ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು
ಯಾದಗಿರಿ: ಬೆಳಗೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಪ್ರಥಮ ಬಾರಿಗೆ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟ ಗೆದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು ಶಾಲೆಗೆ ಮತ್ತು ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.
ಗ್ರಾಮದ ಮಕ್ಕಳು ಅತ್ಯದ್ಭುತವಾಗಿ ಆಟವಾಡುವ ಮೂಲಕ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಮಕ್ಕಳ ಸಾಧನೆ ಇನ್ನಷ್ಟು ಹೆಚ್ಚಿಸಿ ವಿಭಾಗ ಮಟ್ಟದಲ್ಲೂ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಊರಿಗೆ ಜಿಲ್ಲೆಗೆ ಹೆಸರು ತರಲೆಂದು, ಗ್ರಾಮ ಪಂಚಾಯತ ಸದಸ್ಯ ಮೌನೇಶ ಬೆಳಗೇರಾ ಹಾರೈಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಶಿವಶಂಕರ ಬಾಗ್ಲಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಹನಮಂತ ಹೊಸಮನಿ, ಶಿಕ್ಷಕರಾದ ರವಿ, ಈರಪ್ಪ, ಲಕ್ಷ್ಮೀ ನಾರಾ ಯಣ, ನಿಜಲಿಂಗಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು, SDMC ಅಧ್ಯಕ್ಷ, ಸದಸ್ಯರು, ಊರಿನ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
