ಯಾದಗಿರಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ದಿನ ‌ಸೂಕ್ತ ವೇದಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ ಹೇಳಿದರು.

ಇಲ್ಲಿನ ಜಿಲ್ಲಾ ಬಾಲ ಭವನ ಸಭಾಂಗಣದಲ್ಲಿ ಜಿಲ್ಲಾ ಮಟ್ಟ ಮಕ್ಕಳ ದಿನಾಚರಣೆ ವಿವಿಧ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಾದ್ಯಂತ ಮಕ್ಕಳಿಗಾಗಿ ಮತ್ತು ಅನೇಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿರುವ 9 ರಿಂದ 16 ವರ್ಷದ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆ ಚಿತ್ರಕಲೆ, ಸಮೂಹ ನೃತ, ಜಾನಪದ ನೃತ್ಯ, ಭರತನ್ಯಾಟ, ಸುಗಮ ಸಂಗೀತ, ವಾದ್ಯ ಸಂಗೀತ, ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕೋಳಲು, ಡೊಳ್ಳು, ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಮಟ್ಟದಿಂದ ಆಯ್ಕೆಯಾದ ಮಕ್ಕಳನ್ನು ರಾಜ್ಯ ಮಟ್ಟದ ಕಾರ್ಯಕ್ರಮ ಭಾಗವಹಿಸುತ್ತಾರೆ. ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಹಣಮಂತ್ರಾಯ ಕರಡಿ ಅವರು ಮಾತನಾಡಿ, ಜವಾಹರ ಲಾಲ್ ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳ ಹಬ್ಬವನ್ನು ಆಚರಣೆವಾಗಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಪ್ರತಿ ಕ್ಷೇತ್ರದಲ್ಲಿ 2 ಮಕ್ಕಳಂತೆ ಒಟ್ಟು 8 ಮಕ್ಕಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಜಿಲ್ಲಾ ಮಟ್ಟದಿಂದ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಶ್ರಿ ಪ್ರೇಮ್ ಮೂರ್ತಿ, ಯಾದಗಿರಿ ಜಿಲ್ಲಾ ಬಾಲ ಭವನ ಜಿಲ್ಲಾ ಸಂಯೋಜಕರು ಅನಿಲಕುಮಾರ, ಶಶಿಕುಮಾರ, ಅಮ್ಮಯ್ಯ ಹೀರೆಮಠ ಮತ್ತು ಮೇಘನಾಥ ಬೇಳ್ಳಿ ಶಿಕ್ಷಕರು, ಮುನ್ನ ನೃತ್ಯ ಶಿಕ್ಷಕರು, ಮಹೇಶಕುಮಾರ ಸಂಗೀತ ಶಿಕ್ಷಕರು ಹಾಗೂ ಪ್ರಶಾಂತ ಕುಮಾರ, ಸೇರಿ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು ಇನ್ನಿತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!