ಯುವ ಮೋರ್ಚಾದಿಂದ ಬಿವೈವಿ ಜನ್ಮದಿನ
ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯದ ನೇತಾರರಾಗಿದ್ದು, ಅವರ ದೂರದೃಷ್ಠಿಯಿಂದ ಪಕ್ಷ ಮತ್ತಷ್ಟು ಎತ್ತರಕ್ಕೆ ಏರಲಿದೆ ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಅಭಿಪ್ರಾಯಪಟ್ಟರು.
ಮಂಗಳವಾರ ಪಕ್ಷದ ಯುವ ಮೋರ್ಚಾದಿಂದ ಬಿವೈವಿ ಜನ್ಮದಿನದ ನಿಮಿತ್ತ ನಗರದ ವಿಶ್ವನಾಥರಡ್ಡಿ ಮುದ್ನಾಳ್ ಕ್ರಾಸ್ ಹತ್ತಿರ ಸಸಿನೆಟ್ಟು ಮಾತನಾಡಿದರು.
ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ನಂತರ ಹಲವು ಬದಲಾವಣೆ ತಂದಿದ್ದಾರೆ. ಯುವ ಕಾರ್ಯಕರ್ತರಲ್ಲಿ ಜೋಷ್ ಹೆಚ್ಚಿದ್ದಾರೆ. ರಾಜ್ಯಾದ್ಯಂತ ಪಕ್ಷ ಸಂಘಟನೆಗ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ ಎಂದರು.
ತಂದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಂತೆ ವಿಜಯೇಂದ್ರ ಅವರ ಬಳಿ ಸಂಘಟನಾ ಚತುರತೆ ಇದೆ. ಎಲ್ಲ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಪಕ್ಷಕ್ಕೆ ಹೊಸ ಆಯಾಮ ತಂದಿದ್ದಾರೆ ಎಂದು ಗುಣಗಾಣ ಮಾಡಿದರು.
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ, ನಗರ ಮಂಡಲ ಅಧ್ಯಕ್ಷ ನಿಂಗಪ್ಪ ಹತ್ತಿಮನಿ,ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ನಾಯಕ, ನಾಗರಾಜ ಬಿರುನೂರ,ಲಕ್ಷ್ಮೀಪುತ್ರ ಪಾಟೀಲ್, ಸೂಗು ಚಾಮಾ, ಮಲ್ಲಿಕಾರ್ಜುನ ಮುದ್ನಾಳ, ಭೀಮಬಾಯಿ ಶೆಂಡಗಿ, ಚಂದ್ರಕಲಾ ಮಠ, ಸ್ನೇಹಾ ರಸಾಳಕರ, ಕೃಷ್ಣಾ ಪಾಂಚಾಳ, ಮಹೇಶ ಕುಮತಗಿ ಇದ್ದರು.