ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿ ಕಾಳು ಖರೀದಿ ಕೇಂದ್ರಗಳ ಆರಂಭ
ಯಾದಗಿರಿ : 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿಕಾಳು ಖರೀದಿ ಕೇಂದ್ರಗಳು ಆರಂಭಿಸ ಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೇಳಿದ್ದಾರೆ.
2025ರ ಜನವರಿ 2ರ ಪ್ರಕಾರ ಇಂದು ಮಾನ್ಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 2025ರ ಜನವರಿ 4ರ ಶನಿವಾರ ರಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಮಾಡಲು ಸರ್ಕಾರಿ ಆದೇಶದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಶಾಖೆ ಶಹಾಪೂರ ನೋಡಲ್ ಏಜೇನ್ಸಿಯನ್ನಾಗಿ ನೇಮಿಸಿದೆ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ 21 ಖರೀದಿ ಕೇಂದ್ರಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ,ರೈತ ಉತ್ಪಾದಕ ಸಂಘಗಳ ನ್ನು ಗುರುತಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ತೆರೆಯಲಾ ಗಿರುತ್ತದೆ.
ರೈತರ ನೊಂದಣಿ ಕಾರ್ಯವನ್ನು 75 ದಿನಗಳು 2025ರ ಮಾರ್ಚ್ 20ರ ವರೆಗೆ ಹಾಗೂ ಖರೀದಿಯ ನ್ನು 90 ದಿನಗಳ ವರೆಗೆ ನೊಂದಣಿ ಜೊತೆ ಜೊತೆಗೆ ಖರೀದಿಯನ್ನು ಕೇಂದ್ರಗಳಲ್ಲಿ ತೊಗರಿ ಖರೀದಿ ಪ್ರಕ್ರೀಯೆ ಪ್ರಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಶಹಾಪೂರ ಶಾಖೆ (ಖರೀದಿ ಕೇಂದ್ರಗಳ ಹೆಸರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ) ಯಾದಗಿರಿ ತಾಲೂಕದಲ್ಲಿ ಖರೀದಿ ಕೇಂದ್ರಗಳ ಪಿ.ಎ.ಸಿ.ಎಸ್ ಹತ್ತಿಕುಣಿ, ಟಿ.ಎ.ಪಿ.ಸಿ.ಎಮ್.ಎಸ್ ಯಾದಗಿರಿ, ಪಿ.ಎ.ಸಿ.ಎಸ್ ರಾಮಸಮುದ್ರದಲ್ಲಿ ಸ್ಥಾಪನೆ. ಶಹಾಪೂರ ತಾಲೂಕದಲ್ಲಿ ಖರೀದಿ ಕೇಂದ್ರಗಳ ಟಿ.ಎ.ಪಿ.ಸಿ.ಎಮ್.ಎಸ್ ಶಹಾಪೂರ, ಪಿ.ಎ.ಸಿ.ಎಸ್ ಚಾಮನಾಳ, ಪಿ.ಎ.ಸಿ.ಎಸ್ ಹೊಸಕೇರಾ, ಎಫ್.ಪಿ.ಓ ಗಂಗನಾಳ, ಪಿ.ಎ.ಸಿ.ಎಸ್ ದೊರನಹಳ್ಳಿ. ಸುರಪುರ ತಾಲೂಕದಲ್ಲಿ ಖರೀದಿ ಕೇಂದ್ರಗಳ ಟಿ.ಎ.ಪಿ.ಸಿ.ಎಮ್.ಎಸ್ ಸುರಪುರ, ಪಿ.ಎ.ಸಿ.ಎಸ್ ಕೆಂಭಾವಿ-1, ಪಿ.ಎ.ಸಿ.ಎಸ್ ಕೆಂಭಾವಿ-2, ಪಿ.ಎ.ಸಿ.ಎಸ್ ಮಾಲಗತ್ತಿ, ಎಫ್.ಪಿ.ಓ ನಗನೂರ. ಹುಣಸಗಿ ತಾಲೂಕದಲ್ಲಿ ಖರೀದಿ ಕೇಂದ್ರಗಳ ಟಿ.ಎ.ಪಿ.ಸಿ.ಎಮ್.ಎಸ್ ಹುಣಸಗಿ, ಪಿ.ಎ.ಸಿ.ಎಸ್ ಕೊಡೇಕಲ್, ಪಿ.ಎ.ಸಿ.ಎಸ್ ರಾಜನಕೋಳುರು. ವಡಗೇರಾ ತಾಲೂಕದಲ್ಲಿ ಖರೀದಿ ಕೇಂದ್ರಗಳ ಪಿ.ಎ.ಸಿ.ಎಸ್ ಬೆಂಡೆಗಂಬಳಿ, ಪಿ.ಎ.ಸಿ.ಎಸ್ ಹೈಯಾಳ.ಬಿ, ಗುರುಮಠಕಲ್ ತಾಲೂಕದಲ್ಲಿ ಖರೀದಿ ಕೇಂದ್ರಗಳ ಪಿ.ಎ.ಸಿ.ಎಸ್ ಚಪೇಟ್ಲಾ, ಎಫ್.ಪಿಓ ಗುರುಮಠಕಲ್, ಎಫ್.ಪಿ.ಓ ಸೈದಾಪೂರದಲ್ಲಿ ಕೇಂದ್ರಗಳು ಸ್ಥಾಪಿಸಲಾಗಿದೆ ಎಂದು ಹೇಳಿದರು.
ರೈತ ಭಾಂದವರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿ ಮಾರಾಟಕ್ಕೆ ನೊಂದಾಯಿಸಿಕೊಂಡು ತೊಗರಿ ಉತ್ಪನ್ನವನ್ನು ಮಾರಾಟ ಮಾಡಲು ತಿಳಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.