ಈ ದೀಪಾವಳಿಯಂದು ಪ್ರತಿ ಮಿನುಗುವ ಜ್ವಾಲೆ ನಿಮ್ಮ ಮನೆಗೆ ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ತರಲಿ | ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
ದೀಪಾವಳಿಯ ಶುಭ ಸಂದರ್ಭ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು 2 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಜೊತೆ ದೀಪಾವಳಿ ಆಚರಣೆ ಮಾಡುತ್ತಿದೆ. ಕತ್ತಲೆ ಕರಗುವಂತೆ ಕಷ್ಟ ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ ಜೀವನ ಆನಂದವಾಗಿರಲಿ ಎಂದು ಹಾರೈಸುತ್ತೇವೆ…..
ರಾಜ್ಯದ ಜನರ ಬದುಕಿನ ಕತ್ತಲೆಯ ಕ್ಷಣಗಳು ಸರಿದು ಬೆಳಕು ಮೂಡಲಿ, ಈ ದೀಪಾವಳಿ ಶುಭ, ಸಂತೋಷ ಮತ್ತು ಸಮೃದ್ಧಿ ತರಲಿ ಎಂದು ಪ್ರಾರ್ಥಿಸುವೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು – ಶರಣಗೌಡ ಕಂದಕೂರ, ಶಾಸಕರು ಗುರುಮಠಕಲ್
ಯಾದಗಿರಿ: ದೀಪಾವಳಿಯನ್ನು ಹಿಂದೂ ಚಾಂದ್ರಮಾನ ತಿಂಗಳು ಅಶ್ವಿನ ಮತ್ತು ಕಾರ್ತಿಕ ಮಾಸ ಅಂದರೆ ಅಕ್ಟೋಬರ್ ಮತ್ತು ನವೆಂಬರ್ ಮಧ್ಯೆ ಆಚರಿಸಲಾಗುತ್ತದೆ.
ಭಾರತದಾದ್ಯಂತ, ದೀಪಾವಳಿಯು ವಿಷ್ಣುವಿನ ದೈವಿಕ ಪತ್ನಿ ಮತ್ತು ಸಮೃದ್ಧಿ, ಅದೃಷ್ಟ ಮತ್ತು ಧನ, ಧಾನ್ಯದ ಸಾಕಾರಳಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ದೀಪಗಳನ್ನು ಬೆಳಗುವುದರಿಂದ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ. ಧನಾತ್ಮಕತೆ ಮತ್ತು ಸಮೃದ್ಧಿಯು ಮನೆಯನ್ನು ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ.
ದೀಪಾವಳಿ ಎಂದರೆ, ಕೇವಲ ದೀಪ ಬೆಳಗಿ, ಪೂಜೆ ಮಾಡಿ, ಪಟಾಕಿ ಸಿಡಿಸುವುದು ಅಷ್ಟೇ ಅಲ್ಲ. ಇಂದಿನ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ದಿನಮಾನಗಳಲ್ಲಿ ಪ್ರತಿಯೊಬ್ಬರು ಹಿಂದು ಹಬ್ಬಗಳ ಆಚರಣೆ ಮತ್ತು ಮಹತ್ವ ಮುಂದಿನ ಪೀಳಿಗೆಗೆ ಪರಿಚಯಿ ಸುವ ಅಗತ್ಯವಿದೆ ಎಂದೆನಿಸದೇ ಇರದು.
