ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದ ನಾಯಕ | ವಿವಿಧ ಹುದ್ದೆ ನಿರ್ವಹಣೆ ಅನುಭವ | ಜಿಲ್ಲಾ ಮಟ್ಟದ ಜವಾಬ್ದಾರಿ ನೀಡಿದ ಬಿಜೆಪಿ

ಯಾದಗಿರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಗುರುಮಠಕಲ್ ನ ಚಂದುಲಾಲ್ ಚೌದರಿ ನೇಮಕವಾಗಿದ್ದಾರೆ. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು ಆದೇಶ ಹೊರಡಿಸಿದ್ದು, ಬಿಜೆಪಿ ಯಾದಗಿರಿ ಜಿಲ್ಲೆಯ ಸಂಘಟನಾತ್ಮಕ ಯಾದಗಿರಿ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಿಸಿ ಜವಾಬ್ದಾರಿ ನೀಡಿದ್ದಾರೆ. ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿತವಾಗಿ ನಿರ್ವಹಿಸುತ್ತಾ, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸಲು ಶ್ರಮಿಸುವುದು ಸೇರಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಲು ತಿಳಿಸಿದ್ದಾರೆ.

ಅಭಿನಂದನೆ: ಚಂದುಲಾಲ್ ಚೌದರಿ ಅವರ ಶ್ರಮ, ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ ಜಿಲ್ಲಾ ಮಟ್ಟದ ಜವಾಬ್ದಾರಿ ದೊರೆತಿರುವುದಕ್ಕೆ ಎಸ್ ಎಸ್ ಕೆ ಸಮಾಜದ ಮಾಜಿ ಯುವ ಅಧ್ಯಕ್ಷ ಅನೀಲ ಕುಮಾರ್, ಮೋಹನ್ ಬುರಬುರೆ, ಹೀರಾಲಾಲ ಬಸೂದೆ ಸೇರಿದಂತೆ ಹಲವಾರು ಅಭಿನಂದನೆ ಸಲ್ಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!