ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ 2024-25 ನೇ ಸಾಲಿನ ಕೇಂದ್ರ ಸರ್ಕಾರದ ಹತ್ತಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಂಬಲ ಬೆಲೆ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಟಾಸ್ಕ್ ಪೋರ್ಸ್ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಹತ್ತಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಮಾರಾಟ ಇಲಾಖೆ ಬೆಂಗಳೂರು ಅಧಿಸೂಚನೆ. ಹತ್ತಿ ಖರೀದಿ ಕೇಂದ್ರಗಳನ್ನಾಗಿ ಘೋಷಿಸಿ ಖರೀದಿ ಪ್ರಕ್ರಿಯೆಗೆ ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕ ಇವರಿಗೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಘೋಷಿತ ಬೆಂಬಲ ಬೆಲೆ ಹತ್ತಿ ಪ್ರತಿ ಕ್ವೀಂಟಾಲ್ ಮದ್ಯಮ ಎಳೆ. 7121 ಉದ್ದನೆ ಎಳೆ 7521 ಹತ್ತಿಯನ್ನು ಗುಣ ಪರಿಕ್ಷೇಗೆ (ಎಫ್.ಎ.ಕ್ಯೂ.) ಒಳಪಡಿಸಿ ಪ್ರತಿ ಎಕರೆಗೆ 12 ಕ್ವಿಂಟಾಲ್ ಹತ್ತಿಯನ್ನು ರೈತರಿಂದ ಖರೀದಿಸಲಾ ಗುವುದು, ಹತ್ತಿ 8 ರಿಂದ 12 % ತೇವಾಂಶ ಇದ್ದಲ್ಲಿ ಮಾತ್ರ ಖರೀದಿಸಲಾಗುವುದು ಹೆಚ್ಚಿನ ತೇವಾಂಶ ಇದ್ದಲ್ಲಿ ತಿರಸ್ಕರಿಸಲಾ ಗುವುದು. ರೈತರು ಬೆಳೆದ ಕುರಿತು ತಹಶೀಲ್ದಾರ ಇವರು ನೀಡುವ ಪಹಣಿಯಲ್ಲಿ ನಮೂದಾಗಿರತಕ್ಕದ್ದು, ಗೋಣಿಚೀಲ ಅಥವಾ ಇನ್ನಿತರೆ ಬಟ್ಟೆಗಳಲ್ಲಿ ಹತ್ತಿಯನ್ನು ತಂದಲ್ಲಿ ತಿರಸ್ಕರಿಸ ಲಾಗುವುದು. ಉಳಿದಂತೆ ಭಾರತೀಯ ಹತ್ತಿ ನಿಗಮ ಮಾರ್ಗಸೂಚಿಗಳಂತೆ ಹತ್ತಿಯನ್ನು ಈ ಕೇಳಗಿನ ಘೋಷಿತ ಹತ್ತಿ ಮಿಲ್‌ಗಳಲ್ಲಿ ಖರೀದಿಸಲಾಗುವುದು.
