ಬೆಳಗೇರಾ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮ
ಯಾದಗಿರಿ: ವಿದ್ಯಾರ್ಥಿಗಳು ಸಧೃಡವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯವಾಗಿದೆ ಎಂದು ಡಾ. ಸುನೀತಾ ಹೇಳಿದರು.
ತಾಲೂಕಿನ ಬೆಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಟೈಟಾನ್ ಕನ್ಯಾ ಸಂಪೂರ್ಣ, ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಆರೋಗ್ಯ ವಂತರಾಗಿರುವುದು ಎಷ್ಟು ಮುಖ್ಯವಾಗಿದೆ ಎನ್ನುವುದು ಹಾಗೂ ಪೋಷಣೆ ಕುರಿತು ಮಾತನಾಡಿದರು.
ಶಿಕ್ಷಕ ಈರಪ್ಪ ಮಾತನಾಡಿ, ಶಿಕ್ಷಣದ ಮಹತ್ವ ಕುರಿತು ವಿವರಿಸಿದರು. ಶಿಕ್ಷಕದಿಂದ ವಂಚಿತಗೊಳ್ಳಬಾರದು. ಶಿಕ್ಷಣವು ಎಲ್ಲಾ ಮಕ್ಕಳು ಪಡೆಯುವ ಹಕ್ಕುಗಳಲ್ಲಿ ಒಂದು. ಪಾಲಕರು ಮಕ್ಕಳನ್ನು ಶಾಲೆಯಿಂದ ಹೊರಗುಳಿಸುವ ಕಾರ್ಯ ಮಾಡಿದರೆ ಅವರ ಶಿಕ್ಷಣದ ಹಕ್ಕು ಕಸಿದಂತಾಗುತ್ತದೆ ಎಂದರು.
ಆರೋಗ್ಯ ಇಲಾಖೆ ಸಿಹೆಚ್ ಓ ಕುಮಾರಿ ಸಿದ್ದಮ್ಮ ಮಾತನಾಡಿ, ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು.
ದೈನಂದಿನ ಜೀವನದಲ್ಲಿ ಪ್ರತಿ ದಿನ ಸ್ವಚ್ಛತೆಯನ್ನು ಕಾಪಾಡಿಕೊ ಳ್ಳಬೇಕು ಮತ್ತು ಎಚ್ಚರವಹಿಸಬೇಕು ಎಂದು ಹೇಳಿದರು.
ಅತಿಥಿ ಶಿಕ್ಷಕ ವೆಂಕಟೇಶ್ ಅವರು ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ರೇಣುಕಾ ಅವರು ಕಾರ್ಯಕ್ರಮದ ಕುರಿತು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯೋಪಾಧ್ಯಾ ಯ ಶಿವಕುಮಾರ್ ಬಾಗ್ಲಿ ಇದ್ದರು. ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಮಹೇಶ್ ಡಿ ಕೆ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆಯ ಸಂಯೋಜಕ ರವಿ ಕುಮಾರ್, ಮರೆಪ್ಪ ಹಿರಿಯ ಸಂಯೋಜಕ ಭಾಗವಹಿಸಿದ್ದರು. ಶಾಲೆಯ ಶಿಕ್ಷಕರಾದ ರವಿ ಪವಾರ್, ಪೂಜಾ , ನಿಜಲಿಂಗಪ್ಪ, ಶಾಲೆಯ SDMC ಅಧ್ಯಕ್ಷ ಸಾಬಣ್ಣ ಪ್ಯಾಟಿ, ಹಾಗೂ SDMC ಸದಸ್ಯರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಮೌಲಾನಾ ನಿರೂಪಣೆ ಮಾಡಿದರು.