ಯಾದಗಿರಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತೊಗರಿ, ಹೆಸರು, ಉದ್ದು, ಸೋಯಾ,ಹತ್ತಿ ಸೇರಿ ಅನೇಕ ಬೆಳೆಗಳು ಮಳೆಗೆ ಸಂಪೂರ್ಣ ನಾಶವಾಗಿವೆ. ಕೂಡಲೇ ರಾಜ್ಯ ಸರ್ಕಾರ ಹಾನಿಯಾಗಿರುವ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯ ಕೃಷಿಕ ಸಮಾಜ ಪ್ರತಿನಿಧಿ ರಾಚಣ್ಣಗೌಡ ಮುದ್ನಾಳ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಮತ್ತು ಹತ್ತಿ ಸೇರಿ ಇತರೆ ಬೆಳೆಗಳನ್ನು ಬಿತ್ತಲಾಗಿತ್ತು. ಇವುಗಳು ಸಂಪೂರ್ಣ ಮಳೆಗೆ ನಾಶವಾಶವಾಗಿದೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದರು.

ಬೆಳೆ ವಿಮಾ ಮಾಡಿಸಿದವರಿಗೆ ದೂರು ನೀಡಲು ಟೋಲ್ ಫ್ರೀ ನಂಬರಗೆ ಕರೆ ಮಾಡಿದರೆ ಅದು ಕರೆ ಸ್ವೀಕರಿಸುತ್ತಿಲ್ಲ. ರೈತರು ಖುದ್ದಾಗಿ ಕೃಷಿಯ ಇಲಾಖೆಯ ಕಚೇರಿಗೆ ಹೋಗಿ ದೂರು ಸಲ್ಲಿಸಲು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಟೋಲ್ ಫ್ರೀ ನಂಬರ್ ಎಲ್ಲಾ ರೈತರಿಗೆ ದೂರು ಸ್ವೀಕರಿಸಲು ಮುಕ್ತವಾಗಿಡಬೇಕು ಎಂದು ಒತ್ತಾಯಿಸಿದರು.

ಹಿಂದಿನ ವರ್ಷದಲ್ಲಿ ಕೇವಲ ಬೆಳೆ ವಿಮಾ ಮಾಡಿಸಿದ ರೈತರಿಗೆ ಮಾತ್ರ ಒಂದು ಕಂತಿನ ಹಣ ನೀಡಿದ್ದು, ಇನ್ನೂ ಒಂದು ಕಂತಿನ ಹಣ ಬಾಕಿ ಇದ್ದು, ಆ ಹಣವನ್ನು ಈ ಕೂಡಲು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!