ಜಿಲ್ಲಾ ಮಹಿಳಾ ಮೋರ್ಚಾ ಪ್ರಮುಖರಿಂದ ಪೊಲೀಸರಿಗೆ ರಾಖಿ ಕಟ್ಟಿ ಸಂಭ್ರಮ | ಜಾತಿ ಭೇದ ಮರೆತು ಸಹೋದರತೆ ಸಾರು ಬಂಧನ


ಯಾದಗಿರಿ: ನಗರ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಊರಿನ ಕೆಲ ಯುವಕರಿಗೆ ರಾಖಿಯನ್ನು ಕಟ್ಟುವ ಮುಖಾಂತರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಠಾಣಾಧಿಕಾರಿ ಮಂಜನಗೌಡ ರಕ್ಷಾ ಬಂಧನ ಸ್ವೀಕರಿಸಿ ಮಾತನಾಡಿ, ಹಬ್ಬವು ಜಾತಿ, ಬೇಧ ಹೋಗಲಾಡಿಸಿ ಸಹೋದರತೆಯ ಭಾವವನ್ನು ಬಿಂಬಿಸುವುದಾಗಿದೆ. ನಮ್ಮ ದೇಶದಲ್ಲಿ ಸಂಬಂಧಗಳಿಗಿರುವ ಮಹತ್ವ ಜಗತ್ತಿನ ಯಾವ ದೇಶದಲ್ಲಿಯೂ ಕಂಡು ಬರುವುದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್ ಮಾತನಾಡಿ, ಅಣ್ಣ ತಂಗಿಯರ ಹಬ್ಬ, ಅಕ್ಕ ತಮ್ಮಂದಿರ ಹಬ್ಬ. ಅಕ್ಕ ತಂಗಿಯರ ರಕ್ಷಣೆಗಾಗಿ ನಡುಕಟ್ಟಿ ನಿಲ್ಲುವ ಅಣ್ಣ ತಮ್ಮಂದಿರನ್ನು ಪ್ರೀತಿಯಿಂದ ಹರಸಿ ಹಾರೈಸುವ ಹಬ್ಬ ಎಂದರು.

ದೇಶದಾದ್ಯಂತ ಈ ಹಬ್ಬವನ್ನು ಎಲ್ಲ ಅಕ್ಕತಂಗಿಯರು ತಮ್ಮ ಅಣ್ಣ ತಮ್ಮಂದಿರಿಗಾಗಿ ಆಚರಿಸುತ್ತಾರೆ. ಅಣ್ಣ ತಮ್ಮಂದಿರ ಕ್ಷೇಮ ಅವರ ಆರೋಗ್ಯ ಆಯಸ್ಸು ಚೆನ್ನಾಗಿರಲೆಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು..

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ, ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ, ಕಾರ್ಯದರ್ಶಿ ಶಕುಂತಲಾ ಗುಜನೂರು, ಉಪಾಧ್ಯಕ್ಷೆ ಮಂಜುಳಾ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!