ಹತ್ತಿ ಉತ್ಪನ್ನ ಖರೀದಿ ಘಟಕಗಳ ವಿವರ: ಸೌದಾಗರ್ ಕಾಟನ್ ಮಿಲ್, ಮನಗನಾಳ ವಿಲೇಜ್ ಶಹಾಪುರ, ಮೆ.ಲಕ್ಷ್ಮಿ ಬಾಲಾಜಿ ಕಾಟನ್ ಇಂಡಸ್ಟ್ರಿಜ್ ಸಯಿದಾಪುರ ವಿಲೇಜ್ ಶಹಾಪುರ, ಮೆ.ಆರ್.ಎಸ್.ಫೈಬರರ್ಸ ಮದ್ದರಕಿ ವಿಲೇಜ್, ಮೆ.ಮಂಜಿತ್ ಕಾಟನ್ ಕಾಟನ್ ಪ್ರೈವೇಟ್ ಲಿಮಿಟೆಡ್, ಬೊರ್ಕ ಪವರ್ ಪ್ಲಾಂಟ್ ಹತ್ತಿರ ಗೋಗಿ ಕೋನ ವಿಲೇಜ್, ಮೆ.ಮಂಜಿತ್ ಕಾಟನ್ ಕಾಟನ್ ಪ್ರೈವೇಟ್ ಲಿಮಿಟೆಡ್, ಅರಳಹಳ್ಳಿ ಕ್ರಾಸ್ ಬಿ.ಬಿ.ರಸ್ತೆ ಮದ್ದರಕಿ,. ಮೆ.ಶ್ರೀ ಬಸವ ಜೋತಿ ಕಾಟನ್ ಜಿನ್ನಿಂಗ್ ಪ್ಯಾಕ್ಟರಿ,ಅರಳಹಳ್ಳಿ ಕ್ರಾಸ್ ಸಯಿದಾಪುರ ವಿಲೇಜ್, ಮೆ.ಬಸವರಾಜ ಸಜ್ಜನ ಶೇಟ್ಟಿ ಕಾಟನ್ ಆಂಡ್ ಆಗ್ರೋ ಇಂಸ್ಟಿçÃಸ್ ಯಾದಗಿರಿ ರಸ್ತೆ ಹಳಿಸಗರ ವಿಲೇಜ್, ಮೆ.ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟಿçÃಸ್, ಕಲಬುರಗಿ ರಸ್ತೆ ಹುಲಕಲ್ ವಿಲೇಜ್,. ಜೈ ಲಕ್ಷಿ ಕಾಟನ್ ಮಿಲ್ಸ್ ಮನಗನಾಳ ವಿಲೇಜ್ ಸೇರಿ ಮೆ.ಶ್ರೀ ಬನಶಂಕರಿ ಇಂಡಸ್ಟಿçÃಸ್ ಇಂಡಸ್ಟಿçÃಸ್, ಯಾದಗಿರಿ ರಸ್ತೆ ಹಳಿಸಗರ, ಮೆ.ಮಂಜುನಾಥ ಕಾಟನ್ ಜಿನ್ನಿಂಗ್ ಆಂಡ್ ಪ್ರೆಸ್ಸಿಂಗ್ ಶಹಾಪುರ. ವೆಂಕಟೇಶ್ವರ ಆಗ್ರೋ ಇಂಡಸ್ಟಿçÃಸ್, ಬೀದರ್ ಬೆಂಗಳೂರು ರಸ್ತೆ ಮಂಡಗಳಿ ವಿಲೇಜ್, ಮೆ.ಶ್ರೀ ಮಹಾಲಕ್ಷ್ಮಿ ಆಗ್ರೋ ಇಂಡಸ್ಟಿçÃಸ್ ಗೋಗಿ ಪೇಟ್ ಶಹಾಪುರ. ಮೆ.ಶ್ರೀ ಸಂಗಮೇಶ್ವರ ಇಂಡಸ್ಟಿçÃಸ್, ಹತ್ತಿಗೂಡೂರು ವಡಗೇರ ರಸ್ತೆ ಬಸಂತಪೂರ ವಿಲೇಜ್, ಮೆ.ಶಿವಶಕ್ತಿ ಕಾಟನ್ ಜಿನ್ನಿಂಗ್, ಪ್ರೇಸಿಂಗ್ ಪ್ಲಾಟ್ಮ, ಮಲ್ಲಾ ಬಿ.ಕ್ರಾಸ್ ಕೆಂಬಾವಿ ಮುಖ್ಯ ರಸ್ತೆ, ಮೆ.ಸಂದೀಪ್ ಆಗ್ರೋ ಇಂಡಸ್ಟಿçÃಸ್ ಶಹಾಪುರ ಸಿಂದಗಿ ರಸ್ತೆ ಹದನೂರ ವಿಲೇಜ್, ಮೆ.ಕೆ.ಬಿ.ಎನ್.ಆಗ್ರೋ ಇಂಡಸ್ಟಿçÃಸ್ ಶಹಾಪುರ ರಸ್ತೆ ನಾಯ್ಕಲ್, ಮೆ.ಬನದೇಶ್ವರ ಕಾಟನ್ ಇಂಡಸ್ಟಿçÃಸ್ ಕಣೇಕಲ್ ಪೋಸ್ಟ್ ಗುರಮಟಕಲ್ ತಾಲೂಕ, ಶ್ರೀ ರಾಜೇಂದ್ರ ಆಗ್ರೋ ಇಂಡಸ್ಟಿçÃಸ್ ಯಾದಗಿರಿ, ಮೆ.ಎಸ್.ಕೆ. ಇಂಡಸ್ಟಿçÃಸ್ ಯಾದಗಿರಿ. ಮೆ.ಆರ್. ಆರ್. ಕಾಟನ್ ಇಂಡಸ್ಟಿçÃಸ್ ಗಳಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.