ದೀಪಾವಳಿಯು ಪ್ರಾಚೀನ ಇತಿಹಾಸವನ್ನು ಹೊಂದಿರುವ ಹಬ್ಬಗಳಲ್ಲಿ ಪ್ರಮುಖವಾದುದ್ದಾಗಿದೆ. ರಾಮಾಯಣ ಕಾಲದಿಂದ ಆರಂಭವಾಯಿತೆಂದು ಹೇಳಲಾಗುತ್ತದೆ. ರಾಮ, ಲಕ್ಷ್ಮಣ ಮತ್ತು ಸೀತೆಯು 14 ವರ್ಷಗಳ ವನವಾಸವನ್ನು ಕಳೆದು ನಾಡಿಗೆ ಹಿಂದಿರುಗಿದಾಗ ಜನರು ಸಂತೋಷದಿಂದ ತಮ್ಮ ಮನೆಗಳಲ್ಲಿ ದೀಪವನ್ನು ಬೆಳಗುವ ಮೂಲಕ ಅವರನ್ನು ನಾಡಿಗೆ ಬರಮಾಡಿಕೊಂಡರು ಎಂದು ಹೇಳಲಾಗುತ್ತದೆ. ಅಂದಿನಿಂದ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ದೀಪಾವಳಿಯು ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯವನ್ನು ಸೂಚಿಸುತ್ತದೆ. ಅವನ ಸೋಲು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಜಯಿಸಿದ ನಂತರ ಹೊಸ ಆರಂಭವನ್ನು ಸೂಚಿಸುತ್ತದೆ. ಈ ಕಾರಣಕ್ಕಾಗಿ ಈ ದಿನದಂದು ದೀಪವನ್ನು ಬೆಳಗುವ ಸಂಪ್ರದಾಯ ಆರಂಭವಾಯಿತು.
ಪ್ರಪಂಚದಾದ್ಯಂತ ಜನರು ಬೆಳಕಿನ ಹಬ್ಬವಾದ ದೀಪಾವಳಿಯನ್ನು ಬಹಳ ಸಂಭ್ರಮ – ಸಡಗರದಿಂದ ಆಚರಿಸುತ್ತಾರೆ. ಪ್ರತಿ ಮನೆಯಲ್ಲೂ ಜನರು ಬೆಲೆಬಾಳುವ ವಸ್ತುಗಳ ಜೊತೆಗೆ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಪೂಜೆ ಮುಗಿದ ನಂತರ, ಭಕ್ತರು ತಮ್ಮ ನೆರೆಹೊರೆಯವರು ಮತ್ತು ಸ್ನೇಹಿತರಿಗೆ ಸಿಹಿತಿಂಡಿ ಮತ್ತು ಉಡುಗೊರೆಗಳನ್ನು ವಿತರಿಸುತ್ತಾರೆ. ಮಕ್ಕಳು ಮತ್ತು ಹಿರಿಯರು ಪಟಾಕಿಗಳನ್ನು ಸಿಡಿಸುತ್ತಾರೆ, ದೀಪಗಳನ್ನು ಬೆಳಗಿಸುತ್ತಾರೆ.
ಗಡಿ ಭಾಗದಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಆಗು ಹೋಗುಗಳನ್ನು ನಾಡಿಗೆ ತಿಳಿಸುವ ಕಾರ್ಯ ಮಾಡುತ್ತಿರುವ ಯಾದಗಿರಿಧ್ವನಿ 2ನೇ ವರ್ಷಕ್ಕೆ ಕಾಲಿರಿಸಿದೆ. ಹೀಗೆ ಮುಂದೆ ಸಾಗಿ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸುವೆ. – ಶರಣಗೌಡ ಕಂದಕೂರ, ಶಾಸಕರು ಗುರುಮಠಕಲ್.

ರಾಜ್ಯದ ಜನರ ಬದುಕಿನ ಕತ್ತಲೆಯ ಕ್ಷಣಗಳು ಸರಿದು ಬೆಳಕು ಮೂಡಲಿ, ಈ ದೀಪಾವಳಿ ಶುಭ, ಸಂತೋಷ ಮತ್ತು ಸಮೃದ್ಧಿ ತರಲಿ ಎಂದು ಪ್ರಾರ್ಥಿಸುವೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು – ಶರಣಗೌಡ ಕಂದಕೂರ, ಶಾಸಕರು ಗುರುಮಠಕಲ್