಗಲಾಗಿದ್ದು ಇವು ಕಲ್ಯಾಣ ಚಾಲುಕ್ಯರು ಬಳಕೆ ಮಾಡಿದ ಕಲ್ಲುಗಳಾಗಿವೆ.ಈ ವೀರಗಲ್ಲುಗಳು ಮುಳ್ಳು ಕಂಠಿಗಳಲ್ಲಿ ಅನಾತವಾಗಿ ಬಿದ್ದಿವೆ, ಅವುಗಳ ರಕ್ಷಣೆ ಮಾಡುವದು ನಮ್ಮೆಲ್ಲರ ಹೊಣೆಯಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!