ಯಾದಗಿರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಮಾದಿಗ ದಂಡೋರ ರಾಜ್ಯದ್ಯಕ್ಷ ಬಿ. ನರಸಪ್ಪ | ಯಾದಗಿರಿ ಜಿಲ್ಲಾ ಸಮೀತಿ ಯಿಂದ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಕೆ

ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾದಿಗ ದಂಡೋರ ರಾಜ್ಯದ್ಯಕ್ಷ ಬಿ. ನರಸಪ್ಪ ದಂಡೋರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಒಳ ಮೀಸಲಾತಿ ವಿಷಯದಲ್ಲಿ ಸರ್ಕಾರ ಹೊಡಿಸಿದ ಪರಿಶಿಷ್ಟ ಜಾತಿಗಳು,  ಜಾತಿ ಸಮೀಕ್ಷೆಯಲ್ಲಿ ಅಧಿಕಾರಿಗಳು ರಾಜಧಾನಿ ಬೆಂಗಳೂರು ನಗರ, ಪಟ್ಟಣ ನಗರ ಸಭೆಗಳಲ್ಲಿ ಜಾತಿ ಸಮೀಕ್ಷೆಯಲ್ಲಿ ಅಧಿಕಾರಿಗಳು ಭಾಗವಹಿಸಿದೆ ನಿರ್ಲಕ್ಷ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು.

ಒಳ ಮೀಸಲಾತಿಯನ್ನು ಅತಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾತಿ ಸಮೀಕ್ಷೆ ನಡೆಸಿ ಜಾರಿಗೊಳಿಸಬೇಕು, ದೇಶದ ರಾಜಧಾನಿ ವಿಧಾನಸೌಧದ ಆವರಣದಲ್ಲಿ ಶಿವಶರಣ ಮಾದಾರ ಚೆನ್ನಯ್ಯನ ಕಂಚಿನ ಪುತ್ಥಳಿ ಅನಾವರಣ, ಗುಲ್ಬರ್ಗ ವಿಮಾನ ನಿಲ್ದಾಣಕ್ಕೆ ದೇಶದ ಮಾಜಿ ಉಪ ಪ್ರಧಾನಿ ಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಹೆಸರನ್ನು ನಾಮಕರಣ ಮಾಡುವುದು, ಯಾದಗಿರಿ ಜಿಲ್ಲೆಯ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಬಾಬು ಜಗಜೀವನ್ ರಾಮ್ ರವರ ಪುತ್ತಳಿಯನ್ನು ಅನಾವರಣಗೊಳಿಸುವುದು, ಸಮುದಾಯದ ಕಾಂಗ್ರೆಸ್ ಪಕ್ಷದ ಕಟ್ಟ ಅಭಿಮಾನಿ ಮಾಜಿ ಸಚಿವ ಎಚ್. ಆಂಜನೇಯ ರವರನ್ನು MLC ಆಯ್ಕೆ ಮಾಡಿ ಮಂತ್ರಿ ಸ್ಥಾನವನ್ನು ನೀಡುವುದು, ಯಾದಗಿರಿ ಜಿಲ್ಲೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಗಣೇಶ್ ದುಪ್ಪಲ್ ರವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡುವುದು, ಜಿಲ್ಲೆಯಲ್ಲಿ ಕಡೇಚೂರು ಕೆಮಿಕಲ್ ಫ್ಯಾಕ್ಟರಿ ಯನ್ನು ಸಂಪೂರ್ಣ ಬಂದ್ ಮಾಡಿ ಅಲ್ಲಿನ ಜನರಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷರು ಕಾಶಪ್ಪ ಮಾದಿಗ ಹೆಗ್ಗಣಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ನಡುಮನೆ, ಮಲ್ಲು ಬೆಳಗೇರಾ, ರವಿ ಬುರನೋಳ, ತಿಪ್ಪಣ್ಣ ಗೊಂದೆನೂರು, ವಿಲ್ಸನ್ ಹಾಲಗೇರಾ, ಮಲ್ಲು ಕುಮನೂರ್, ಮಲ್ಲಪ್ಪ ಕೆ. ಶಾಂತಪ್ಪ ಬೆಳಗುಂದಿ,  ತಾಲೂಕು ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!