ಚಿತ್ತಾಪುರ ಘಟಕದ ಸಾರಿಗೆ ಬಸ್ ರಸ್ತೆ ಬಿಟ್ಟು ತಿಪ್ಪೆಕುಣಿಗೆ ಇಳಿಕೆ | ವಾಹನದ ಬಲಭಾಗ ಜಖಂ | ಸ್ಟೇರಿಂಗ್ ಸಮಸ್ಯೆಯಿಂದ ಘಟನೆ ?

ಯಾದಗಿರಿ: ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಚಿತ್ತಾಪುರ ಘಟಕದಲ್ಲಿ ಬಸ್ ರಸ್ತೆಯಿಂದ ಕೆಳಗೆ ಇಳಿದು ಅದೃಷ್ಟವಷಾತ್ ದೊಡ್ಡ ಆವಾಂತರ ತಪ್ಪಿದೆ.

ಗುರುಮಠಕಲ್ ಪಟ್ಟಣದಿಂದ ಬೆಳಿಗ್ಗೆ ಕಲಬುರಗಿಗೆ ಸಂಚರಿಸುವ ಕೆಎ32 ಎಫ್ 2079 ವಾಹನ ಇದಾಗಿದ್ದು, ಎಂದಿನಂತೆ ಬಸ್ ಬೆಳಿಗ್ಗೆ ಗುರುಮಠಕಲ್ ಬಸ್ ನಿಲ್ದಾಣದಿಂದ ಹೊರಟು ಮಾರ್ಗ ಮಧ್ಯೆ ಗಾಜರಕೋಟ ಹೊರವಲಯದಲ್ಲಿ ರಸ್ತೆ ಪಕ್ಕ ತಿಪ್ಪೆಗೆ ಇಳಿದಿದೆ. ಬಸ್‌ನಲ್ಲಿದ್ದ ಪಯಾಣಿಕರು ಎಲ್ಲರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆಯಿತೆ? ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಬಸ್(ಚಾಲಕನ ಕಡೆ) ಬಲಭಾಗ ಜಖಂ ಆಗಿದೆ.

ಸಾರಿಗೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಸ್ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!