ಇತಿಹಾಸ ಪ್ರಸಿದ್ಧ  ಕ್ಷೇತ್ರದ ಖ್ಯಾತಿ ಇನ್ನಷ್ಟು ಪಸರಿಸಲಿ –  ಸಿದ್ಧಲಿಂಗ ಸ್ವಾಮೀಜಿ

ಗುರುಮಠಕಲ್ : ಇತಿಹಾಸ ಪ್ರಸಿದ್ಧ ಬೋರಬಂಡ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಖ್ಯಾತಿ ಜಗತ್ತಿನ ಉದ್ದಗಲಕ್ಕೂ ಇನ್ನಷ್ಟು ಪಸರಿಸಲಿ ಎಂದು ನೇರಡಗಂನ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬೋರಬಂಡಾದ ಶ್ರೀಲಕ್ಷೀ ತಿಮ್ಮಪ್ಪ ದೇವಸ್ಥಾನದ ಕಲ್ಯಾಣೋತ್ಸವ ಹಾಗೂ ರಥೋತ್ಸವ ಉದ್ದೇಶಿಸಿ ಆಶೀರ್ವಚನ ನೀಡಿದರು.

ಮಾನವ ಸಕಲ ಜೀವರಾಶಿಗಳನ್ನು ಶ್ರೇಷ್ಠ ಎನಿಸಿದ್ದಾನೆ. ಹೀಗಾಗಿ ಜೀವನದಲ್ಲಿ ಶ್ರದ್ಧಾಭಕ್ತಿಯಿಂದ ಕೈಗೊಂಡ ಧಾರ್ಮಿಕ ಕಾರ್ಯದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ಧಾರ್ಮಿಕ ಸೇವೆಯಲ್ಲಿ ತೊಡಗಿರುವ ದೇಗುಲ ವ್ಯವಸ್ಥಾಪಕ ನರೇಂದ್ರ ರಾಠೋಡ ಅವರ ಕುಟುಂಬ ಹಾಗೂ ಗ್ರಾಮಸ್ಥರು ವಿಜೃಂಭಣೆಯಿಂದ ದೇವರ ಜಾತ್ರೆ, ದೀಪೋತ್ಸವ ಆಚರಿಸಿದ್ದು, ಸುತ್ತಲಿನ ಭಕ್ತರು ದರ್ಶನ ಪಡೆದು ಪಾವನರಾಗುತ್ತಿದ್ದಾರೆ.  ಜೀವನದಲ್ಲಿ ಪರೋಪಕಾರಿ ಕಾರ್ಯದಿಂದ ಹೆಸರು ಅಮರವಾಗಲಿದೆ ಎಂದರು.

ಬೆಳಿಗ್ಗೆಯಿಂದಲೇ ಸುಪ್ರಭಾತ ಸೇವೆ, ಪಂಚಾಮೃತಾಭಿಷೇಕ, ಅಲಂಕಾರ ಸೇವೆ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ಕಲ್ಯಾಣೋತ್ಸವ, ರಥೋತ್ಸವ ಹಾಗೂ ಉಂಜಿಲು ಸೇವೆ ಕಾರ್ಯಕ್ರಮ ನೆರವೇರಿತು.

ಮುರಾರಿ ಮಹರಾಜ, ಯು.ಪಿ.ಯ ಯೋಜಿ ಮಹೇಂದ್ರನಾಥ ಸ್ವಾಮಿ, ಅನೀಲ ಮಹರಾಜ, ಶಂಕರ್ ಮಹರಾಜ, ಸುರೇಶ ಮಹರಾಜ, ಸರಸ್ವತಿ ಮಾತೆ, ಶಾಂತಾ ಮಾತೆ, ಲಕ್ಷ್ಮೀಮಾತೆ, ಯಶೋಧಾ, ಧರ್ಮಿಣಿ ಮಾತೆ, ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿ, ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಸಂಗೀತಾ ಲಕ್ಷ್ಮಣ ಪವಾರ್

ಅಯ್ಯಪ್ಪ ದಾಸ್, ರಾಜು ರಾಠೋಡ, ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ, ಆನಂದ ಬೋಯಿನಿ, ಸಾಯಬಣ್ಣ ಹೂಗರ್, ಕಾಶಿನಾಥ್ ರಾಠೋಡ, ಶರಣು ಎಲ್ಹೇರಿ, ವಿಜಯ ಮಗ್ಧಂಪೂರ, ಮೋಹನ್, ಸುರೇಶ ಚಿನ್ನಾ ರಾಠೋಡ ಸೇರಿ ಪ್ರಮುಖರು ತಾಂಡಾ ನಿವಾಸಿಗಳು, ಸುತ್ತಮುತ್ತಲಿನ ಭಕ್ತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!